Categories
ಕ್ರಿಕೆಟ್

ಬೆಂಗಳೂರು-ಯತೀಶ್ ಮ್ಯಾಜಿಕಲ್ ಸ್ಪೆಲ್- ರಂಗ:ಕ್ರಿಶಾ ಪಂದ್ಯ ರೋಚಕ ಟೈನಲ್ಲಿ ಅಂತ್ಯ

ಕೆ.ಟಿ.ಪಿ‌.ಎಲ್ ನ 9 ನೇ ಪಂದ್ಯದ ಕೊನೆಯ ಓವರ್ ನಲ್ಲಿ ಯತೀಶ್ ಅಲೆವೂರು ಮೊನಚಾದ ಬೌಲಿಂಗ್ ದಾಳಿಯ ಫಲವಾಗಿ,ಕ್ರಿಶಾ ಕುಂದಾಪುರ ಮತ್ತು ರಂಗ ಇಲೆವೆನ್ ನಡುವಿನ ಪಂದ್ಯರೋಚಕ ಟೈನಲ್ಲಿ ಅಂತ್ಯ ಕಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಕ್ರಿಶಾ ಕುಂದಾಪುರ ಕಿಝರ್ 2 ಸಿಡಿಲಬ್ಬರದ ಸಿಕ್ಸರ್ ಸಹಿತ 21 ರನ್ ಸಿಡಿಸಿ ಎದುರಾಳಿಗೆ 51 ರನ್ ಗುರಿ ನೀಡಿತ್ತು.
ಸವಾಲಿನ ಗುರಿಯ ಚೇಸಿಂಗ್ ವೇಳೆ,ಆರಂಭಿಕ‌ ಆಟಗಾರನಾಗಿ ಕಣಕ್ಕಿಳಿದ ನವೀನ್ ಚೂ 17 ರನ್ ಗಳಿಸಿ ತಂಡವನ್ನು ಆಧರಿಸಿದರು.ಕೊನೆಯ ಓವರ್ ನಲ್ಲಿ 6 ರನ್ ಗಳ‌ ಅಗತ್ಯತೆಯ ಸಂದರ್ಭ ಯತೀಶ್ ಕೇವಲ 5 ರನ್ ನೀಡಿ 1 ವಿಕೆಟ್‌ ಉರುಳಿಸಿದ ಪರಿಣಾಮ‌ ಪಂದ್ಯ ಟೈನಲ್ಲಿ ಅಂತ್ಯವಾಯಿತು.
ಕೊನೆಯ ಓವರ್ ನ ಮ್ಯಾಜಿಕಲ್ ಸ್ಪೆಲ್ ನಡೆಸಿದ ಯತೀಶ್ ಅಲೆವೂರು ಅರ್ಹವಾಗಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು.