Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಜೈಹಿಂದ್ ಟ್ರೋಫಿ-2021 ಹೊನಲು ಬೆಳಕಿನ‌ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

ಜೈಹಿಂದ್ ಕ್ರಿಕೆಟರ್ಸ್ ಮಣೂರು ಪಡುಕರೆ ಇವರ ಆಶ್ರಯದಲ್ಲಿ,45 ಗಜಗಳ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ “ಜೈಹಿಂದ್ ಟ್ರೋಫಿ-2021” ಆಯೋಜಿಸಲಾಗಿದೆ.
ಡಿಸೆಂಬರ್ 4 ಮತ್ತು 5 ರಂದು ಮಣೂರು ಪಡುಕರೆಯ ಲಕ್ಷ್ಮೀ ಸೋಮ ಬಂಗೇರ ಕಾಲೇಜು ಮೈದಾನದಲ್ಲಿ ಆಯೋಜಿಸಲಾದ ಈ ಪಂದ್ಯಾಟದಲ್ಲಿ ತಂಡಗಳನ್ನು ಮೂರು ವಿಭಾಗಗಳನ್ನಾಗಿ ಮಾಡಿದ್ದು,1)ಆಯಾಯಾ ಏರಿಯಾಕ್ಕೆ ಸಂಬಂಧಿಸಿದ ಆಟಗಾರರ ತಂಡ,2)ವಿಶೇಷ ಆಹ್ವಾನಿತ ಸರಕಾರಿ ಮತ್ತು ಖಾಸಗಿ ನೌಕರರ ತಂಡ,3)ಹರಾಜು ಪ್ರಕ್ರಿಯೆಗೆ ಒಳಪಟ್ಟ ಆಟಗಾರರ ಫ್ರಾಂಚೈಸಿ ತಂಡ ಈ ರೀತಿಯಾಗಿ ಪಂದ್ಯಗಳು ಕುತೂಹಲಕಾರಿಯಾಗಿ ಸಾಗಲಿದೆ.
ಪಂದ್ಯಾಟಕ್ಕೆ ಇನ್ನಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ರಾಜ್ಯಮಟ್ಟ ಹಾಗೂ ಪೊಲೀಸ್ ಕ್ರಿಕೆಟ್ ಪಂದ್ಯಗಳಲ್ಲಿ ಮಿಂಚಿದ ಜೈಹಿಂದ್ ಪಡುಕರೆಯ ವೇಗಿ ಪ್ರಶಾಂತ್ ಪಡುಕರೆ ಇವರ ಹೊಸ ಯೋಚನೆಯಲ್ಲಿ, ಟೆನ್ನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉಡುಪಿ ಜಿಲ್ಲೆಯ 6 ಪೊಲೀಸ್ ತಂಡಗಳು ಮೈದಾನಕ್ಕಿಳಿಯಲಿದ್ದು ಕ್ರೀಡಾಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ ಹಾಗೂ ಎಲ್.ಇ‌.ಡಿ ಸ್ಕ್ರೀನ್ ಕೂಡ ಅಳವಡಿಸಲಾಗುತ್ತಿದೆ.
ಜೈಹಿಂದ್ ಟ್ರೋಫಿಯ ಪ್ರಥಮ ಬಹುಮಾನ ವಿಜೇತ ತಂಡ 30,003 ರೂ,ದ್ವಿತೀಯ ಸ್ಥಾನಿ 20,002 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು,
ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರಿಗೆ ವಿಶೇಷ ಪ್ರಶಸ್ತಿ ನೀಡಲಾಗುತ್ತಿದೆ.ಹರಾಜು ಪ್ರಕ್ರಿಯೆಗೆ ಒಳಪಡಲು ಇಚ್ಚಿಸುವ ಆಟಗಾರರು  ನವೆಂಬರ್ 16 ರ ಒಳಗೆ ನೊಂದಾಯಿಸಿಕೊಳ್ಳಬಹುದು.
SRB ಸ್ಪೋರ್ಟ್ಸ್ ಪಂದ್ಯಾಟದ ನೇರ ಪ್ರಸಾರವನ್ನು ಬಿತ್ತರಿಸಲಿದ್ದು,ಹೆಚ್ಚಿನ ವಿವರಗಳಿಗೆ ಅರುಣ್.ಎನ್.ಬಂಗೇರ ಜೈಹಿಂದ್ ಕ್ರಿಕೆಟರ್ಸ್ ಅಧ್ಯಕ್ಷರು,
ಪ್ರಶಾಂತ್ ಪಡುಕರೆ-9964086655 ಮತ್ತು ರಾಜ ಪಡುಕರೆ- 8546864240 ಈ ನಂಬರ್ ಗಳನ್ನು ಸಂಪರ್ಕಿಸಬಹುದು.