ಕ್ರೀಡಾಪ್ರೋತ್ಸಾಹಕರಾದ ಜಗದೀಶ್ ಗೌಡ,ಲಕ್ಷ್ಮೀಕಾಂತ್ ಗೌಡ,ನಿತೀಶ್ ಗೌಡ ಇವರ ಆಯೋಜನೆಯಲ್ಲಿ ಮಾದನಾಯಕನಹಳ್ಳಿ ನಗರಸಭೆ ವ್ಯಾಪ್ತಿಯ ಆಟಗಾರರಿಗೆ ಡಿಸೆಂಬರ್ 18 ಮತ್ತು 19 ರಂದು ಮಾದನಾಯಕನಹಳ್ಳಿ ನಗರಸಭೆ ಚಾಂಪಿಯನ್ಸ್ ಲೀಗ್-2021 ಪಂದ್ಯಾವಳಿ ಆಯೋಜಿಸಲಾಗಿದೆ.
ಬೆಂಗಳೂರಿನ ಹನುಮಂತೇಗೌಡನಪಾಳ್ಯದ
ಶ್ರೀ ಮುನೇಶ್ವರ ಆಟದ ಮೈದಾನ(ಲೋಬೋ ಗ್ರೌಂಡ್)ದಲ್ಲಿ 1)ದೊಂಬರಹಳ್ಳಿ ಡಿ.ಸಿ.ಗೌಡ್ರು ಮಾಲೀಕತ್ವದ ಡಿ.ಸಿ.ಸೋಲ್ಜಿಯರ್ಸ್
2)ಮಾದನಾಯಕನಹಳ್ಳಿ ಜಿ.ಜೆ.ಮೂರ್ತಿಯವರ ಜಿ.ಜೆ.ಆರ್ಮಿ 3)ಹನುಮಂತಸಾಗರ ಮೋಹನ್ ಕುಮಾರ್ ಇವರ ಎಮ್.ಎಮ್.ಸೂಪರ್ ಕಿಂಗ್ಸ್ 4)ಬೈಲಪನಪಾಳ್ಯ ಮೋಹನ್.ಬಿ ಇವರ ಬೈಲಪನಪಾಳ್ಯ ಬುಲ್ಸ್ 5)ಚಿಕ್ಕಬಿದರಕಲ್ಲು ಆದರ್ಶ್ ಗೌಡ ಇವರ ಸಿ.ಬಿ.ಕೆ ಸ್ಟ್ರೈಕರ್ಸ್ 6)ಗಂಗೊಂಡನಹಳ್ಳಿ ರಘುನಾಥ್ ಇವರ ಆರ್.ಸಿ.ಜಿ 7)ಮಾದಾವರ ವಿಜಯ್ ಗೌಡರ ರೆಡ್ ಬುಲ್ಸ್ ಮಾದಾವರ 8)ತೋಟದಗುಡ್ಡದಹಳ್ಳಿ ಲೋಕೇಶ್ ಇವರ ರೈಸಿಂಗ್ ಸ್ಟಾರ್ಸ್ ಈ 8 ಪ್ರತಿಷ್ಠಿತ ಫ್ರಾಂಚೈಸಿಗಳ ರೋಚಕ ಹಣಾಹಣಿ ನಡೆಯಲಿದೆ.
ಪ್ರಥಮ ಬಹುಮಾನ 1.5 ಲಕ್ಷ,ದ್ವಿತೀಯ 80 ಸಾವಿರ,ತೃತೀಯ 45 ಸಾವಿರ ಮತ್ತು ಚತುರ್ಥ ಬಹುಮಾನ 25 ಸಾವಿರ ನಗದು ಬಹುಮಾನದ ಸಹಿತ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತಿದೆ.
ವೈಯಕ್ತಿಕ ಪ್ರಶಸ್ತಿ ರೂಪದಲ್ಲಿ ಟೂರ್ನಮೆಂಟ್ ನ ಉತ್ತಮ ಬ್ಯಾಟ್ಸ್‌ಮನ್ ಮತ್ತು ಉತ್ತಮ ಬೌಲರ್ ಗಳಿಗೆ ಸ್ಮಾರ್ಟ್ ವಾಚ್ ಮತ್ತು ಸರಣಿಶ್ರೇಷ್ಟ ಪ್ರಶಸ್ತಿ ರೂಪದಲ್ಲಿ ದುಬಾರಿ ಸೈಕಲ್ ಉಡುಗೊರೆಯಾಗಿ ನೀಡಲಾಗುತ್ತಿದೆ.
M.Sports ಯೂ ಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾವಳಿಯ ನೇರಪ್ರಸಾರ ಬಿತ್ತರಗೊಳ್ಳಲಿದೆ.