ಬಿ.ಬಿ ಹೆಗ್ಡೆ ಕಾಲೇಜ್ ಕುಂದಾಪುರ ತಂಡಕ್ಕೆ ಟಿ.ಸಿ.ಎ ಪ್ರೀಮಿಯರ್ ಅಕಾಡೆಮಿ ಕ್ರಿಕೆಟ್ ಶೀಲ್ಡ್

ಬಿ.ಬಿ ಹೆಗ್ಡೆ ಕಾಲೇಜ್ ಕುಂದಾಪುರ ತಂಡಕ್ಕೆ ಟಿ.ಸಿ.ಎ ಪ್ರೀಮಿಯರ್ ಅಕಾಡೆಮಿ ಕ್ರಿಕೆಟ್ ಶೀಲ್ಡ್

ಬಿ.ಬಿ ಹೆಗ್ಡೆ ಕಾಲೇಜ್ ಕುಂದಾಪುರ ತಂಡಕ್ಕೆ ಟಿ.ಸಿ.ಎ ಪ್ರೀಮಿಯರ್ ಅಕಾಡೆಮಿ
ಕ್ರಿಕೆಟ್ ಶೀಲ್ಡ್

ಕುಂದಾಪುರ-ಇಲ್ಲಿನ ಗಾಂಧಿ ಮೈದಾನದಲ್ಲಿ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್(ಟಿ.ಸಿ.ಎ) ವತಿಯಿಂದ ಸತತ ಐದು ದಿನಗಳ ಕಾಲ ಉಡುಪಿ ದ.ಕ ಅಂತರ ಶಾಲಾ ಮತ್ತು ಅಂತರ ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟ ಜರುಗಿತು.

ಕಾಲೇಜು ಮಟ್ಟದ ಪಂದ್ಯಾಟದಲ್ಲಿ ಒಟ್ಟು 38 ತಂಡಗಳು ಭಾಗವಹಿಸಿದ್ದು ಅಂತಿಮವಾಗಿ ಬಿ.ಬಿ ಹೆಗ್ಡೆ ಕಾಲೇಜು ತಂಡ ಎಸ್.ಕೆ.ವಿ.ಎಮ್.ಎಸ್ ಡಿಗ್ರಿ ಕಾಲೇಜ್ ಕೋಟೇಶ್ವರ ತಂಡವನ್ನು ಸೋಲಿಸಿ ಪ್ರಥಮ ಪ್ರಶಸ್ತಿ ಪಡೆಯಿತು.

ತೃತೀಯ ಬಹುಮಾನ ಎಮ್.ಜಿ.ಎಮ್ ಕಾಲೇಜು ಉಡುಪಿ ಮತ್ತು ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ ಪಡೆದುಕೊಂಡರು.

ಫೈನಲ್ ಪಂದ್ಯಶ್ರೇಷ್ಟ
ಬಿ.ಬಿ ಹೆಗ್ಡೆ ಕಾಲೇಜಿನ ದೀಪಕ್,
ಬೆಸ್ಟ್ ಬ್ಯಾಟರ್ ಅಭಿ ಎಸ್.ಕೆ.ವಿ.ಎಮ್.ಎಸ್,
,ಬೆಸ್ಟ್ ಬೌಲರ್ ಮನೀಷ್ ಬಿ.ಬಿ ಹೆಗ್ಡೆ ಮತ್ತು ಸರಣಿಶ್ರೇಷ್ಟ ಪ್ರಶಸ್ತಿಯನ್ನು ಎಸ್.ಕೆ.ವಿ.ಎಮ್‌‌.ಎಸ್ ಕೋಟೇಶ್ವರ ತಂಡದ ಪ್ರೀತಮ್ ಪಡೆದುಕೊಂಡರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ
ಟಿ‌.ಸಿ.ಎ ಅಧ್ಯಕ್ಷ ಗೌತಮ್ ಶೆಟ್ಟಿ “ಸೋಲಾಗಲಿ ಗೆಲುವಾಗಲಿ ಮೈದಾನದಲ್ಲಿ,ಆಟದಲ್ಲಿ ನಿಮ್ಮ‌ ಒಳಗೊಳ್ಳುವಿಕೆ ಜೀವನದಲ್ಲಿ‌ ನಿಮ್ಮನ್ನು ಯಶಸ್ಸಿನತ್ತ ಮುನ್ನಡೆಸುತ್ತದೆ,ಶಾಲಾ ಕಾಲೇಜಿನ ಮಕ್ಕಳಿಗೆ ಅನುಕೂಲವಾಗುವಂತೆ ಪ್ರತಿ ವರ್ಷವೂ ಇಂತಹ ಕ್ರೀಡಾಕೂಟವನ್ನು ಆಯೋಜಿಸುತ್ತೇವೆ”ಎಂದರು.

ಟಿ‌.ಸಿ.ಎ ಉಡುಪಿ ಗೌರವಾಧ್ಯಕ್ಷ ಶ್ರೀಧರ್ ಶೆಟ್ಟಿ ಪ್ಯಾರಡೈಸ್ ಬನ್ನಂಜೆ ಮಾತನಾಡಿ ” ಟೆಸ್ಟ್ ಕ್ರಿಕೆಟ್ ನಿಜವಾದ ಕ್ರಿಕೆಟ್, ಯುವಕರು ಆಕ್ರಮಣಕಾರಿ ಹೊಡೆತಗಳಿಗೆ ಮುಂದಾಗದೆ ಸಿಂಗಲ್ಸ್,ಡಬಲ್ಸ್ ಮಹತ್ವ ತಿಳಿದಿರಬೇಕು.ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ವ್ಯಕ್ತಿಗಳಾಗಿ ಬಾಳಬೇಕು” ಎಂದರು.

ಈ ಸಂದರ್ಭ ಮುಖ್ಯ ಅತಿಥಿಗಳಾದ ಅಂತರಾಷ್ಟ್ರೀಯ ಕ್ರೀಡಾಪಟು ಮತ್ತು ಕೋಚ್ ಶಾಲಿನಿ ರಾಜೇಶ್ ಶೆಟ್ಟಿ,ಟಿ.ಸಿ‌.ಎ ಪಧಾದಿಕಾರಿಗಳಾದ ಯಾದವ್ ನಾಯ್ಕ್ ಕೆಮ್ಮಣ್ಣು,ಗಿರೀಶ್ ಬೈಂದೂರು,ದಿನೇಶ್ ಗಾಣಿಗ ಬೈಂದೂರು, ಪ್ರವೀಣ್ ಕುಮಾರ್ ಬೈಲೂರು,ಶರತ್ ಶೆಟ್ಟಿ ಪಡುಬಿದ್ರಿ,ಸುಭಾಸ್ ಕಾಮತ್,ನಾರಾಯಣ ಶೆಟ್ಟಿ, ಮನೋಜ್ ನಾಯರ್,
ಕೆ.ಪಿ‌.ಎಲ್ ಆಟಗಾರ ದೀಪಕ್ ಅಲೆವೂರು,ಪ್ರವೀಣ್ ಪಿತ್ರೋಡಿ,ರಾಜೇಶ್ ನಾಯರ್,ಸಂತೋಷ್ ಮೂಡ್ಲಕಟ್ಟೆ,ಸ್ಪೋರ್ಟ್ಸ್ ಕನ್ನಡ
ಕೋಟ ರಾಮಕೃಷ್ಣ ಆಚಾರ್,,ದೇಹದಾರ್ಢ್ಯ ಪಟು ಶ್ರೀನಿವಾಸ ಆನಗಳ್ಳಿ ಇನ್ನಿತರರು ಉಪಸ್ಥಿತರಿದ್ದರು.

ಕೆ.ಪಿ‌.ಸತೀಶ್ ಕಾರ್ಯಕ್ರಮ ನಿರೂಪಿಸಿದರು.ಸತತ ಐದು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾಟದ ನೇರ ಪ್ರಸಾರ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಂಡಿತು.

Leave a Reply

Your email address will not be published. Required fields are marked *