Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಗತಕಾಲದ ವೈಭವ ಮರುಸೃಷ್ಟಿಸಿದ ಜಾನ್ಸನ್ ರಾಷ್ಟ್ರೀಯ ಮಟ್ಟದ ಪ್ರಶಸ್ತಿ- ರಿಯಲ್ ಫೈಟರ್ಸ್ ಉಡುಪಿ ಮಡಿಲಿಗೆ

ಕುಂದಾಪುರ-ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ರಾಷ್ಟ್ರೀಯ ಮಟ್ಟದ ವೈಭವೋಪೇತ ಕ್ರಿಕೆಟ್ ಪಂದ್ಯಾಟ “ಜಾನ್ಸನ್ ಟ್ರೋಫಿ-2022/23” ಚಾಂಪಿಯನ್ಸ್ ಪಟ್ಟವನ್ನು ರಿಯಲ್ ಫೈಟರ್ಸ್ ಉಡುಪಿ ಅಲಂಕರಿಸಿದೆ.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ರಿಯಲ್ ಫೈಟರ್ಸ್ ಪವನ್ ಅಲೆವೂರು 30,ಆಶಿಷ್ 20 ಮತ್ತು ಪ್ರದೀಪ್ ಕಿದಿಯೂರು 15 ರನ್ ಗಳ ನೆರವಿನಿಂದ 8 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 79 ರನ್ ಕಲೆ ಹಾಕಿತ್ತು.ಅಸಾಧ್ಯದ ಗುರಿಯನ್ನು ಬೆಂಬತ್ತುವಲ್ಲಿ ವಿಫಲವಾದ ಪ್ರಕೃತಿ  ನ್ಯಾಶ್ 8 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿ ಸೋಲೋಪ್ಪಿಕೊಂಡಿತ್ತು.
ಇದಕ್ಕೂ ಮುನ್ನ ಸೆಮಿಫೈನಲ್ ನಲ್ಲಿ ಪ್ರಕೃತಿ ನ್ಯಾಶ್ ದಾವಣಗೆರೆ ಇಲೆವೆನ್ ತಂಡವನ್ನು,ರಿಯಲ್ ಫೈಟರ್ಸ್ ಶೆಟ್ಟಿ ಇಲೆವೆನ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದರು.
ಚಾಂಪಿಯನ್ ತಂಡ ರಿಯಲ್ ಫೈಟರ್ಸ್ 4,04,000 ನಗದು,ದ್ವಿತೀಯ ಸ್ಥಾನಿ ಪ್ರಕೃತಿ ನ್ಯಾಶ್ 2,02,000 ನಗದು ಬಹುಮಾನದೊಂದಿಗೆ ಆಕರ್ಷಕ ಕಾಂತಾರ ಮಾದರಿಯ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.
ಫೈನಲ್ ಪಂದ್ಯಶ್ರೇಷ್ಟ ರಿಯಲ್ ಫೈಟರ್ಸ್ ನ ಪವನ್,ಟೂರ್ನಮೆಂಟ್ ನ ಬೆಸ್ಟ್ ಬ್ಯಾಟರ್ ಆಶಿಷ್ ಅಲೆವೂರು,ಬೆಸ್ಟ್ ಬೌಲರ್ ಆರ್.ಕೆ.ಕುಂದಾಪುರ ತಂಡದ ಪುರುಷಿ ಹಾಗೂ ಪಂದ್ಯಾಟದುದ್ದಕ್ಕೂ ಶ್ರೇಷ್ಠ ಸವ್ಯಸಾಚಿ ಪ್ರದರ್ಶನ ನೀಡಿದ ಶೆಟ್ಟಿ ಇಲೆವೆನ್ ಸಲೀಮ್ ಸರಣಿಶ್ರೇಷ್ಟ ಪ್ರಶಸ್ತಿ ರೂಪದಲ್ಲಿ ದ್ವಿಚಕ್ರ ವಾಹನವನ್ನು ಪಡೆದುಕೊಂಡರು.
ರವಿವಾರ ಸಂಜೆ ನಡೆದ ಪ್ರದರ್ಶನ ಪಂದ್ಯದಲ್ಲಿ ರಾಜಾ ಸಾಲಿಗ್ರಾಮ ನಾಯಕತ್ವದ ಕುಂದಾಪುರ ಇಲೆವೆನ್,ಸಚಿನ್ ಮಹಾದೇವ್ ನಾಯಕತ್ವದ ಬೆಂಗಳೂರು ಇಲೆವೆನ್ ತಂಡವನ್ನು ಸೋಲಿಸಿತು.ಸಲೀಂ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು.
ಶನಿವಾರ ಜಾನ್ಸನ್ ಲೆಜೆಂಡ್ಸ್ ಮತ್ತು ಪೊಲೀಸ್ ಕುಂದಾಪುರ ತಂಡದ ನಡುವಿನ ಪಂದ್ಯದಲ್ಲಿ ಪೊಲೀಸ್ ಕುಂದಾಪುರ ತಂಡ ಜಯಗಳಿಸಿತು.
ಸಮಾರೋಪ ಸಮಾರಂಭದಲ್ಲಿ
ಮುಖ್ಯ ಅತಿಥಿಗಳಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ,ಉದ್ಯಮಿ ಹಾಗೂ ಸಮಾಜಸೇವಕರಾದ ಗುರ್ಮೆ ಸುರೇಶ್ ಶೆಟ್ಟಿ,ಕೃಷ್ಣ ಪ್ರಸಾದ್ ಅಡ್ಯಂತಾಯ, ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ,ಗೌರವಾಧ್ಯಕ್ಷ ಶರತ್ ಶೆಟ್ಟಿ ಪಡುಬಿದ್ರಿ,ಶ್ರೀಪಾದ ಉಪಾಧ್ಯಾಯ ಚಕ್ರವರ್ತಿ,ಜನತಾ ಗ್ರೂಪ್ಸ್ ಮಾಲೀಕರಾದ ಪ್ರಶಾಂತ್ ಕುಂದರ್,ಮನೋಜ್ ನಾಯರ್,ರಮೇಶ್ ಕುಂದರ್,ಶರತ್ ಶೆಟ್ಟಿ ಉಪ್ಪುಂದ,ಲಯನ್ ಸುಜಯ್ ಶೆಟ್ಟಿ ತೆಕ್ಕಟ್ಟೆ,ಗೌರೀಶ್ ಹೆಗ್ಡೆ ಕೊರ್ಗಿ ಗ್ರಾಮ ಪಂಚಾಯತ್ ಅಧ್ಯಕ್ಷ,
ಕೆ.ಆರ್‌.ನಾಯಕ್,ಪ್ರದೀಪ್ ಶೆಟ್ಟಿ,ಶ್ರೀಕಾಂತ್ ಭಟ್,ನಾಗೇಶ್ ನಾವಡ,ವಿಜಯ ಶೆಟ್ಟಿ ಆವರ್ಸೆ,ಸತೀಶ್ ಕೋಟ್ಯಾನ್ ಕುಂದಾಪುರ, ಸುಧೀರ್ ಪೂಜಾರಿ ತೆಕ್ಕಟ್ಟೆ,ರತ್ನಾಕರ್ ಶೆಟ್ಟಿ ಸ್ಪೋರ್ಟ್ಸ್ ಕನ್ನಡ ಕೋಟ ರಾಮಕೃಷ್ಣ ಆಚಾರ್,ಕಿರಣ್ ಪೂಜಾರಿ,ಪ್ರಶಾಂತ್ ಶೆಟ್ಟಿ,ಸಂತೋಷ ಶೆಟ್ಟಿ ಗೋಳಿಯಂಗಡಿ,ಪ್ರದೀಪ್ ಶೆಟ್ಟಿ,ಪ್ರಮೋದ್ ಮರವಂತೆ,ರಾಜೇಂದ್ರ ಹೆಗ್ಡೆ,ಪುನೀತ್ ಹೆಗ್ಡೆ,ಪ್ರದೀಪ್ ಶೆಟ್ಟಿ ಬೆಳ್ಳಾಲ,ಉಮೇಶ್ ಶೆಟ್ಟಿ ಕಲ್ಗದ್ದೆ,ರವೀಂದ್ರ ಹೆಗ್ಡೆ,ರಾಜಾ ಸಾಲಿಗ್ರಾಮ, ಪ್ರದೀಪ್ ಹೆಗ್ಡೆ,ಅನಿಲ್ ಖಾರ್ವಿ ಮತ್ತು ತಂಡದ ಸದಸ್ಯರು ಉಪಸ್ಥಿತರಿದ್ದರು.
ಹಲವು ವರ್ಷಗಳ ಬಳಿಕ ಗಾಂಧಿ ಮೈದಾನದಲ್ಲಿ 10000 ಕ್ಕೂ ಹೆಚ್ಚಿನ ಕ್ರೀಡಾಭಿಮಾನಿಗಳು ಪಂದ್ಯಾಟವನ್ನು ವೀಕ್ಷಿಸದರೆ,M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನ ಮೂಲಕ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಮನೆಯಲ್ಲೇ ಕುಳಿತು ವೀಕ್ಷಿಸಿದರು.