ಕ್ರಿಕೆಟ್ಎಂತೆಂಥವರಿಗೋ 2ನೇ ಅವಕಾಶ ಸಿಗುತ್ತದೆ ಎಂದರೆ, ಈ ಹುಡುಗನಿಗೆ ಏಕೆ ಸಿಗಬಾರದು..?

ಎಂತೆಂಥವರಿಗೋ 2ನೇ ಅವಕಾಶ ಸಿಗುತ್ತದೆ ಎಂದರೆ, ಈ ಹುಡುಗನಿಗೆ ಏಕೆ ಸಿಗಬಾರದು..?

-

- Advertisment -spot_img

ಎಂತೆಂಥವರಿಗೋ 2ನೇ ಅವಕಾಶ ಸಿಗುತ್ತದೆ ಎಂದರೆ, ಈ ಹುಡುಗನಿಗೆ ಏಕೆ ಸಿಗಬಾರದು..?

ಇಬ್ಬರು ಬಾಲ್ಯದ ಸ್ನೇಹಿತರು.. ಒಬ್ಬರನ್ನೊಬ್ಬರು ಮೀರಿಸುವಂತಿದ್ದ ಪ್ರತಿಭಾಸಂಪನ್ನರು.. ಆಟಕ್ಕೆ ನಿಂತರೆಂದರೆ ದಣಿವರಿಯದ ಆಟ.. ಇನ್ನೂ ಹದಿಹರೆಯ.. ಅಷ್ಟರಲ್ಲಾಗಲೇ ಇಬ್ಬರ ಹೆಸರಲ್ಲಿ ದಾಖಲಾಗಿತ್ತು 664 ರನ್’ಗಳ ಜೊತೆಯಾಟದ ವಿಶ್ವದಾಖಲೆ. ಇಬ್ಬರೂ ತ್ರಿಶತಕ ಸಿಡಿಸಿದ್ದರು ಶಾಲಾ ಟೂರ್ನಿಯ ಆ ಪಂದ್ಯದಲ್ಲಿ.

ಬೆಳೆದದ್ದು ಜೊತೆ ಜೊತೆಗೇ.. ಆಡಿದ್ದೂ ಜೊತೆ ಜೊತೆಗೇ.. ಶಾಲಾ ತಂಡದಿಂದ ಹಿಡಿದು ಭಾರತ ತಂಡದವರೆಗೆ ಜೊತೆ ಜೊತೆಗೇ ಪ್ರಯಾಣ.. 

ಸ್ನೇಹಿತರ ನಡುವೆ ಅವರ ಅರಿವಿಗೆ ಬಾರದಂತೆಯೇ ಸ್ಪರ್ಧೆ, ಪ್ರತಿಸ್ಪರ್ಧೆ ನಡೆಯುತ್ತಿತ್ತು.

ಇಬ್ಬರಲ್ಲಿ ಒಬ್ಬ ಶಿಸ್ತಿನ ಹುಡುಗ.. ಇನ್ನೊಬ್ಬ ದಾರಿ ತಪ್ಪಿದ ಹುಡುಗ.. ಆ ದಾರಿ ತಪ್ಪಿದ ಹುಡುಗನೇ ಬಾರಿಸಿದ್ದು ನಾಲ್ಕು ಶತಕ, ಅದರಲ್ಲಿ ಎರಡು ದ್ವಿಶತಕ.. ಮೊದಲ ಐದು ಟೆಸ್ಟ್ ಇನ್ನಿಂಗ್ಸ್’ಗಳಲ್ಲಿ ಎರಡು ದ್ವಿಶತಕ.. ವೃತ್ತಿಜೀವನದ ಕಟ್ಟ ಕಡೆಯ ಟೆಸ್ಟ್ ಪಂದ್ಯವಾಡುವ ಹೊತ್ತಿಗೆ ಅವನ ಬ್ಯಾಟಿಂಗ್ ಸರಾಸರಿ 54.20. 1993ರಲ್ಲಿ ಟೆಸ್ಟ್ ಕ್ರಿಕೆಟ್’ಗೆ ಕಾಲಿಟ್ಟವನು 1995ರಲ್ಲೇ ಕೊನೆಯ ಟೆಸ್ಟ್ ಪಂದ್ಯವಾಡಿ ಬಿಟ್ಟ.. 

ಮತ್ತೊಂದು ಕಡೆ ಅವನ ಬಾಲ್ಯ ಸ್ನೇಹಿತ.. ಶಿಸ್ತನ್ನೇ ಮೈಗೂಡಿಸಿಕೊಂಡಿದ್ದವನು, ಆಟವನ್ನೇ ದೇವರೆಂದವನು.. ಅಭಿಮಾನಿಗಳ ಕಣ್ಣಿಗೆ ಕ್ರಿಕೆಟ್ ದೇವರಾಗಿ ಬಿಟ್ಟ.. 

ಇದು ಮುಂಬೈನ ವಂಡರ್ ಬಾಯ್’ಗಳಾದ ವಿನೋದ್ ಕಾಂಬ್ಳಿ ಮತ್ತು ಸಚಿನ್ ತೆಂಡೂಲ್ಕರ್ ಕಥೆ.. ದಾರಿ ತಪ್ಪಿದ ಹುಡುಗ ಕಾಂಬ್ಳಿ ಚಿನ್ನದಂತಹ ಕ್ರಿಕೆಟ್ ಬದುಕಿಗೆ ತನ್ನ ಕೈಯಾರೆ ಕೊಳ್ಳಿ ಇಟ್ಟುಕೊಂಡರೆ, ಕ್ರಿಕೆಟ್ ಜಗತ್ತಿನ ಸಾಮ್ರಾಟನಾಗಿ ಬಿಟ್ಟ ಶಿಸ್ತಿನ ಹುಡುಗ ಸಚಿನ್. 

ಅವನು ಸರಿದಾರಿಯಲ್ಲಿ ನಡೆದಿದ್ದರೆ ಸಚಿನ್ ತೆಂಡೂಲ್ಕರ್ ಆಗುತ್ತಿದ್ದನೇನೋ… ಆದರೆ ಅವನು ಹೆಜ್ಜೆ ಇಟ್ಟದ್ದು ವಿನೋದ್ ಕಾಂಬ್ಳಿ ನಡೆದ ಹಾದಿಯಲ್ಲಿ..

ಕಾಕತಾಳೀಯ ಏನೆಂದರೆ ಅವನೂ ಕೂಡ ಮುಂಬೈ ಹುಡುಗ.. ಹೆಸರು ಪೃಥ್ವಿ ಶಾ. ಭಾರತಕ್ಕೆ ಅಂಡರ್-19 ವಿಶ್ವಕಪ್ ಗೆದ್ದು ಕೊಟ್ಟಿದ್ದ ನಾಯಕ, ಟೆಸ್ಟ್ ಪದಾರ್ಪಣೆಯಲ್ಲೇ ಶತಕ ಬಾರಿಸಿದ್ದ ಪ್ರತಿಭಾವಂತ.. ಇವನು ಬ್ರಯಾನ್ ಲಾರಾ, ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್’ರ ಮಿಶ್ರಣ ಅಂದಿದ್ದರು ರವಿ ಶಾಸ್ತ್ರಿ.. 

ಆದರೆ…

ಶಿಸ್ತನ್ನು ಎಡಗಾಲಲ್ಲಿ ಒದ್ದ ಹುಡುಗ ಅಶಿಸ್ತಿನ ಹಾದಿ ಹಿಡಿದ.. ನೀವು ಮಾಡುವ ಕೆಲಸವನ್ನು ನಿಯತ್ತಿನಿಂದ ಮಾಡಿದರೆ, ಕೆಲಸಕ್ಕೆ ಗೌರವ ಕೊಟ್ಟರೆ ಆ ಕೆಲಸ ನಿಮ್ಮನ್ನು ತಲೆಯ ಮೇಲೆ ಹೊತ್ತು ಮೆರೆಸುತ್ತದೆ. ಪೃಥ್ವಿ ಶಾ ಎಡವಿದ್ದು ಇಲ್ಲೇ.. 

18ನೇ ವರ್ಷಕ್ಕೇ ತಲೆಯಲ್ಲಿ ವಿಶ್ವಕಪ್ ಕಿರೀಟ.. ಪದಾರ್ಪಣೆಯ ಟೆಸ್ಟ್ ಪಂದ್ಯದಲ್ಲೇ ಶತಕದ ಹಿರಿಮೆ.. ಕೈತುಂಬಾ ದುಡ್ಡು, ಅದೂ ಕೋಟಿಗಳ ಲೆಕ್ಕದಲ್ಲಿ.. ಹುಡುಗನ ತಲೆ ನಿಲ್ಲಲಿಲ್ಲ.. ಸ್ವೇಚ್ಛಾಚಾರಕ್ಕೆ ಬಿದ್ದ.. ಆಟದ ಮೇಲೆ ಬದ್ಧತೆ ಇಲ್ಲದೇ ಹೋಯಿತು.. ಶಿಸ್ತು, ಬದ್ಧತೆ ಇಲ್ಲದ ಕಾರಣಕ್ಕೆ ಎಂತೆಂಥವರನ್ನೋ ಹೇಳ ಹೆಸರಿಲ್ಲದಂತೆ ಹೊಸ ಹಾಕಿರುವ ಆಟವಿದು.. ಇನ್ನು ಈ ಎಳಸು ಯಾವ ಲೆಕ್ಕ..? ಅದೇ ಆಟ ಅವನನ್ನು ಎಡಗಾಲಿನಿಂದ ಒದ್ದು ಬಿಟ್ಟಿತು. ಹುಡುಗ ಪ್ರಪಾತಕ್ಕೆ ಬಿದ್ದು ಬಿಟ್ಟ.

ಹೌದು.. ರವಿ ಶಾಸ್ತ್ರಿಯವರು ಹೇಳಿದ್ದು ನಿಜ.. ಸಚಿನ್-ಸೆಹ್ವಾಗ್ ಪಡಿಯಚ್ಚಿನಂತಿದ್ದ ಹುಡುಗ ಪೃಥ್ವಿ ಶಾ.. 

ಎಲ್ಲಾ ಹುಡುಗರಂತಿರಲಿಲ್ಲ ಅವನ ಬಾಲ್ಯ.. ಬುದ್ಧಿ ಬೆಳೆಯುವ ಮುನ್ನವೇ ತಾಯಿಯನ್ನು ಕಳೆದುಕೊಂಡಿದ್ದ. ತಾಯಿ ಇಲ್ಲವಾದಾಗ ಪೃಥ್ವಿ ಶಾ ವಯಸ್ಸು ಕೇವಲ ಎರಡೂವರೆ ವರ್ಷ. ತಾಯಿ ಇಲ್ಲದ ಪೃಥ್ವಿಗೆ ಭೂಮಿಯಂಥಾ ಅಪ್ಪ ಪಂಕಜ್ ಶಾ.

2018ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದಾಗ ಪೃಥ್ವಿಯನ್ನು ಮಾತನಾಡಿಸಿದ್ದೆ. ತಾಯಿಯ ಬಗ್ಗೆ ಕೇಳಿದಾಗ ಆತ ಒಂದೇ ಮಾತು ಹೇಳಿದ್ದ.. 

‘‘ಸರ್, ತಾಯಿಯನ್ನು ನೋಡಿದ ನೆನಪೇ ಇಲ್ಲ ನನಗೆ. ದೇವರು ಶಾಶ್ವತವಾಗಿ ಆ ನೆನಪೇ ಇಲ್ಲದಂತೆ ಮಾಡಿ ಬಿಟ್ಟ. ತಂದೆಯೇ ತಾಯಿ ಸ್ಥಾನದಲ್ಲಿ ನಿಂತು ನನ್ನನ್ನು ಸಾಕಿ ಸಲಹಿದ್ದಾರೆ. ನಾನು ದೊಡ್ಡ ಕ್ರಿಕೆಟಿಗನಾಗಬೇಕೆಂಬುದು ಅವರ ಕನಸು. ಸಣ್ಣ ಗಾರ್ಮೆಂಟ್ಸ್‌ ಉದ್ಯಮವೊಂದನ್ನು ನಡೆಸುತ್ತಿದ್ದ ತಂದೆ, ನನ್ನ ಕ್ರಿಕೆಟ್‌ಗಾಗಿ ಕೆಲಸವನ್ನೇ ಬಿಟ್ಟಿದ್ದಾರೆ. ಪ್ರತಿ ಕ್ಷಣವೂ ನನ್ನ ಜತೆ ಇರುವ ತಂದೆ ನನಗಾಗಿ ದೊಡ್ಡ ತ್ಯಾಗ ಮಾಡಿದ್ದಾರೆ. ಅವರ ಕನಸು ನಾನು ಭಾರತ ಪರ ದೀರ್ಘಕಾಲ ಆಡಬೇಕೆಂಬುದು.. ಆಡಿಯೇ ಆಡುತ್ತೇನೆ” ಎಂದಿದ್ದ. 

ಪೃಥ್ವಿ ಶಾನಲ್ಲಿ ಎಲ್ಲವೂ ಇತ್ತು, ಶಿಸ್ತು ಒಂದನ್ನು ಬಿಟ್ಟು..! ಅವನ ಜೀವನಕ್ಕೆ ಅವನೇ ಹೀರೋ, ಅವನೇ ಖಳನಾಯಕ.. ಸಣ್ಣ ವಯಸ್ಸಲ್ಲೇ ಹೆಸರು ತಂದು ಕೊಟ್ಟ ಕ್ರಿಕೆಟ್ ಝಾಡಿಸಿ ಒದೆಯಿತು ನೋಡಿ.. ಕ್ರಿಕೆಟ್ ಅಖಾಡದಲ್ಲಿ ಅನಾಥನಾಗಿ ಬಿಟ್ಟ. ಕಾರಣ, ಅವನೇ.. ಅವನಿಗೆ ತನ್ನ ಶಕ್ತಿ ಮತ್ತು ದೌರ್ಬಲ್ಯಗಳ ಮೇಲೆ ನಿಯಂತ್ರಣವಿಲ್ಲ.. 

ಪೃಥ್ವಿ ಶಾ ಮುಂಬಯಿಯ ಹೊರವಲಯದ ವಿರಾರ್’ನವನು. ‌ಕೆಳ ಮಧ್ಯಮ ವರ್ಗದ ಕುಟುಂಬ. ಕ್ರಿಕೆಟಿಗನಾಗಬೇಕೆಂಬ ಕನಸು ಮೊಳಕೆಯೊಡೆಯುವ ಮುನ್ನವೇ ಪೃಥ್ವಿ ತಾಯಿಯನ್ನು ಕಳೆದುಕೊಂಡಿದ್ದ. 10 ವರ್ಷ ತುಂಬುವ ಮೊದಲೇ ಉತ್ತರ ಮುಂಬಯಿನಿಂದ 65 ಕಿ.ಮೀ ದೂರದಲ್ಲಿರುವ ವಿರಾರ್‌ ಎಂಬ ನಗರದಿಂದ ಅಭ್ಯಾಸಕ್ಕಾಗಿ ಬಾಂದ್ರಾಗೆ ಪ್ರತಿ ದಿನ ತಂದೆಯೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ತುಂಬಾ ಕಷ್ಟ ಪಟ್ಟು ಮೇಲೆ ಬಂದಿದ್ದ ಹುಡುಗ. 

ಆಡಿದ ಮೊದಲ ರಣಜಿ ಪಂದ್ಯದಲ್ಲೇ ಶತಕ..

ಮೊದಲ ದುಲೀಪ್ ಟ್ರೋಫಿ ಪಂದ್ಯದಲ್ಲಿ ಶತಕ..

ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ..

ಅವನ ಅಧಃಪತನಕ್ಕೆ ಕಾರಣವಾದ ಸ್ವಯಂಕೃತ ಪ್ರಮಾದಗಳ ಮಧ್ಯೆಯೂ ಪ್ರತಿಭಾಸಂಪನ್ನ ಪೃಥ್ವಿ ಶಾಗೆ ಕ್ರಿಕೆಟ್ ಬದುಕಲ್ಲಿ ಎರಡನೇ ಅವಕಾಶ ಸಿಗಲೇಬೇಕು. ಆ ಅವಕಾಶ ಸಿಗುವ ಸೂಚನೆ ಸಿಕ್ಕಿದೆ. ನಿನ್ನೆ ನಡೆದ ಐಪಿಎಲ್ ಹರಾಜಿನಲ್ಲಿ 75 ಲಕ್ಷ ಮೂಲ ಬೆಲೆ ಹೊಂದಿದ್ದ ಪೃಥ್ವಿ ಎರಡು ಬಾರಿ unsold ಆಗಿದ್ದ. ಅಷ್ಟು ಹೊತ್ತಿಗಾಗಲೇ ಅವನಿಗೆ ಅರ್ಥವಾಗಿತ್ತು, ‘ನಾನು ಯಾರಿಗೂ ಬೇಡವಾಗಿದ್ದೇನೆ’ ಎಂದು. ಐಪಿಎಲ್ ಹರಾಜು ನೋಡುತ್ತಿದ್ದ.. ಫೋನ್ ಕೈಗೆತ್ತಿಕೊಂಡವನೇ ‘Its ok’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ. 

ಇದಾದ ಕೆಲವೇ ನಿಮಿಷಗಳಲ್ಲಿ ಅವನ ಕಣ್ಣುಗಳನ್ನೇ ನಂಬಲಾಗದ ಘಟನೆ ನಡೆದು ಬಿಟ್ಟಿತ್ತು. ಪೃಥ್ವಿ ಶಾನನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 75 ಲಕ್ಷ ರೂಪಾಯಿಗೆ ಖರೀದಿಸಿತ್ತು. 

ಪೃಥ್ವಿ ಶಾ ಬದುಕಲ್ಲಿ ಆಗಿದ್ದೆಲ್ಲದಕ್ಕೂ ಅವನೇ ಕಾರಣ.. ಅವನ ಅಧಃಪತನಕ್ಕೆ ಅವನದ್ದೇ ಪ್ರಮಾದಗಳೇ ಕಾರಣ.. ಆ ತಪ್ಪುಗಳಿಂದ ಅವನು ನಿಜಕ್ಕೂ ಪಾಠ ಕಲಿತದ್ದೇ ಹೌದಾದರೆ, ಅವನಿಗೆ ಕ್ರಿಕೆಟ್ ಇನ್ನೊಂದು ಅವಕಾಶ ಕೊಟ್ಟೇ ಕೊಡುತ್ತದೆ.

 

-ಸುದರ್ಶನ್

LEAVE A REPLY

Please enter your comment!
Please enter your name here

eleven + sixteen =

Latest news

ಫ್ರೆಂಡ್ಸ್ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ

ಫ್ರೆಂಡ್ಸ್ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ ಯುವ...

ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!

ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!   2026ರ ಐಪಿಎಲ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 92 ರನ್‌ಗಳಿಂದ ಮಣಿಸಿದ ರಾಯಲ್...

20 ಲಕ್ಷದ ಆಟಗಾರ… ಇಂದು ಆರ್‌ಸಿಬಿಯ ಅಮೂಲ್ಯ ರತ್ನ!

20 ಲಕ್ಷದ ಆಟಗಾರ… ಇಂದು ಆರ್‌ಸಿಬಿಯ ಅಮೂಲ್ಯ ರತ್ನ! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇತಿಹಾಸದಲ್ಲಿ ಕೆಲವು ಆಟಗಾರರು ಕೇವಲ ಕ್ರಿಕೆಟಿಗರಾಗಿ ಮಾತ್ರ ಉಳಿಯುವುದಿಲ್ಲ; ಅವರು ಭಾವನೆಗಳಾಗುತ್ತಾರೆ....

RCBvsGT: ಫೈನಲ್‌ಗೆ ಯಾರು ಮುನ್ನಡೆಯುತ್ತಾರೆ… ಪ್ಲೇ-ಆಫ್ ಸುತ್ತನ್ನು ಗೆಲ್ಲುವ ಹೆಚ್ಚಿನ ಅವಕಾಶ ಯಾರಿಗೆ ಇದೆ?

  RCBvsGT: ಫೈನಲ್‌ಗೆ ಯಾರು ಮುನ್ನಡೆಯುತ್ತಾರೆ... ಪ್ಲೇ-ಆಫ್ ಸುತ್ತನ್ನು ಗೆಲ್ಲುವ ಹೆಚ್ಚಿನ ಅವಕಾಶ ಯಾರಿಗೆ ಇದೆ? ಈ ಋತುವಿನ ಐಪಿಎಲ್‌ನ ಮೊದಲ ಅರ್ಹತಾ ಸುತ್ತಿನಲ್ಲಿ ಬೆಂಗಳೂರು ಮತ್ತು ಗುಜರಾತ್...
- Advertisement -spot_imgspot_img

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ ಕರ್ನಾಟಕದ ಮಾಜಿ ಕ್ರಿಕೆಟಿಗ ಹಾಗೂ ಪ್ರತಿಭಾವಂತ ವೇಗದ ಬೌಲರ್ ಎಸ್.ಎಲ್. ಅಕ್ಷಯ್ ಅವರು ಭಾನುವಾರ ಲೀಗ್ ಪಂದ್ಯವೊಂದರ...

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್ ಅರಸೀಕೆರೆಯ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಕ್ರೀಡಾ ರಸದೌತಣ ನೀಡಲು “ಅರಸೀಕೆರೆ ಚಾಂಪಿಯನ್ಸ್...

Must read

- Advertisement -spot_imgspot_img

You might also likeRELATED
Recommended to you