Categories
ಭರವಸೆಯ ಬೆಳಕು

ಭರಮಣ್ಣ ನಾಯಕ ಶೌರ್ಯ ಪ್ರಶಸ್ತಿಗೆ ಯೋಗರತ್ನ ತನುಶ್ರೀ ಪಿತ್ರೋಡಿ ಆಯ್ಕೆ

ಚಿತ್ರದುರ್ಗದ ಮುರುಘಾ ಮಠದಿಂದ ಎಳೆಯ ವಯಸ್ಸಿನಲ್ಲಿ ಸಾಹಸ ಮಾಡಿದ ಮಕ್ಕಳಿಗೆ ನೀಡುವ ಭರಮಣ್ಣ ನಾಯಕ ಶೌರ್ಯ ಪ್ರಶಸ್ತಿಗೆ ಯೋಗರತ್ನ ತನುಶ್ರೀ ಪಿತ್ರೋಡಿ ಆಯ್ಕೆಯಾಗಿದ್ದಾರೆ.
ಯೋಗ ಸಾಧನೆಯಲ್ಲಿ ಈಗಾಗಲೇ 7 ವಿಶ್ವದಾಖಲೆಯನ್ನು ಮಾಡಿರುವ ತನುಶ್ರೀ 2009 ಮಾರ್ಚ್ 15 ರಂದು ಜನಿಸಿದ್ದು,ಉಡುಪಿಯ ಸಂಧ್ಯಾ ಮತ್ತು ಉದಯ್ ಕುಮಾರ್ ಪುತ್ರಿ.ಮೂರನೇ ವಯಸ್ಸಿನಲ್ಲಿಯೇ ನೃತ್ಯಾಭ್ಯಾಸ ಮಾಡಿ,ಜೊತೆಗೆ ಭರತನಾಟ್ಯ,ಯಕ್ಷಗಾನ ಮತ್ತು ಹುಲಿವೇಷ ಕುಣಿತದಲ್ಲೂ ಸೈ ಎನ್ನಿಸಿಕೊಂಡಿದ್ದಾಳೆ.
Categories
ಭರವಸೆಯ ಬೆಳಕು

ಯೋಗರತ್ನ ತನುಶ್ರೀ ಪಿತ್ರೋಡಿ 7 ನೇ ವಿಶ್ವದಾಖಲೆಯ ಪ್ರಯತ್ನ

6 ವಿಶ್ವದಾಖಲೆಯ ಸರದಾರಿಣಿ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ಯೋಗರತ್ನ ತನುಶ್ರೀ ಪಿತ್ರೋಡಿ 7 ನೇ ವಿಶ್ವದಾಖಲೆಯ ಪ್ರಯತ್ನವಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಕಡಿಮೆ ಅವಧಿಯಲ್ಲಿ ಅತ್ಯಂತ ಗರಿಷ್ಠ(200)ಯೋಗ ಭಂಗಿಗಳ ಪ್ರದರ್ಶನವನ್ನು ನೀಡಲಿದ್ದಾರೆ.
ಗುರುಗಳಾದ ರಾಮಕೃಷ್ಣ ಕೊಡಂಚ,ಯೋಗ ಗುರು ನರೇಂದ್ರ ಕಾಮತ್ ಕಾರ್ಕಳ ಹಾಗೂ ಪರೀಕ ಎಸ್.ಡಿ.ಎಂ ನ ಡಾ.ಶೋಭಿತ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ  75 ನೇ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ಆಗಸ್ಟ್ 15 ರಂದು ಮಧ್ಯಾಹ್ನ 2.30 ಕ್ಕೆ ಸರಿಯಾಗಿ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಈ ದಾಖಲೆಯನ್ನು ಮಾಡಲಾಗುವುದು ಎಂದು ತನುಶ್ರೀ ಪಿತ್ರೋಡಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಈ ಸಂದರ್ಭ ಮಾತನಾಡಿದ ತನುಶ್ರೀ ತಂದೆ ಉದಯ್ ಕುಮಾರ್ ,ಅಭ್ಯಾಸದ ಸಮಯದಲ್ಲಿ ತನುಶ್ರೀ 45 ನಿಮಿಷದಲ್ಲಿ 200 ಭಂಗಿಗಳನ್ನು ಪ್ರದರ್ಶನ ಮಾಡುತ್ತಿದ್ದು,ಇನ್ನಷ್ಟು ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡುವ ಪ್ರಯತ್ನ ಮಾಡಲಿದ್ದಾಳೆ.ಈ ದಾಖಲೆಯ ಸಂದರ್ಭದಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ನ‌ ಅಧಿಕಾರಿ ಮನೀಷ್ ಬಿಷ್ಣೋಯಿ ಭಾಗವಹಿಸಲಿದ್ದು,ಕಾರ್ಯಕ್ರಮದಲ್ಲಿ ಐವರು ಭಾರತೀಯ ಯೋಧರಿಗೆ ಗೌರವಾರ್ಪಣೆ ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ  ವಿಜಯ್ ಕೋಟ್ಯಾನ್ ಪಿತ್ರೋಡಿ ಹಾಗೂ‌ ಸುರಭಿ ರತನ್ ಉಪಸ್ಥಿತರಿದ್ದರು.
Categories
ಭರವಸೆಯ ಬೆಳಕು

ಕಾರ್ಕಳ-ಕುಕ್ಕುಂದೂರು “ವಿಜೇತ ವಿಶೇಷ ಶಾಲೆ”ಯಲ್ಲಿ ಯೋಗರತ್ನ ತನುಶ್ರೀ ಪಿತ್ರೋಡಿ ಹುಟ್ಟುಹಬ್ಬ ಸಂಭ್ರಮಾಚರಣೆ

ಸತತ 6 ಗಿನ್ನೆಸ್ ದಾಖಲೆ ಮಾಡಿ ಉಡುಪಿ ಜಿಲ್ಲೆಯ ಹೆಮ್ಮೆಯ ಕುವರಿ   ತನುಶ್ರೀ ಪಿತ್ರೋಡಿ ಯ  12 ನೇ ವರ್ಷದ ಹುಟ್ಟುಹಬ್ಬವನ್ನು ವಿಜೇತ ವಿಶೇಷ ಶಾಲೆಯಲ್ಲಿ ಆಚರಿಸಿ ವಿಶೇಷ ಭೋಜನ ವ್ಯವಸ್ಥೆ ಮಾಡಿದರು. ಹಾಗೂ ವಿಶೇಷ ಮಕ್ಕಳೆದುರು  ಯೋಗಾಸನ ಕಾರ್ಯಕ್ರಮ ಪ್ರದರ್ಶನವನ್ನು  ನೀಡಿದರು.

 

ಈ ಸಂಧರ್ಭದಲ್ಲಿ ತಂದೆ ತಾಯಿಗಳಾದ ಶ್ರೀ ಉದಯ್ ಕುಮಾರ್ ಮತ್ತು ಶ್ರೀಮತಿ ಸಂಧ್ಯಾ ದಂಪತಿಗಳು ಹಾಗೂ  ಯೋಗ ಗುರುಗಳು ಶ್ರೀ ನರೇಂದ್ರ  ಕಾಮತ್, ಶ್ರೀ ಪ್ರವೀಣ್ ಕುಮಾರ್ ಯು.ಆರ್ ಆರ್ಟ್ ಗ್ಯಾಲರಿ ಮಣಿಪಾಲ್, ಶ್ರೀ ರಾಕೇಶ್ ಕಟಪಾಡಿ, ಶ್ರೀ ರವೀಂದ್ರ ಶೇರಿಗಾರ್, ಶ್ರೀ ವಿಜಯ್ ಕೋಟ್ಯಾನ್, ಶ್ರೀ ರತನ್ ಉಡುಪಿ,  ಬೇಬಿ ರಿತುಶ್ರೀ, ಉಪಸ್ಥಿತರಿದ್ದರು.