Categories
ಕ್ರಿಕೆಟ್

ಬೆಂಗಳೂರು-ಮಂಜು ಬಿರುಸಿನ ಆಟ-ರಂಗ ಇಲೆವೆನ್ ಮೊದಲ ಜಯ

ಕೆ‌‌‌.ಟಿ.ಪಿ.ಎಲ್ 6 ನೇ ಪಂದ್ಯದಲ್ಲಿ ರಂಗ ಇಲೆವೆನ್,ಪವರ್ ಸ್ಟಾರ್ ಪುನೀತ್ ಬ್ಲಾಸ್ಟರ್ಸ್ ವಿರುದ್ಧ ಮೊದಲ ಜಯ ದಾಖಲಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಪವರ್ ಸ್ಟಾರ್ ಪುನೀತ್ ಬ್ಲಾಸ್ಟರ್ಸ್ ತಂಡ ಆರಂಭಿಕ‌ ಆಟಗಾರ ಸಚಿನ್ ಕೋಟೇಶ್ವರ ಸಿಡಿಸಿದ ಬಿರುಸಿನ 2 ಸಿಕ್ಸರ್ ಗಳ ನೆರವಿನಿಂದ 8 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 56 ರನ್ ಪೇರಿಸಿತ್ತು.
ಸವಾಲಿನ ಗುರಿಯನ್ನು ಬೆಂಬತ್ತಿದ ರಂಗ ಇಲೆವೆನ್ ಆರಂಭಿಕ ಹಂತದಲ್ಲಿ ನವೀನ್ ಚೂ ಮತ್ತು ಸುಜಿತ್ ಬ್ಯಾಟಿಂಗ್ ಕ್ರಮಾಂಕವನ್ನು ಆಧರಿಸಿದರು.ಕೊನೆಯ
ಹಂತದಲ್ಲಿ ಪಂದ್ಯ ರೋಚಕ‌‌ ಸ್ಥಿತಿ ತಲುಪಿದಾಗ,ಕ್ರೀಸಿಗಿಳಿದ ಮಂಜು ಕೇವಲ 7 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಸಹಿತ 14 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು.
ಗೆಲುವಿನ ಹೊಡೆತಗಳನ್ನು ದಾಖಲಿಸಿದ ಮಂಜು ಅರ್ಹವಾಗಿ ಪಂದ್ಯಶ್ರೇಷ್ಟ ಗೌರವಕ್ಕೆ ಭಾಜನರಾದರು.