Categories
ಕ್ರಿಕೆಟ್

ಧೈರ್ಯಶಾಲಿಗಳಿಗೆ ಅದೃಷ್ಟ ಒಲವು ತೋರುವ ಸಮಯ ಬಂದಿದೆ.

ಭಾರತ vs ನ್ಯೂಜಿಲೆಂಡ್ ಸೆಮಿಫೈನಲ್ ಕದನ
2023ರ ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಡಿದ ಎಲ್ಲಾ ಒಂಬತ್ತು ಪಂದ್ಯಗಳಲ್ಲೂ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದೆ. ಆದರೆ ಭಾರತ ತಂಡದ ನಿಜವಾದ ಪರೀಕ್ಷೆ ನವೆಂಬರ್ 15 ರಂದು ನಡೆಯಲಿದೆ. ಸೆಮಿಫೈನಲ್ ಪಂದ್ಯಕ್ಕಾಗಿ ಮುಂಬೈಗೆ  ಟೀಮ್ ಇಂಡಿಯಾ ಆಟಗಾರರು ಬಂದಿಳಿದಿದ್ದಾರೆ.
ಮುಂಬೈನ ಐಕಾನಿಕ್  ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಎದುರಿಸುತ್ತಿದೆ. ಬುಧವಾರ, ನವೆಂಬರ್ 15ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ವಿಶ್ವದ ಕ್ರಿಕೆಟ್ ಅಭಿಮಾನಿಗಳ ಚಿತ್ತ ಕದ್ದಿದೆ. ಸೆಮಿಫೈನಲ್‌ನಲ್ಲಿ ಕಿವೀಸ್ ಕಿವಿ ಹಿಂಡಲು ಟೀಮ್ ಇಂಡಿಯಾ ಆಟಗಾರರು ಸಿದ್ಧರಾಗಿದ್ದಾರೆ.
ಕಿವೀಸ್ ತಂಡ ಸ್ಮಾರ್ಟ್ ಟೀಮ್ ಮತ್ತು  ನ್ಯೂಜಿಲೆಂಡ್ ತಂಡ ಸಮತೋಲಿತವಾಗಿದೆ. ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಫಾರ್ಮ್‌ನಲ್ಲಿದ್ದಾರೆ. ನ್ಯೂಜಿಲೆಂಡ್ ತಂಡ ಎದುರಾಳಿ ತಂಡಗಳ ಮನಸ್ಥಿತಿಯನ್ನು ಅರ್ಥಮಾಡಿಕೊಂಡಿದೆ. ಟೀಂ ಇಂಡಿಯಾ ಬಲಿಷ್ಠ ಫಾರ್ಮ್‌ನಲ್ಲಿದೆ. ಸೆಮಿಫೈನಲ್ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಕಠಿಣ ಪೈಪೋಟಿ ನಿರೀಕ್ಷಿಸಬಹುದು.
ಕಿವೀಸ್ ತಂಡವು ಭಾರತೀಯ ನಾಯಕ ರೋಹಿತ್ ಶರ್ಮಾ ಅವರನ್ನು ಶೀಘ್ರದಲ್ಲೇ  ಔಟ್ ಮಾಡಲು ಬಯಸುತ್ತದೆ. ಒಂದು ವೇಳೆ ರೋಹಿತ್ ಶರ್ಮಾ ನಿಂತರೆ ಈ ಸೆಮಿಫೈನಲ್‌ನಲ್ಲಿ ಭಾರತ ತಂಡದ ಗೆಲುವು ಖಚಿತ. ಇದುವರೆಗೂ ರೋಹಿತ್ ಶರ್ಮಾ ಯಾವ ಕೆಲಸ ಮಾಡುತ್ತಿದ್ದಾರೋ ಅದೇ ಕೆಲಸವನ್ನು ಮುಂದುವರಿಸಬೇಕಾಗಿದೆ. ಸೆಮಿಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಂದ ದೊಡ್ಡ ರನ್‌ಗಳನ್ನು ನಿರೀಕ್ಷಿಸಲಾಗಿದೆ. ಈ ವರ್ಷ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೆಮಿಫೈನಲ್‌ನಲ್ಲಿ ದೊಡ್ಡ ಮೊತ್ತವನ್ನು ಗಳಿಸುತ್ತಾರೆ ಎಂದು ಭಾರತ ತಂಡವು ಆಶಿಸುತ್ತಿದೆ. ತಂಡವು ಹೆಚ್ಚಾಗಿ ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ಮೇಲೆ ಅವಲಂಬಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಸೆಮಿಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ರನ್ ಗಳಿಸಲೇಬೇಕು.
ಸೆಮಿಫೈನಲ್ ಪಂದ್ಯದ ಒತ್ತಡವು ಸಂಪೂರ್ಣವಾಗಿ ವಿಭಿನ್ನವಾಗಿದೆ.  ಟೀಂ ಇಂಡಿಯಾ ಇದುವರೆಗೆ ಖಂಡಿತವಾಗಿಯೂ ಉತ್ತಮ ಪ್ರದರ್ಶನ ನೀಡಿದೆ. ಭಾರತ ತಂಡವನ್ನು ಬೆಂಬಲಿಸಲು ಅನೇಕ ಅಭಿಮಾನಿಗಳು ಮುಂಬೈಗೆ ಬರಲಿದ್ದಾರೆ. ಭಾರತ ತಂಡವು ಅವರ ಮುಂದೆ ಉತ್ತಮ ಪ್ರದರ್ಶನ ನೀಡಲು ಬಯಸುತ್ತದೆ. ಇದುವರೆಗಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿರುವುದು ಗಮನಾರ್ಹ. ಲೀಗ್ ಹಂತದಲ್ಲಿ ಭಾರತ ಎಲ್ಲಾ 9 ಪಂದ್ಯಗಳನ್ನು ಗೆದ್ದಿದೆ.
ಕಿವೀಸ್ ತಂಡ ಲೀಗ್ ಹಂತದಲ್ಲಿ ಭಾರತ ತಂಡದ ವಿರುದ್ಧ ಸೋಲನುಭವಿಸಬೇಕಾಯಿತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಯಾವ ತಂತ್ರದಡಿಯಲ್ಲಿ ಕಣಕ್ಕಿಳಿಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಕಳೆದ 10 ವರ್ಷಗಳಲ್ಲಿ ಐಸಿಸಿಯ ಟೂರ್ನಿಯ ಲೀಗ್ ಹಂತದಲ್ಲಿ ಭಾರತ ಶೇಕಡಾ 86ರಷ್ಟು ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ನಾಕೌಟ್ ಹಂತದಲ್ಲಿ ಶೇಕಡಾ 89ರಷ್ಟು ನಿರಾಸೆ ಅನುಭವಿಸಿದೆ. ಲೀಗ್‌ನಲ್ಲಿ ಅಬ್ಬರ ತೋರಿಸುತ್ತಿದ್ದ ಭಾರತ , ನಾಕೌಟ್‌ನಲ್ಲಿ ತತ್ತರಗೊಂಡಿತ್ತು. ಈ ಅಂಕಿ-ಅಂಶ ನಿಜಕ್ಕೂ ಟೀಮ್ ಇಂಡಿಯಾದ ನಿದ್ದೆಗೆಡಿಸಿದೆ.
ಕಳೆದ ವರ್ಲ್ಡ್ ಕಪ್ ನಲ್ಲಿ ಮಹೇಂದ್ರ ಸಿಂಗ್ ಧೋನಿನ ರನ್ ಔಟ್ ಮಾಡಿದ ಕಿವಿಸ್ ತಂಡವನ್ನು ಬಗ್ಗು ಬಡಿಯಲಿ; ಭಾರತ ತಂಡಕ್ಕೆ ಶುಭವಾಗಲಿ. ಆಲ್ ದ ಬೆಸ್ಟ್ ಇಂಡಿಯಾ….
 ✍🏼ಸುರೇಶ್ ಭಟ್, ಮೂಲ್ಕಿ
ಕ್ರೀಡಾ ಬರಹಗಾರ
ಟೀಂ ಸ್ಪೋರ್ಟ್ಸ್ ಕನ್ನಡ