Categories
ಅಥ್ಲೆಟಿಕ್ಸ್ ಕ್ರಿಕೆಟ್

ತುಮಕೂರಿನಲ್ಲಿ ಇಂದಿನಿಂದ 7 ದಿನಗಳ ಕ್ರೀಡಾ ಹಬ್ಬ- ರಾಕ್ ಯೂತ್ ಕ್ಲಬ್ (ರಿ)ಮೇಯರ್ಸ್ ಕಪ್-2020 ಕ್ರಿಕೆಟ್ ಪಂದ್ಯಾವಳಿ

ತುಮಕೂರು ಮಹಾನಗರ ಪಾಲಿಕೆ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ರಾಕ್ ಯೂತ್ ಕ್ಲಬ್ ಹಾಗೂ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ತುಮಕೂರು ಈ ಎಲ್ಲಾ ಸಂಸ್ಥೆಗಳ‌ ಸಂಯೋಜನೆಯಲ್ಲಿ ತುಮಕೂರಿನಲ್ಲಿ 7 ದಿನಗಳ ಕ್ರೀಡಾ ಜಾತ್ರೆ ಜರುಗಲಿದೆ.

ಡಿಸೆಂಬರ್ 12,13 ರಂದು ರಾಕ್ ಯೂತ್ ಕ್ಲಬ್(ರಿ)ತುಮಕೂರು ಇವರ ಆಶ್ರಯದಲ್ಲಿ,ರಾಕ್ ರಾಜು,ರಾಕ್ ರವಿ,ರಾಕ್ ಅಝ್ಝು,ಯತೀಶ್,ರಾಕ್ ರಘು,ಶಂಕು ಇವರೆಲ್ಲರ ಸಾರಥ್ಯದಲ್ಲಿ
ತುಮಕೂರು ಜಿಲ್ಲೆಯ ಆಟಗಾರರಿಗಾಗಿ ತುಮಕೂರಿನ ಸರಕಾರಿ ಹೈಸ್ಕೂಲ್ ಫೀಲ್ಡ್ ಮೈದಾನದಲ್ಲಿ T.C.L-2020 ಕ್ರಿಕೆಟ್ ಪಂದ್ಯಾಟ ನಡೆಯಲಿದೆ.8 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದೆ.

ಪ್ರಥಮ ಪ್ರಶಸ್ತಿ ವಿಜೇತ ತಂಡ 1 ಲಕ್ಷ ಹಾಗೂ ದ್ವಿತೀಯ ಸ್ಥಾನಿ 50 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.

 

ಪಂದ್ಯಾವಳಿಯ ನೇರ ಪ್ರಸಾರ M9 ಸ್ಪೋರ್ಟ್ಸ್ ಬಿತ್ತರಿಸಿದರೆ,ಹಿರಿಯ ವೀಕ್ಷಕ ವಿವರಣೆಕಾರ ಶಿವನಾರಾಯಣ ಐತಾಳ್ ಕೋಟ ವೀಕ್ಷಕ ವಿವರಣೆಯಲ್ಲಿ ಭಾಗವಹಿಸಲಿದ್ದಾರೆ.ಸಮಸ್ತ ಕನ್ನಡಿಗರ ಹೆಮ್ಮೆಯ
ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮೀಡಿಯಾ ಪಾರ್ಟ್ನರ್ ಕರ್ತವ್ಯ ನಿರ್ವಹಿಸಲಿದೆ.

 

ಡಿಸೆಂಬರ್ 14 ರಿಂದ 16 ರ ವರೆಗೆ ಇದೇ ಅಂಗಣದಲ್ಲಿ ತುಮಕೂರು ಮಹಾನಗರ ಪಾಲಿಕೆ ಕ್ರೀಡಾಕೂಟ-2020 ಹಾಗೂ ಡಿಸೆಂಬರ್ 17 ಮತ್ತು 18 ರಂದು ಕಬಡ್ಡಿ ಚಾಂಪಿಯನ್ಸ್ ಶಿಪ್-2020 ನಡೆಯಲಿದೆ.