ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್

“ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್ –2” ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್ 27 ಮತ್ತು 28ರಂದು ಬಂಟ್ವಾಳ ಮೈದಾನದಲ್ಲಿ ಜರುಗಲಿದೆ.

‘ಟೀಮ್ ಬ್ರದರ್ಸ್ ವತಿಯಿಂದ ಆಯೋಜಿಸಲಾದ ಈ ಟೂರ್ನಮೆಂಟ್‌ನಲ್ಲಿ ಒಟ್ಟು 24 ತಂಡಗಳು (ಪ್ರತಿ ತಂಡದಲ್ಲಿ 11 ಆಟಗಾರರು) ಭಾಗವಹಿಸಲಿದ್ದು, ಪಂದ್ಯಾವಳಿ ನಾಕೌಟ್ ಮಾದರಿಯಲ್ಲಿ ನಡೆಯಲಿದೆ.

ವಿಜೇತರಿಗೆ ರೂ.25,555 ನಗದು ಬಹುಮಾನ ಹಾಗೂ “ ಬ್ರದರ್ಸ್ ಟ್ರೋಫಿ ” ಪ್ರದಾನವಾಗಲಿದೆ. ರನ್ನರ್ಸ್ ಅಪ್ ತಂಡಕ್ಕೆ ರೂ.12,222 ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುತ್ತದೆ.

ಟೂರ್ನಮೆಂಟ್‌ನ ಮೊದಲ ದಿನ ಲೀಗ್ ಪಂದ್ಯಗಳು ನಡೆಯಲಿದ್ದು, ಎರಡನೇ ದಿನ ನಾಕೌಟ್ ಹಂತದ ಪಂದ್ಯಗಳು ಜರುಗಲಿವೆ. ಡಿಸೆಂಬರ್ 5ರೊಳಗೆ ರೂ.1,500 ಅಡ್ವಾನ್ಸ್ ಪಾವತಿಸಿದ 24 ತಂಡಗಳಿಗೆ ಮಾತ್ರ ಪ್ರವೇಶ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಆಟಗಾರರಿಗೆ ಹಾಗೂ ಪ್ರೇಕ್ಷಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಟೂರ್ನಮೆಂಟ್‌ನ ಯಶಸ್ಸಿಗಾಗಿ ಎಲ್ಲಾ ಸಿದ್ಧತೆಗಳು ಅಂತಿಮ ಹಂತದಲ್ಲಿವೆ ಎಂದು ಆಯೋಜನಾ ಸಮಿತಿ ಸದಸ್ಯರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು:
ಇಕ್ಮಾಲ್ (8904124362), ಇಕ್ಬಾಲ್ (9591438252), ಕೆ.ಆರ್.ಕೆ. ಆಚಾರ್ಯ (9148167683), ಸಿರಾಜ್ (8050488272).

ಟೂರ್ನಮೆಂಟ್‌ನ್ನು “ಟೀಮ್ ಬ್ರದರ್ಸ್”  ಪ್ರಸ್ತುತಪಡಿಸುತ್ತಿದ್ದು, ಮಾಧ್ಯಮ ಸಹಯೋಗಿಯಾಗಿ ಸ್ಪೋರ್ಟ್ಸ್ ಕನ್ನಡ ಮೀಡಿಯ ಲೈವ್ ಕಾರ್ಯನಿರ್ವಹಿಸಲಿದೆ.

Leave a Reply

Your email address will not be published. Required fields are marked *