ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಅಂತಿಮ ಗುಂಪಿನ ಪಂದ್ಯದಲ್ಲಿ ಭಾರತ ಮತ್ತು ನೆದರ್ಲೆಂಡ್ಸ್ ನಡುವೆ ಹಣಾಹಣಿ ನಡೆಯಲಿದೆ. ಟೀಮ್ ಇಂಡಿಯಾ ಇಲ್ಲಿಯವರೆಗೆ ಅಜೇಯವಾಗಿದ್ದು ಗ್ರೂಪ್ ಹಂತವನ್ನು ಅಗ್ರಸ್ಥಾನದಲ್ಲಿ ಕೊನೆಗೊಳಿಸಲಿದೆ.ಅವರು ಕೊನೆಯ ಪಂದ್ಯವನ್ನು ಗೆಲುವಿನೊಂದಿಗೆ ಮುಗಿಸಲು ಮತ್ತು ಆ ಮೊಮೆಂಟಮ್ ನ್ನು ಮುಂದಕ್ಕೆ ಕೊಂಡೊಯ್ಯಲು ನೋಡುತ್ತಾರೆ.
ಮತ್ತೊಂದೆಡೆ, ನೆದರ್ಲ್ಯಾಂಡ್ಸ್ ಎರಡು ಪಂದ್ಯಗಳನ್ನು ಗೆದ್ದಿದೆ, ಆದರೆ ಅವರು ಈ ಆಟವನ್ನು ಗೆಲ್ಲಲು ಸಾಧ್ಯವಾದರೆ, ಅವರು ICC ಚಾಂಪಿಯನ್ಸ್ ಟ್ರೋಫಿ 2025 ಗೆ ಅರ್ಹತೆ ಪಡೆಯಬಹುದು. ಆದ್ದರಿಂದ ನಾವು ಕೊನೆಯ ಗುಂಪಿನ ಪಂದ್ಯದಲ್ಲಿ ಅವರಿಂದ ಹೋರಾಟವನ್ನು ನಿರೀಕ್ಷಿಸುತ್ತೇವೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಈ ಪಂದ್ಯ ನಡೆಯಲಿದೆ.
ಈ ಎರಡು ತಂಡಗಳು ಇದುವರೆಗೆ ಎರಡು ಏಕದಿನ ಪಂದ್ಯಗಳನ್ನು ಆಡಿವೆ. ಆ ಎರಡೂ ಪಂದ್ಯಗಳನ್ನು ಭಾರತ ಗೆದ್ದಿದೆ ಮತ್ತು ನೆದರ್ಲೆಂಡ್ಸ್ ಇನ್ನೂ ತನ್ನ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.ಬೆಂಗಳೂರಿನ ಪಿಚ್ ಬ್ಯಾಟರ್‌ಗಳ ಕನಸಿನ ಸ್ವರ್ಗವಾಗಿದೆ. ಇಲ್ಲಿ ಸರಾಸರಿ ಸ್ಕೋರ್ ಸುಮಾರು 350 ಆಗಿದೆ. ಹಾಗಾಗಿ ಎರಡೂ ತಂಡಗಳು ದೊಡ್ಡ ಮೊತ್ತವನ್ನು ದಾಖಲಿಸಲು ನೋಡುತ್ತವೆ ಮತ್ತು ಬೌಲರ್‌ಗಳು ಇಲ್ಲಿ ಶಾರ್ಟ್ ಬೌಂಡರಿಸ್ ಗಳೊಂದಿಗೆ ಬೌಲ್ ಮಾಡಲು ಒತ್ತಡಕ್ಕೆ ಒಳಗಾಗುತ್ತಾರೆ.
ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರುವ ಟೂರ್ನಿಯ ಅಂತಿಮ ಗುಂಪು ಪಂದ್ಯ , ಬೆಂಚ್ ಬಲವನ್ನು ಪರೀಕ್ಷಿಸಲು ಇದು ಸೂಕ್ತ ಪಂದ್ಯವಾಗಿದ್ದು, ಭಾರತವು ತಮ್ಮ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು.ನೆದರ್ಲ್ಯಾಂಡ್ಸ್ ಈಗಾಗಲೇ ಔಟ್-ಆಫ್-ಫಾರ್ಮ್ ಅಗ್ರ-ಆರ್ಡರ್ ಅನ್ನು ಹೊಂದಿದೆ ಹೀಗಾಗಿ ಭಾರತದ ಬೌಲರ್ ಗಳು ಇದನ್ನು ಬಳಸಿಕೊಳ್ಳಬಹುದು.
ಸುರೇಶ್ ಭಟ್, ಮೂಲ್ಕಿ
ಟೀಂ ಸ್ಪೋರ್ಟ್ಸ್ ಕನ್ನಡ