
ಸ್ಪೋರ್ಟಿವ್ ಕ್ರಿಕೆಟರ್ಸ್ ಉಡುಪಿಯ ಮಾಜಿ ಆಟಗಾರ ಸುಂದರ್ ಕೋಟ್ಯಾನ್ ಅವರಿಗೆ ಅಂತಿಮ ನಮನ
ಉಡುಪಿ, ನ. 28 – ಉಡುಪಿಯ ಜನಪ್ರಿಯ ಕ್ರಿಕೆಟ್ ಸಂಸ್ಥೆ ಸ್ಪೋರ್ಟಿವ್ ಕ್ರಿಕೆಟರ್ಸ್ ಪರವಾಗಿ ಅನೇಕ ವರ್ಷಗಳ ಕಾಲ ಕ್ರಿಕೆಟ್ ಕ್ಷೇತ್ರದಲ್ಲಿ ತಮ್ಮ ಕ್ರೀಡಾ ಸಾಮರ್ಥ್ಯವನ್ನು ತೋರಿದ ಖ್ಯಾತ ಕ್ರಿಕೆಟಿಗ ಸುಂದರ್ ಕೋಟ್ಯಾನ್ ಅವರು ಇಂದು ಬೆಳಗ್ಗಿನ ಜಾವ ಅಕಾಲಿಕವಾಗಿ ನಿಧನರಾಗಿದ್ದಾರೆ.

ಸುಂದರ್ ರಾಜ್ ಅವರು ಉಡುಪಿ ಎಂಜಿಎಮ್ ಕಾಲೇಜು ಕ್ರಿಕೆಟ್ ತಂಡದ ನಾಯಕರಾಗಿದ್ದು, ಸ್ಟೈಲಿಶ್ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದರು. 1976ರಿಂದ 1978ರ ಅವಧಿಯಲ್ಲಿ, ಅವರ ನಾಯಕತ್ವದಲ್ಲಿ ತಂಡವು ಕರಾವಳಿ ವಲಯದಲ್ಲಿ ಎರಡೂ ಬಾರಿ ಪ್ರಶಸ್ತಿ ಗೆದ್ದು, ಮೈಸೂರು ವಿಶ್ವವಿದ್ಯಾಲಯ ಅಂತರ ವಲಯ ಕ್ರಿಕೆಟ್‌ನಲ್ಲಿ ಎರಡೂ ಬಾರಿ ರನ್ನರ್ ಅಪ್ ಆಗುವ ಸಾಧನೆ ದಾಖಲಿಸಿತ್ತು.

ಕ್ರಿಕೆಟ್ ಮೇಲಿನ ಪ್ರೀತಿ, ಶ್ರದ್ಧೆ ಹಾಗೂ ಸಮರ್ಪಣೆಗಳಿಂದ ಸುಂದರ್ ಕೋಟ್ಯಾನ್ ಅವರು ತಂಡದ ಪ್ರಮುಖ ಆಟಗಾರರಾಗಿ ಹೆಸರು ಗಳಿಸಿದ್ದರು. ಯುವ ಕ್ರೀಡಾಪಟುಗಳಿಗೆ ಅವರು ನೀಡಿದ ಪ್ರೋತ್ಸಾಹವು ಅನೇಕರ ಮನಗೆದ್ದಿತ್ತು. ಅವರ ಅಗಲಿಕೆಯಿಂದ ಉಡುಪಿ ಕ್ರೀಡಾ ರಂಗವೇ ದುಃಖಿತರಾಗಿದೆ.
ಸುಂದರ್ ಕೋಟ್ಯಾನ್ ಅವರ ನಿಧನವು ಕುಟುಂಬದವರಿಗೆ, ಸ್ನೇಹಿತರಿಗೆ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಭರಿಸಲಾಗದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸ್ಪೋರ್ಟ್ಸ್ ಕನ್ನಡ ಪ್ರಾರ್ಥಿಸುತ್ತಿದೆ.




