15.7 C
London
Tuesday, September 10, 2024
Homeಕ್ರಿಕೆಟ್24 ವರ್ಷ.. 4 ವಿಶ್ವಕಪ್.. ಒಟ್ಟು 14 ಟ್ರೋಫಿಗಳು.. ಯುವರಾಜನಿಗೆ ಯುವರಾಜನೇ ಸಾಟಿ

24 ವರ್ಷ.. 4 ವಿಶ್ವಕಪ್.. ಒಟ್ಟು 14 ಟ್ರೋಫಿಗಳು.. ಯುವರಾಜನಿಗೆ ಯುವರಾಜನೇ ಸಾಟಿ

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ವಿಶ್ವಕಪ್ ಎಂದರೆ ನೆನಪಿಗೆ ಬರುವುದು ಪಂಜಾಬ್’ನ ಸಿಕ್ಸರ್ ಸರ್ದಾರ ಯುವರಾಜ್ ಸಿಂಗ್. ಆತ ಕೇವಲ ಕ್ರಿಕೆಟ್ ಆಟಗಾರನಲ್ಲ, ಭಾರತದ ವಿಶ್ವಕಪ್ ಗೆಲುವುಗಳ ವಿಜಯಶಿಲ್ಪಿ. ಯುವರಾಜನಂತಹ ಮತ್ತೊಬ್ಬ ವಿಶ್ವಕಪ್ ಹೀರೋ ಭಾರತಕ್ಕೆ ಸಿಗಲು ಸಾಧ್ಯವಿಲ್ಲ.
ಯುವರಾಜ್ ಸಿಂಗ್ ಇಲ್ಲಿಯವರೆಗೆ ಒಟ್ಟು 4 ವಿಶ್ವಕಪ್’ಗಳನ್ನು ಗೆದ್ದಿದ್ದಾರೆ. ಐಸಿಸಿ ಅಂಡರ್-15 ವಿಶ್ವಕಪ್, ಐಸಿಸಿ ಅಂಡರ್-19 ವಿಶ್ವಕಪ್, ಐಸಿಸಿ ಟಿ20 ವಿಶ್ವಕಪ್ ಮತ್ತು ಐಸಿಸಿ ಏಕದಿನ ವಿಶ್ವಕಪ್. ಅದರಲ್ಲೂ 2000ನೇ ಇಸವಿಯಲ್ಲಿ ನಡೆದನ ಅಂಡರ್-19 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾರತಕ್ಕೆ ಕಪ್ ಗೆಲ್ಲಿಸಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದವರು ಯುವರಾಜ್ ಸಿಂಗ್.
ಇನ್ನು 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್’ನಲ್ಲಿ ಯುವರಾಜ ಆಡಿದ ಆಟವನ್ನು ಯಾರು ಮರೆಯಲು ಸಾಧ್ಯ? ಇಂಗ್ಲೆಂಡ್ ವಿರುದ್ಧ ಒಂದೇ ಓವರ್’ನಲ್ಲಿ ಬಾರಿಸಿದ ಆ ಆರು ಸಿಕ್ಸರ್’ಗಳು.. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಬಾರಿಸಿದ ಆ ವಿಧ್ವಂಸಕ 70 ರನ್.. ಅಬ್ಬಾ.. ನೆನಪಿಸಿಕೊಂಡರೆ ಈಗಲೂ ಮೈ ರೋಮಾಂಚನಗೊಳ್ಳುತ್ತದೆ.
ಯುವರಾಜ್ ಸಿಂಗ್ ವೈಟ್ ಬಾಲ್ ಕ್ರಿಕೆಟ್’ನಲ್ಲಿ ಭಾರತ ತಂಡ ಶ್ರೇಷ್ಠ ಮ್ಯಾಚ್ ವಿನ್ನರ್. ರೆಡ್ ಬಾಲ್’ನಲ್ಲಿ ಯುವಿಗೆ ಅಷ್ಟೇನೂ ಯಶಸ್ಸು ಸಿಕ್ಕಿಲ್ಲ. ಆದರೆ ಬಿಳಿ ಬಣ್ಣದ ಚೆಂಡಿನ ಕ್ರಿಕೆಟ್’ನಲ್ಲಿ ಯುವರಾಜ ನಿಜಕ್ಕೂ ರಾಕ್ಷಸ ಆಟಗಾರ. ಭಾರತದಲ್ಲೇ ನಡೆದ 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 15 ವಿಕೆಟ್ ಹಾಗೂ 362 ರನ್’ಗಳೊಂದಿಗೆ ಅತ್ಯಮೋಘ ಆಲ್ರೌಂಡ್ ಪ್ರದರ್ಶನ ತೋರಿ ಭಾರತಕ್ಕೆ 28 ವರ್ಷಗಳ ನಂತರ ಏಕದಿನ ವಿಶ್ವಕಪ್ ಗೆದ್ದು ಕೊಟ್ಟವರು ಯುವರಾಜ್ ಸಿಂಗ್.
ಇಂಥಾ ಯುವರಾಜ್ ಸಿಂಗ್ ಇದೀಗ ಕ್ರಿಕೆಟ್ ಜಗತ್ತಿನಲ್ಲಿ ಯಾರೂ ಮಾಡಲಾಗದ ಸಾಧನೆಯೊಂದನ್ನು ಮಾಡಿದ್ದಾರೆ. ಆಡಿದ ದೊಡ್ಡ ದೊಡ್ಡ ಟೂರ್ನಿಗಳಲ್ಲಿ ಯುವರಾಜ್ ಸಿಂಗ್ ಪ್ರತಿನಿಧಿಸಿದ ತಂಡಗಳು ಚಾಂಪಿಯನ್ ಪಟ್ಟಕ್ಕೇರಿವೆ.
ಮೊದಲು ಅಂಡರ್-15 ವಿಶ್ವಕಪ್, ನಂತರ ಅಂಡರ್-19 ವಿಶ್ವಕಪ್, 2000ನೇ ಇಸವಿಯಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2007ರಲ್ಲಿ ಐಸಿಸಿ ಟಿ20 ವಿಶ್ವಕಪ್, 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್, ಏಷ್ಯಾ ಕಪ್, ಎರಡು ಬಾರಿ ಐಪಿಎಲ್ ಕಿರೀಟ (ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್), ದೇಶೀಯ ಕ್ರಿಕೆಟ್’ನಲ್ಲಿ ದುಲೀಪ್ ಟ್ರೋಫಿ, ಎನ್.ಪಿ.ಕೆ ಸಾಳ್ವೆ ಚಾಲೆಂಜರ್ಸ್ ಟ್ರೋಫಿ, ಇರಾನಿ ಕಪ್, ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ನಂತರ ಟಿ10 ಲೀಗ್, ರೋಡ್ ಸೇಫ್ಟಿ ಟ್ರೋಫಿ, ಈಗ ವರ್ಲ್ಡ್ ಚಾಂಪಿಯನ್’ಷಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಪ್ರತಿನಿಧಿಸಿದ ತಂಡ ಚಾಂಪಿಯನ್ ಆಗಿದೆ.
ಇಂಗ್ಲೆಂಡ್’ನಲ್ಲಿ ನಡೆದ  ವರ್ಲ್ಡ್ ಚಾಂಪಿಯನ್’ಷಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಚಾಂಪಿಯನ್ಸ್ ತಂಡ ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದೆ. ವಿಶೇಷ ಏನೆಂದರೆ ಭಾರತ ಚಾಂಪಿಯನ್ಸ್ ತಂಡದ ನಾಯಕತ್ವ ವಹಿಸಿ ತಂಡವನ್ನು ಚಾಂಪಿಯನ್ ಪಟ್ಟದತ್ತ ಮುನ್ನಡೆಸಿದವರು ಚಾಂಪಿಯನ್ ಆಟಗಾರ ಯುವರಾಜ್ ಸಿಂಗ್.
ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 4 ವಿಶ್ವಕಪ್’ಗಳು ಸೇರಿ ಒಟ್ಟು ಆರು ಟ್ರೋಫಿಗಳು, ದೇಶೀಯ ಕ್ರಿಕೆಟ್’ನಲ್ಲಿ 3 ಟ್ರೋಫಿ, ಐಪಿಎಲ್’ನಲ್ಲಿ 2 ಟ್ರೋಫಿ, ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ನಂತರ ಟಿ10 ಲೀಗ್, ರೋಡ್ ಸೇಫ್ಟಿ ಸೀರಿಸ್ ಮತ್ತು ಈಗ ವರ್ಲ್ಡ್ ಚಾಂಪಿಯನ್’ಷಿಪ್ ಆಫ್ ಲೆಜೆಂಡ್ಸ್ ಚಾಂಪಿಯನ್ ಪಟ್ಟ. ಹೀಗೆ ಆಡಿರುವ ಪ್ರಮುಖ 14 ಟೂರ್ನಿಗಳಲ್ಲಿ ಯುವರಾಜ್ ಸಿಂಗ್ ಪ್ರತಿನಿಧಿಸಿದ ತಂಡಗಳು ಚಾಂಪಿಯನ್ ಪಟ್ಟಕ್ಕೇರಿವೆ.
ಯುವರಾಜನಿಗೆ ಯುವರಾಜನೇ ಸಾಟಿ!
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

1 × 3 =