Categories
ಕ್ರಿಕೆಟ್

ಸುರತ್ಕಲ್-ಹಿರಿಯರ ಕ್ರಿಕೆಟ್ ಹಬ್ಬ-ಗತ ವೈಭವದ ಮರು ಸೃಷ್ಟಿ-ಲೆಜೆಂಡ್ಸ್ ಕ್ರಿಕೆಟ್ ಲೀಗ್-2022

ಹಿರಿಯ ಆಟಗಾರರನ್ನು ಒಟ್ಟುಗೂಡಿಸಿ,ಗತ ವೈಭವವನ್ನು ಮರು ಸೃಷ್ಟಿಸುವ ಸದುದ್ದೇಶದೊಂದಿಗೆ,ಮಂಗಳೂರು ಉತ್ತರದ ACP ಅಧಿಕಾರಿ ಎಸ್.ಮಹೇಶ್ ಕುಮಾರ್ ರವರ ಚಿಂತನೆ ಮಾರ್ಗದರ್ಶನದಲ್ಲಿ ಸಮಾಜ ಸೇವಕರು-ಧಾರ್ಮಿಕ ಮುಖಂಡರಾದ ಮಹಾಬಲ ಪೂಜಾರಿ ಕಡಂಬೋಡಿಯವರ ಅಧ್ಯಕ್ಷತೆಯಲ್ಲಿ ಸುರತ್ಕಲ್ ಸ್ಪೋರ್ಟ್ಸ್ &ಕಲ್ಚರಲ್ ಕ್ಲಬ್ ಇವರ ಆಶ್ರಯದಲ್ಲಿ 40 ವರ್ಷ ಮೇಲ್ಪಟ್ಟ ಆಟಗಾರರಿಗಾಗಿ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿ ಆಯೋಜಿಸಲಾಗಿದೆ.
ಮೇ 28 ಮತ್ತು 29 ರಂದು ಸುರತ್ಕಲ್ ನ ಗೋವಿಂದದಾಸ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಈ ಪಂದ್ಯಾಟದಲ್ಲಿ 90 ರ ದಶಕದಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದ ಸುರತ್ಕಲ್ ಸುತ್ತಮುತ್ತಲಿನ ಪರಿಸರದ ಆಹ್ವಾನಿತ 8 ಹಿರಿಯ ತಂಡಗಳು ಭಾಗವಹಿಸಲಿದೆ.
ಪ್ರತಿ ಪಂದ್ಯವು 8 ಓವರ್ ಗಳಲ್ಲಿ ಸಾಗಲಿದ್ದು,
ಟೂರ್ನಮೆಂಟ್ ನ ಪ್ರಥಮ ಬಹುಮಾನ 1,00,001ರೂ ನಗದು ಮತ್ತು ದ್ವಿತೀಯ ಬಹುಮಾನ 50,005 ರೂ ನಗದು ಬಹುಮಾನ‌ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ಟೂರ್ನಮೆಂಟ್ ನ ಲಾಂಛನ,ಟ್ರೋಫಿ ಅನಾವರಣ ಮತ್ತು ಆಟಗಾರರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆದಿತ್ತು.
ಲೆಜೆಂಡ್ಸ್ ಕ್ರಿಕೆಟ್ ಲೀಗ್-2022 ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳ ವಿವರ ಈ ಕೆಳಗಿನಂತಿವೆ.
1)ಟೀಮ್ ಸೂಪರ್ ಕಾಪ್ಸ್
2)ಆಂಜನೇಯ ಸಸಿಹಿತ್ಲು
3)ವಿದ್ಯಾರ್ಥಿ ಸಂಘ ಬೈಕಂಪಾಡಿ
4)ವೀರ ಕೇಸರಿ(ರಿ)ತಡಂಬೈಲ್
5)ಪ್ಯಾರಡೈಸ್ ಕ್ಲಬ್ ಕೃಷ್ಣಾಪುರ
6)ಫ್ರೆಂಡ್ಸ್ ಹಳೆಯಂಗಡಿ
7)ಫ್ರೆಂಡ್ಸ್ ಸರ್ಕಲ್ ಸುರತ್ಕಲ್
8)ಕರ್ನಾಟಕ ಸೇವಾವೃಂದ ಸುರತ್ಕಲ್