ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ರಾಜ್ಯದ ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ಸ್(ರಿ) ಇವರ ಆಶ್ರಯದಲ್ಲಿ ಸಂಸ್ಥೆ 36 ನೇ ವಾರ್ಷಿಕೋತ್ಸವದ ಅಂಗವಾಗಿ ರಾಷ್ಟ್ರೀಯ ಮಟ್ಟದ ಲೀಗ್ ಕಂ ನಾಕೌಟ್ ಹಗಲಿನ ಕ್ರಿಕೆಟ್ ಪಂದ್ಯಾಟ ವೆಂಕಟರಮಣ ಟ್ರೋಫಿ-2024 ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲೇ 2023-24 ರ ಕ್ರಿಕೆಟ್ ಋತುವಿನ ಪ್ರಥಮ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ ಇದಾಗಿದ್ದು,ಫೆಬ್ರವರಿ ದಿನಾಂಕ 9,10 ಮತ್ತು 11ರಂದು ಕಟಪಾಡಿಯ ಎಸ್.ವಿ.ಎಸ್ ಮೈದಾನ ಪಳ್ಳಿಗುಡ್ಡೆ ಯಲ್ಲಿ ಅದ್ಧೂರಿಯ ಈ ಕ್ರಿಕೆಟ್ ಹಬ್ಬ ಆಯೋಜಿಸಲಾಗಿದೆ.
ಪಂದ್ಯಾಟದ ಪ್ರಥಮ ಪ್ರಶಸ್ತಿ 3 ಲಕ್ಷ ರೂ,ದ್ವಿತೀಯ ಪ್ರಶಸ್ತಿ 1.5ಲಕ್ಷ ರೂ ನಗದು ಸಹಿತ ಅತ್ಯಾಕರ್ಷಕ ವೆಂಕಟರಮಣ ಟ್ರೋಫಿ ಪಡೆಯಲಿದ್ದು ಭಾಗವಹಿಸುವ ತಂಡಗಳು ಪ್ರವೇಶ ಶುಲ್ಕ 25,000 ಪಾವತಿಸಬೇಕಿದೆ.
ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರಿಗೆ ವಿಶೇಷ ಉಡುಗೊರೆ ನೀಡಿ ಗೌರವಿಸಲಿದ್ದಾರೆ.
ಪಂದ್ಯಾಟದ ನೇರ ಪ್ರಸಾರ ಸ್ಟಾರ್ ವರ್ಟೆಕ್ಸ್-Sportskannadatv ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.
ಭಾಗವಹಿಸಲು ಆಸಕ್ತ ತಂಡಗಳು 8660457633,
6363022576,9964244946, 9964380701 ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದು.
ಕಳೆದ 36 ವರ್ಷಗಳಿಂದ ಕ್ರೀಡೆ,ಸಾಮಾಜಿಕ,
ಶೈಕ್ಷಣಿಕ,ಧಾರ್ಮಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದ ವೆಂಕಟರಮಣ ಸಂಸ್ಥೆ ಈ ಹಿಂದೆ ಆಯೋಜಿಸಿದ ಪ್ರತಿ ಪಂದ್ಯಾಟದಲ್ಲೂ ರಕ್ತದಾನ,ನೇತ್ರದಾನ,ಅಂಗಾಂಗ ದಾನ ಪ್ರಕ್ರಿಯೆ ನೋಂದಣಿ,ಮಾದಕ ದ್ರವ್ಯ ವ್ಯಸನಮುಕ್ತ ಸಮಾಜ ಅಭಿಯಾನ ಕಾರ್ಯಕ್ರಮಗಳನ್ನು ನಡೆಸಿದ್ದು,
ಈ ಬಾರಿಯೂ ಕೂಡ ವಿ.ಎಸ್.ಸಿ ವತಿಯಿಂದ ನೊಂದ ಹೃದಯಗಳ ಕಣ್ಣೀರೊರೆಸುವ “ಕಾರುಣ್ಯ-ಇದು ನೆರವಿನ ಹಸ್ತ” ಎಂಬ ನೂತನ ಯೋಜನೆಯು ಸಮಾರಂಭದಲ್ಲಿ ಉದ್ಘಾಟನೆಗೊಳ್ಳಲಿದೆ.