ಕ್ರಿಕೆಟ್ಮೈಕ್ ಹಿಡಿದು ಕೂತ ಕಾಮೆಂಟೇಟರ್ ಹೇಳಿಕೆಯಿಂದ ಜೀವನ ಬದಲಾಗದು-ರೋಹಿತ್ ಶರ್ಮಾ

ಮೈಕ್ ಹಿಡಿದು ಕೂತ ಕಾಮೆಂಟೇಟರ್ ಹೇಳಿಕೆಯಿಂದ ಜೀವನ ಬದಲಾಗದು-ರೋಹಿತ್ ಶರ್ಮಾ

-

- Advertisment -spot_img

ಮೈಕ್ ಹಿಡಿದು ಕೂತ ಕಾಮೆಂಟೇಟರ್ ಹೇಳಿಕೆಯಿಂದ ಜೀವನ ಬದಲಾಗದು-ರೋಹಿತ್ ಶರ್ಮಾ

‘’ಮೈಕ್ ಹಿಡಿದು ಕೂತ ಕಾಮೆಂಟೇಟರ್ ಏನು ಹೇಳುತ್ತಾನೆ ಎಂಬುದರಿಂದ ನನ್ನ ಜೀವನ ಬದಲಾಗದು. ಅಥವಾ ಲ್ಯಾಪ್ ಟ್ಯಾಪ್ ಮುಂದೆ ಕೂತ, ಪೆನ್ ಹಿಡಿದ ಪತ್ರಕರ್ತನ ಅಭಿಪ್ರಾಯದಿಂದಲೂ ನನ್ನಲ್ಲೇನೂ ಬದಲಾವಣೆಯಾಗದು. ನಾವು ಯಾವಾಗ ನಿವೃತ್ತಿಯಾಗಬೇಕು, ಯಾವಾಗ ಹೊರಗೆ ಕೂರಬೇಕು, ಯಾವಾಗ ನಾಯಕತ್ವ ವಹಿಸಬೇಕು ಎಂಬುದನ್ನು ಅವರು ನಿರ್ಧರಿಸಲು ಸಾಧ್ಯವಿಲ್ಲ. ನಾನು ಸೂಕ್ಷ್ಮತೆ ಇರುವ ಪ್ರಬುದ್ಧ ಮನುಷ್ಯ, ಎರಡು ಮಕ್ಕಳ ತಂದೆ, ನನಗೂ ಬುದ್ಧಿಯಿದೆ’’.

ರೋಹಿತ್ ಶರ್ಮಾ ಆಡಿರುವ ಮಾತುಗಳಿವು.

ಹೌದು.. ‘ಮೈಕ್ ಹಿಡಿದವರಾಗಲೀ, ಲ್ಯಾಪ್ ಟಾಪ್ ಮುಂದೆ ಕೂತವರಾಗಲೀ, ಪೆನ್ ಹಿಡಿದವರಾಗಲೀ ನಿಮ್ಮ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ ರೋಹಿತ್ ಶರ್ಮಾ ಅವರೇ.. ನೀವು ಎರಡು ಮಕ್ಕಳ ತಂದೆ ಎಂಬುದು ಎಷ್ಟು ಸತ್ಯವೋ, ಭಾರತ ಟೆಸ್ಟ್ ತಂಡಕ್ಕೆ ನೀವು ಎಲ್ಲಾ ರೀತಿಯಿಂದಲೂ ಹೊರೆಯಾಗಿದ್ದೀರಿ ಎಂಬುದೂ ಅಷ್ಟೇ ಸತ್ಯ ಮತ್ತು ಅದೇ ಸತ್ಯ. ಆ ಸತ್ಯ ಹೇಳಿದವರ ವಿರುದ್ಧ ಉರಿದು ಬಿದ್ದಿದ್ದೀರಿ. ಆಡುವುದು ನಿಮ್ಮ ಕೆಲಸ.. ಮಾತನಾಡುವುದು, ಬರೆಯುವುದು ಅವರ ಕೆಲಸ.

ಅಂದ ಹಾಗೆ, ನೀವು ಚೆನ್ನಾಗಿ ಆಡಿದಾಗ ನಿಮ್ಮನ್ನು ಹೊಗಳಿದಾಗಲೂ ಈ ಮಾತು ಆಡಿದ್ದೀರಾ..? ನಿಮ್ಮ ಅಭಿಪ್ರಾಯಗಳಿಂದ, ನಿಮ್ಮ ಅಕ್ಷರಗಳಿಂದ ನಮ್ಮಲ್ಲೇನೂ ಬದಲಾವಣೆಯಾಗದು ಎಂದಿದ್ದೀರಿ. ಹೊಗಳಿಕೆಯನ್ನು ಆನಂದಿಸುವವರು ಟೀಕೆಗಳನ್ನು ಸ್ವೀಕರಿಸಲೂ ಸಿದ್ಧರಿರಬೇಕು. ಮಾತನಾಡುವುದು ಮೈಕ್ ಹಿಡಿದವರ ಕೆಲಸ, ಬರೆಯುವುದೇ ಪೆನ್ ಹಿಡಿದವರ ಕಾಯಕ. ನೀವು ಜವಾಬ್ದಾರಿಯಿಂದ ಆಡಿದ್ದರೆ, ಅವರೇಕೆ ಮಾತನಾಡುತ್ತಿದ್ದರು..? ಅವರೇಕೆ ಬರೆಯುತ್ತಿದ್ದರು..?

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತ ಸೋತ ನಂತರ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಆಡಿರುವ ಮಾತೊಂದನ್ನು ಕೇಳಿ.

ಪ್ರಶ್ನೆ: ಭಾರತ ತಂಡ ಹೆಚ್ಚು ಹೆಚ್ಚು ಅಭ್ಯಾಸ ಪಂದ್ಯಗಳನ್ನಾಡುವ ಮೂಲಕ ವಿದೇಶ ಪ್ರವಾಸಗಳಿಗೆ ತಯಾರಿ ನಡೆಸಬೇಕೆ..?
ಗವಾಸ್ಕರ್: ಈ ಪ್ರಶ್ನೆ ಉತ್ತರಿಸಲು ನಾವು ಯಾರು..? ನಮಗೆ ಕ್ರಿಕೆಟ್ ಬಗ್ಗೆ ಗೊತ್ತಿಲ್ಲ. ನಾವು ಕೇವಲ ಟಿವಿಗಾಗಿ ಮಾತನಾಡಿ ದುಡ್ಡು ಸಂಪಾದಿಸುವವರು. ನಮ್ಮ ಮಾತನ್ನು ಕೇಳಬೇಡಿ ಒಂದೊಮ್ಮೆ ಕೇಳಿಸಿಕೊಂಡರೂ, ಮತ್ತೊಂದು ಕಿವಿಯಿಂದ ಅದನ್ನು ಬಿಟ್ಟು ಬಿಡಿ.

ರೋಹಿತ್ ಶರ್ಮಾ ಆಡಿರುವ ಮಾತಿನ ನಂತರ ಸುನೀಲ್ ಗವಾಸ್ಕರ್ ಈ ಮಾತುಗಳನ್ನು ಹೇಳಿದ್ದಾರೆ.

ಇನ್ನು ರೋಹಿತ್ ಶರ್ಮಾ ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿದ ವಿಚಾರ. ಅದೇ ಮಹಾ ತ್ಯಾಗ ಎಂಬಂತೆ ಕೆಲ ಸಿನಿಮಾ ನಟ-ನಟಿಯರು ಟ್ವೀಟ್ ಮಾಡಿದ್ದಾರೆ. ಎಲ್ಲಿದ್ದರು ಇವರೆಲ್ಲಾ..? ಈಗ ಯಾಕೆ ಬಂದರು..? ಉತ್ತರ ತುಂಬಾ ಸರಳ. ಇದು PR management. ರೋಹಿತ್ ಶರ್ಮಾನ ಪತ್ನಿ ರಿತಿಕಾ ಸಜ್’ದೇ cornerstone ಎಂಬ ಸೆಲೆಬ್ರಿಟಿ ಮ್ಯಾನೇಜ್ಮೆಂಟ್ ಕಂಪನಿಯನ್ನು ನಡೆಸುತ್ತಿದ್ದಾರೆೆ. ರೋಹಿತ್ ಶರ್ಮಾ ಬಗ್ಗೆ ಟ್ವೀಟ್ ಮಾಡುತ್ತಿರುವ ಬಹುತೇಕ ಸಿನಿಮಾ ಮಂದಿಯನ್ನು ಮ್ಯಾನೇಜ್ ಮಾಡುತ್ತಿರುವುದು ಇದೇ cornerstone ಕಂಪನಿ. ಗಂಡನ ಪರವಾಗಿ ಇವರಿಂದ ಟ್ವೀಟ್ ಮಾಡಿಸಿರುವುದು ರೋಹಿತ್ ಶರ್ಮಾನ ಪತ್ನಿ ಎಂಬುದು ಗುಟ್ಟಾಗಿ ಉಳಿದಿಲ್ಲ.

ಇವೆಲ್ಲದರಿಂದ ಹಾನಿಯಾಗುತ್ತಿರುವುದು ರೋಹಿತ್ ಶರ್ಮಾ ವ್ಯಕ್ತಿತ್ವಕ್ಕೆ ಮತ್ತು ಹಾನಿ ಮಾಡಿರುವುದು ಸ್ವತಃ ಪತ್ನಿ. ಹೇಳಿ ಕೊಟ್ಟ ಮಾತು, ಕಟ್ಟಿ ಕೊಟ್ಟ ಬುತ್ತಿ ಬಹಳ ಕಾಲ ಉಳಿಯದು. ಉಳಿಯುವುದೊಂದೇ.. ನೈಜ ವ್ಯಕ್ತಿತ್ವ.

LEAVE A REPLY

Please enter your comment!
Please enter your name here

one × 5 =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you