ಕ್ರಿಕೆಟ್ಜುಲೈ 7: ಸಾಧನೆಯ ಹಾದಿಯಲ್ಲಿ ಸ್ಪೋರ್ಟ್ಸ್ ಕನ್ನಡ – ಆರು ವರುಷಗಳ...

ಜುಲೈ 7: ಸಾಧನೆಯ ಹಾದಿಯಲ್ಲಿ ಸ್ಪೋರ್ಟ್ಸ್ ಕನ್ನಡ – ಆರು ವರುಷಗಳ ಹೆಜ್ಜೆಗುರುತು

-

- Advertisment -spot_img

ಜುಲೈ 7: ಸಾಧನೆಯ ಹಾದಿಯಲ್ಲಿ ಸ್ಪೋರ್ಟ್ಸ್ ಕನ್ನಡ – ಆರು ವರುಷಗಳ ಹೆಜ್ಜೆಗುರುತು

ಜುಲೈ 7: ಈ ದಿನದ ಮಹತ್ವ ತಿಳಿದವರಿಗೆ ಇದು ಕೇವಲ ಕ್ಯಾಲೆಂಡರ್‌ನ ದಿನವಲ್ಲ – ಇದು ಗೌರವದ ದಿನ. ವಿಶ್ವ ಕ್ರಿಕೆಟ್‌ನ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಜನ್ಮದಿನವೇ ಆಗಿರುವ ಜುಲೈ 7 ರಂದು ನಮ್ಮ ರಾಜ್ಯದ ಕ್ರೀಡಾ ಜಗತ್ತಿಗೆ ಹೊಸ ಆವೃತ್ತಿ ನೀಡಿದ ಸ್ಪೋರ್ಟ್ಸ್ ಕನ್ನಡ ವೆಬ್‌ಸೈಟ್‌ ಆರಂಭಗೊಂಡದ್ದು. ಜುಲೈ 7, 2019 ರಂದು ವೆಬ್‌ಸೈಟ್ ಉದ್ಘಾಟನೆಯಾಯಿತು. ಅದರಿಂದ ನಿಖರವಾಗಿ ನಾಲ್ಕು ವರ್ಷಗಳ ನಂತರ, ಜುಲೈ 7, 2023 ರಂದು Sports Kannada YouTube ಚಾನೆಲ್ ಅನ್ನು ಪ್ರಾರಂಭಿಸಲಾಯಿತು.

ಇಂದು, ಸ್ಪೋರ್ಟ್ಸ್ ಕನ್ನಡ ವೆಬ್‌ಸೈಟ್‌ಗೆ ಆರನೇ ವರ್ಷಾಚರಣೆ, ಮತ್ತು ಯೂಟ್ಯೂಬ್ ಚಾನೆಲ್‌ಗೆ ಎರಡು ವರ್ಷಪೂರ್ತಿ — ಈ ಎರಡು ಮಹತ್ವದ ಘಟ್ಟಗಳು ಒಂದೇ ದಿನದಂದು ನೆನೆಸಿಕೊಳ್ಳುತ್ತಿರುವ ಸಂತೋಷದ ಕ್ಷಣವಿದು.

ಈ ಕ್ರಾಂತಿಕಾರಿ ಪ್ರಯತ್ನದ ನೆನೆಪಿನಲ್ಲಿ ಕೋಟ ರಾಮಕೃಷ್ಣ ಆಚಾರ್ (KRK) ಅವರ ಹೆಸರನ್ನು ಅತ್ಯಂತ ಗೌರವದಿಂದ ಉಲ್ಲೇಖಿಸಬೇಕು. ಕರ್ನಾಟಕದ ಟೆನಿಸ್ ಬಾಲ್ ಕ್ರಿಕೆಟ್ ಚರಿತ್ರೆಯಲ್ಲಿ ಮಹತ್ತರ ಬದಲಾವಣೆಯನ್ನು ತರಲು ಅವರು ಕನಸು ಕಂಡರು. ಸೀನಿಯರ್ ಮತ್ತು ಜೂನಿಯರ್ ಆಟಗಾರರ ನಡುವೆ ಬಾಂಧವ್ಯ , ರಾಜ್ಯದ ಹಿರಿಯ ಆಟಗಾರರನ್ನು ಒಟ್ಟಿಗೆ ತರಲು ವೇದಿಕೆ, ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಸ್ಥಾಪನೆಗೆ ಪೂರಕ ವೇದಿಕೆ, ವಿಶ್ವದ ಕ್ರೀಡಾ ಸುದ್ದಿಗಳನ್ನು ಕನ್ನಡದಲ್ಲಿ ತಲುಪಿಸುವ ಉದ್ದೇಶ ಇವೆಲ್ಲವುಗಳನ್ನು ಸಾಕಾರಗೊಳಿಸಲು ಅವರು ಪ್ರಾರಂಭಿಸಿದ SportsKannada.com ಮತ್ತು ನಂತರ Sports Kannada YouTube Channel ಎಂಬುವು ಇಂದು ಲಕ್ಷಾಂತರ ಕ್ರೀಡಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿವೆ. ಸ್ಪೋರ್ಟ್ಸ್ ಕನ್ನಡ ಕೇವಲ ರಾಜ್ಯದಲ್ಲಷ್ಟೇ ಅಲ್ಲ – ರಾಷ್ಟ್ರಮಟ್ಟ ಮತ್ತು ವಿದೇಶದಲ್ಲಿಯೂ ವೇಗವಾಗಿ ಜನಪ್ರಿಯತೆ ಪಡೆದಿದೆ. ಕೇವಲ ಒಂದು ಚಿಂತನೆಯಿಂದ ಹುಟ್ಟಿದ ಈ ವೆಬ್‌ಸೈಟ್ ಮತ್ತು ಚಾನೆಲ್ ಇಂದು ಒಂದು ಪ್ರಬಲ ವೇದಿಕೆಯಾಗಿದೆ.

ಸ್ಪೋರ್ಟ್ಸ್ ಕನ್ನಡ ವೆಬ್‌ಸೈಟ್ ಆಯೋಜಿಸಿದ್ದ ಕೆಲವು ಉನ್ನತ ಮಟ್ಟದ ಕಾರ್ಯಕ್ರಮಗಳು- “ಲೆಜೆಂಡ್ಸ್ ಕಪ್” – ಕುಂದಾಪುರದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಐತಿಹಾಸಿಕ ಕ್ರಿಕೆಟ್ ಟೂರ್ನಿ, ಮತ್ತು “ಯುಗಾಂತರ” – ಟೆನಿಸ್ ಬಾಲ್ ಕ್ರಿಕೆಟ್‌ನ ಜಾಗತಿಕ ಪ್ರಯಾಣದ ಕಾರ್ಯಕ್ರಮ, ಇವುಗಳಲ್ಲಿ 1980 ಹಾಗೂ 1990ರ ದಶಕದ ಹಿರಿಯ ಆಟಗಾರರು ಭಾಗವಹಿಸಿದ್ದು ಅಪರೂಪದ ಸಂಧರ್ಭವಾಯಿತು.

ಈ ಪ್ರಯಾಣದಲ್ಲಿ ಪ್ರಿಯ ದರ್ಶಕರು, ಅಭಿಮಾನಿಗಳ ಮತ್ತು ಬೆಂಬಲಿಗರು ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಅವರ ಪ್ರೀತಿ, ವಿಶ್ವಾಸ ಮತ್ತು ನಿರಂತರ ಪ್ರೋತ್ಸಾಹದಿಂದಲೇ ಇವತ್ತು ಸ್ಪೋರ್ಟ್ಸ್ ಕನ್ನಡ ಈ ಎತ್ತರ ತಲುಪಿದೆ.

ಮುಂದೆ ಇನ್ನೂ ಹೆಚ್ಚು ಹೊಸ ಪ್ರಯತ್ನಗಳೊಂದಿಗೆ ನಾವು ನಿಮಗೆ ಕ್ರೀಡಾ ಮಾಹಿತಿಯ ಹೊಸ ಪರಿಭಾಷೆ ನೀಡಲಿದ್ದೇವೆ. ನಮ್ಮ ಪ್ರತಿಯೊಂದು ಪ್ರಯತ್ನವೂ ಉತ್ಸಾಹದಿಂದ, ಜವಾಬ್ದಾರಿಯಿಂದ ಮತ್ತು ನಿಷ್ಠೆಯಿಂದ ಇರಲಿದೆ.

ನಿರಂತರವಾಗಿ ನಮ್ಮೊಂದಿಗೆ ಇರಿ. ಮತ್ತಷ್ಟು ಮಾಹಿತಿಗಾಗಿ ಸ್ಪೋರ್ಟ್ಸ್ ಕನ್ನಡ ನೋಡಿ.

 

-ಟೀಮ್ ಸ್ಪೋರ್ಟ್ಸ್ ಕನ್ನಡ

LEAVE A REPLY

Please enter your comment!
Please enter your name here

9 + 14 =

Latest news

Pinco Online Kazino (Пинко) 2026 – Yeni Oyunçular üçün Bonuslar

Pinco Online Kazino (Пинко) 2026 – Yeni Oyunçular üçün Bonuslar ...

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ!

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ! ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೇನ್...

Mostbet AZ – bukmeker ve kazino Mostbet – Giriş rəsmi sayt

Mostbet AZ - bukmeker ve kazino Mostbet - Giriş rəsmi sayt ...

Instasino Casino overzicht en opties

Praktische gids voor InstaSino Casino – Alles wat je moet weten Registratie en eerste stappen bij Instasino Casino Je wilt een...
- Advertisement -spot_imgspot_img

Σύνδεση στο Gangsta Casino: Οδηγός μπόνους και βήμα-βήμα εγγραφής για Κύπρο

Τι περιμένει το νέο παίκτη; Σύνδεση στο Gangsta CasinoΒήμα-βήμα εγγραφή – Πώς να δημιουργήσεις λογαριασμόΚαταθέσεις – Επιλογή μεθόδων πληρωμήςΣύνδεση...

Divaspin login – UK registration steps and quick start guide

Divaspin Login: The Practical UK Guide Why Divaspin Casino Appeals to UK...

Must read

- Advertisement -spot_imgspot_img

You might also likeRELATED
Recommended to you