ಕ್ರಿಕೆಟ್ಬಿ.ಜಿ.ಸೂಪರ್ ಕಿಂಗ್ಸ್ ತಂಡಕ್ಕೆ ಬೀಡಿನಗುಡ್ಡೆ ಪ್ರೀಮಿಯರ್ ಲೀಗ್ B.P.L-2020 ಪ್ರಶಸ್ತಿಯ ಗರಿ

ಬಿ.ಜಿ.ಸೂಪರ್ ಕಿಂಗ್ಸ್ ತಂಡಕ್ಕೆ ಬೀಡಿನಗುಡ್ಡೆ ಪ್ರೀಮಿಯರ್ ಲೀಗ್ B.P.L-2020 ಪ್ರಶಸ್ತಿಯ ಗರಿ

-

- Advertisment -spot_img
ರವಿವಾರ ನವೆಂಬರ್ 22 ರಂದು ಉಡುಪಿಯ
ಬೀಡಿನಗುಡ್ಡೆ ಫ್ರೆಂಡ್ಸ್ (ಬಿ‌.ಜಿ ಫ್ರೆಂಡ್ಸ್) ತಂಡದ ವತಿಯಿಂದ ಬೀಡಿನಗುಡ್ಡೆ ಅಂಗಣದಲ್ಲಿ ಅಭ್ಯಾಸ ನಡೆಸುವ ಆಟಗಾರರಿಗಾಗಿ ಆಯೋಜಿಸಲಾಗಿದ್ದ 5 ನೇ ಆವೃತ್ತಿಯ”ಬೀಡಿನಗುಡ್ಡೆ ಪ್ರೀಮಿಯರ್ ಲೀಗ್ B.P.L-2020″ ಟ್ರೋಫಿಯನ್ನು ಬಿ.ಜಿ.ಸೂಪರ್ ಕಿಂಗ್ಸ್ ಜಯಿಸಿದೆ.
90 ರ ದಶಕದ ಹಿರಿಯ ಆಟಗಾರರು ಹಾಗೂ ಪ್ರಸ್ತುತ ರಾಜ್ಯ ಮಟ್ಟದಲ್ಲಿ ಮಿಂಚುತ್ತಿರುವ ಯುವ ಕ್ರಿಕೆಟಿಗರ ಸಮ್ಮಿಶ್ರಣದ 4 ತಂಡಗಳು ಭಾಗವಹಿಸಿದ್ದು,ರೋಚಕ ಹಣಾಹಣಿಗಳ ಬಳಿಕ ಫೈನಲ್ ನಲ್ಲಿ
ಬಿ.ಜಿ.ಸೂಪರ್ ಕಿಂಗ್ಸ್ ನ ಸಾಂಘಿಕ ಹೋರಾಟದ ಫಲವಾಗಿ ಎದುರಾಳಿ ಬಿ.ಜಿ‌.ಅಲೆವೂರು ಫೈಟರ್ಸ್ ತಂಡವನ್ನು ಸೋಲಿಸಿ ಆಕರ್ಷಕ ಟ್ರೋಫಿ ಸಹಿತ 55,555 ನಗದನ್ನು ತನ್ನದಾಗಿಸಿಕೊಂಡಿತು.ದ್ವಿತೀಯ ಸ್ಥಾನಿ ಬಿ‌.ಜಿ.ಅಲೆವೂರು ಫೈಟರ್ಸ್  33,333 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರು.

ವೈಯಕ್ತಿಕ ಬಹುಮಾನಗಳ ರೂಪದಲ್ಲಿ ಕ್ರಮವಾಗಿ ಫೈನಲ್ ನ ಪಂದ್ಯಶ್ರೇಷ್ಟ ಭರತ್,ಬೆಸ್ಟ್ ಬ್ಯಾಟ್ಸ್‌ಮನ್ ಜೀಶಾನ್,ಬೆಸ್ಟ್ ಬೌಲರ್ ಅರ್ಜುನ್,ಸರಣಿಶ್ರೇಷ್ಟ ಭರತ್,ಗೇಮ್ ಚೇಂಜರ್ ಅರ್ಜುನ್,ಎಮರ್ಜಿಂಗ್ ಪ್ಲೇಯರ್ ಪ್ರಸನ್ನ ಹಾಗೂ ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಕಿರಣ್ ಶೆಟ್ಟಿ ಪಡೆದುಕೊಂಡರು.

 

 

 

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಕ್ರಿಕೆಟಿಗರು ಹಾಗೂ ಬಿ‌.ಜಿ.ಫ್ರೆಂಡ್ಸ್ ನ ಗೌರವಾಧ್ಯಕ್ಷರು ಶ್ರೀ ಚಂದ್ರಹಾಸ ಅಡಿಗ,ಶ್ರೀ ವಾದಿರಾಜ ಆಚಾರ್ಯ ಹಾಗೂ ಕೊರೋನಾ ವಾರಿಯರ್ ಹಾಗೂ ಕ್ರೀಡಾಪಟು ನಾಗಾರ್ಜುನ ಪೂಜಾರಿಯವರನ್ನು‌ ಸನ್ಮಾನಿಸಲಾಯಿತು.ಈ ಸಂದರ್ಭ ನಗರಸಭೆಯ ಸದಸ್ಯರಾದ ಶ್ರೀ ರಮೇಶ್ ಕಾಂಚನ್,ಜಿತೇಂದ್ರ ಶೆಟ್ಟಿ, ಸಚಿನ್ ಅಜ್ಜರಕಾಡು,ಅರುಣ್ ಶೆಟ್ಟಿ, ಕೋಟ ರಾಮಕೃಷ್ಣ ಆಚಾರ್,ಪ್ರವೀಣ್ ಕುರ್ಕಾಲು,ಆಕಾಶ್ ರಾವ್,ಮಹಮ್ಮದ್ ಅಮೀರ್,ಹಿರಿಯ ಕ್ರಿಕೆಟಿಗರಾದ ಯಾದವ್ ನಾಯಕ್ ಉಪಸ್ಥಿತರಿದ್ದರು.
ವೀಕ್ಷಕ ವಿವರಣೆಕಾರರಾಗಿ ಹಿರಿಯ ವೀಕ್ಷಕ ವಿವರಣೆಕಾರ ವಿನಯ್ ಉದ್ಯಾವರ ಭಾಗವಹಿಸಿದರೆ,ಎ.ಕೆ‌.ಸ್ಪೋರ್ಟ್ಸ್ ನ ಹಮೀದ್ ಹಾಗೂ ಸಫ್ವಾನ್ ನಿರ್ಣಾಯಕರಾಗಿ ಭಾಗವಹಿಸಿದರು.
ಪಂದ್ಯಾವಳಿಯ ನೇರ ಪ್ರಸಾರ M9ಸ್ಪೋರ್ಟ್ಸ್ ಬಿತ್ತರಿಸಿದ್ದು,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಸಹಕರಿಸಿದರು…
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

7 − one =

Latest news

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...

ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ – ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ

  ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ - ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಭಾರತ...

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್ ಚಿತ್ರದುರ್ಗ: ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಕ್ರಿಕೆಟ್ ಮಹಾಕೂಟ ವಿಶ್ವಕರ್ಮ...
- Advertisement -spot_imgspot_img

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ!

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ! ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೇನ್...

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ ಕ್ರಿಕೆಟ್ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಐಸಿಸಿ ಮಹಿಳಾ ಟಿ-20 ವಿಶ್ವಕಪ್ 2026 ಟೂರ್ನಿಯು ಜೂನ್...

Must read

- Advertisement -spot_imgspot_img

You might also likeRELATED
Recommended to you