ಸತತ 6 ಗಿನ್ನೆಸ್ ದಾಖಲೆ ಮಾಡಿ ಉಡುಪಿ ಜಿಲ್ಲೆಯ ಹೆಮ್ಮೆಯ ಕುವರಿ ತನುಶ್ರೀ ಪಿತ್ರೋಡಿ ಯ 12 ನೇ ವರ್ಷದ ಹುಟ್ಟುಹಬ್ಬವನ್ನು ವಿಜೇತ ವಿಶೇಷ ಶಾಲೆಯಲ್ಲಿ ಆಚರಿಸಿ ವಿಶೇಷ ಭೋಜನ ವ್ಯವಸ್ಥೆ ಮಾಡಿದರು. ಹಾಗೂ ವಿಶೇಷ ಮಕ್ಕಳೆದುರು ಯೋಗಾಸನ ಕಾರ್ಯಕ್ರಮ ಪ್ರದರ್ಶನವನ್ನು ನೀಡಿದರು.
ಈ ಸಂಧರ್ಭದಲ್ಲಿ ತಂದೆ ತಾಯಿಗಳಾದ ಶ್ರೀ ಉದಯ್ ಕುಮಾರ್ ಮತ್ತು ಶ್ರೀಮತಿ ಸಂಧ್ಯಾ ದಂಪತಿಗಳು ಹಾಗೂ ಯೋಗ ಗುರುಗಳು ಶ್ರೀ ನರೇಂದ್ರ ಕಾಮತ್, ಶ್ರೀ ಪ್ರವೀಣ್ ಕುಮಾರ್ ಯು.ಆರ್ ಆರ್ಟ್ ಗ್ಯಾಲರಿ ಮಣಿಪಾಲ್, ಶ್ರೀ ರಾಕೇಶ್ ಕಟಪಾಡಿ, ಶ್ರೀ ರವೀಂದ್ರ ಶೇರಿಗಾರ್, ಶ್ರೀ ವಿಜಯ್ ಕೋಟ್ಯಾನ್, ಶ್ರೀ ರತನ್ ಉಡುಪಿ, ಬೇಬಿ ರಿತುಶ್ರೀ, ಉಪಸ್ಥಿತರಿದ್ದರು.