Home ಕ್ರಿಕೆಟ್ ಎಸ್‌ವಿಟಿ ಟ್ರೋಫಿ–2026: ಜಿಎಸ್‌ಬಿ ವಾಲಂಟಿಯರ್ಸ್ ಪ್ರೀಮಿಯರ್ ಲೀಗ್‌ಗೆ ಭರ್ಜರಿ ಸಿದ್ಧತೆ

ಎಸ್‌ವಿಟಿ ಟ್ರೋಫಿ–2026: ಜಿಎಸ್‌ಬಿ ವಾಲಂಟಿಯರ್ಸ್ ಪ್ರೀಮಿಯರ್ ಲೀಗ್‌ಗೆ ಭರ್ಜರಿ ಸಿದ್ಧತೆ

0
ಎಸ್‌ವಿಟಿ ಟ್ರೋಫಿ–2026: ಜಿಎಸ್‌ಬಿ ವಾಲಂಟಿಯರ್ಸ್ ಪ್ರೀಮಿಯರ್ ಲೀಗ್‌ಗೆ ಭರ್ಜರಿ ಸಿದ್ಧತೆ

ಎಸ್‌ವಿಟಿ ಟ್ರೋಫಿ–2026: ಜಿಎಸ್‌ಬಿ ವಾಲಂಟಿಯರ್ಸ್ ಪ್ರೀಮಿಯರ್ ಲೀಗ್‌ಗೆ ಭರ್ಜರಿ ಸಿದ್ಧತೆ

ಮಂಗಳೂರು: ಕಾರ್‌ಸ್ಟ್ರೀಟ್ ಮಂಗಳೂರು ಮೂಲದ ಎಸ್‌ವಿಟಿ ವಾಲಂಟಿಯರ್ಸ್ ಅಸೋಸಿಯೇಷನ್ ವತಿಯಿಂದ ಪ್ರತಿಷ್ಠಿತ ಎಸ್‌ವಿಟಿ ಟ್ರೋಫಿ–2026 (GSB Volunteers’ Premier League – Season 4) ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಈ ಪಂದ್ಯಾವಳಿ 2026ರ ಜನವರಿ 1, 2 ಹಾಗೂ 3ರಂದು ಡೊಂಗರ್‌ಕೇರಿಯಲ್ಲಿರುವ ಕೆನರಾ ಹೈಸ್ಕೂಲ್ ಸಿಬಿಎಸ್‌ಇ ಮೈದಾನದಲ್ಲಿ ನಡೆಯಲಿದೆ.

ಪಂದ್ಯಾವಳಿ ಫ್ಲಡ್ ಲೈಟ್ ವ್ಯವಸ್ಥೆಯೊಂದಿಗೆಆಕ್ಷನ್ ಆಧಾರಿತವಾಗಿ ನಡೆಯಲಿದ್ದು, ಸಬ್ ಜೂನಿಯರ್ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಒಟ್ಟು 18 ತಂಡಗಳು ಈ ಲೀಗ್‌ನಲ್ಲಿ ಭಾಗವಹಿಸಲಿದ್ದು, ಪ್ರತಿದಿನ ಸಂಜೆ 3.30 ಗಂಟೆಯಿಂದ ಪಂದ್ಯಗಳು ಆರಂಭವಾಗಲಿವೆ.

ಈ ಪ್ರತಿಷ್ಠಿತ ಟೂರ್ನಮೆಂಟ್‌ಗೆ ಅಭರಣ್ (The Original Abharan – Since 1935) ಶೀರ್ಷಿಕೆ ಪ್ರಾಯೋಜಕರಾಗಿ ಬೆಂಬಲ ನೀಡಿದ್ದು, ಪಂದ್ಯಾವಳಿ ಯಶಸ್ವಿಗೆ ಮಹತ್ವದ ಸಹಕಾರ ನೀಡಿದ್ದಾರೆ.

ಎಸ್‌ವಿಟಿ ಟ್ರೋಫಿ ಈಗಾಗಲೇ ಕ್ರೀಡಾಭಿಮಾನಿಗಳಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದು, ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆಯಾಗುತ್ತಿದೆ. ಕ್ರೀಡಾಸ್ಫೂರ್ತಿ, ಶಿಸ್ತು ಹಾಗೂ ಸಹೋದರತ್ವವನ್ನು ಬೆಳೆಸುವ ಉದ್ದೇಶದಿಂದ ಈ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಜಿಎಸ್‌ಬಿ ಕ್ರಿಕೆಟ್ ಪ್ರೇಮಿಗಳು, ಕ್ರೀಡಾಭಿಮಾನಿಗಳು ಹಾಗೂ ಸ್ಥಳೀಯ ಜಿಎಸ್‌ಬಿ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಂದ್ಯಾವಳಿಗೆ ಉತ್ತೇಜನ ನೀಡಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

one × one =

ಎಸ್‌ವಿಟಿ ಟ್ರೋಫಿ–2026: ಜಿಎಸ್‌ಬಿ ವಾಲಂಟಿಯರ್ಸ್ ಪ್ರೀಮಿಯರ್ ಲೀಗ್‌ಗೆ ಭರ್ಜರಿ ಸಿದ್ಧತೆ

ಎಸ್‌ವಿಟಿ ಟ್ರೋಫಿ–2026: ಜಿಎಸ್‌ಬಿ ವಾಲಂಟಿಯರ್ಸ್ ಪ್ರೀಮಿಯರ್ ಲೀಗ್‌ಗೆ ಭರ್ಜರಿ ಸಿದ್ಧತೆ ಮಂಗಳೂರು: ಕಾರ್‌ಸ್ಟ್ರೀಟ್ ಮಂಗಳೂರು ಮೂಲದ ಎಸ್‌ವಿಟಿ ವಾಲಂಟಿಯರ್ಸ್ ಅಸೋಸಿಯೇಷನ್ ವತಿಯಿಂದ ಪ್ರತಿಷ್ಠಿತ ಎಸ್‌ವಿಟಿ ಟ್ರೋಫಿ–2026 (GSB Volunteers’ Premier League – Season 4) ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಈ ಪಂದ್ಯಾವಳಿ 2026ರ ಜನವರಿ 1, 2 ಹಾಗೂ 3ರಂದು ಡೊಂಗರ್‌ಕೇರಿಯಲ್ಲಿರುವ ಕೆನರಾ ಹೈಸ್ಕೂಲ್ ಸಿಬಿಎಸ್‌ಇ ಮೈದಾನದಲ್ಲಿ ನಡೆಯಲಿದೆ. ಪಂದ್ಯಾವಳಿ ಫ್ಲಡ್ ಲೈಟ್ ವ್ಯವಸ್ಥೆಯೊಂದಿಗೆ, ಆಕ್ಷನ್ ಆಧಾರಿತವಾಗಿ ನಡೆಯಲಿದ್ದು, ಸಬ್ ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಒಟ್ಟು 18 ತಂಡಗಳು ಈ ಲೀಗ್‌ನಲ್ಲಿ ಭಾಗವಹಿಸಲಿದ್ದು, ಪ್ರತಿದಿನ ಸಂಜೆ 3.30 ಗಂಟೆಯಿಂದ ಪಂದ್ಯಗಳು ಆರಂಭವಾಗಲಿವೆ. ಈ ಪ್ರತಿಷ್ಠಿತ ಟೂರ್ನಮೆಂಟ್‌ಗೆ ಅಭರಣ್ (The Original Abharan – Since 1935) ಶೀರ್ಷಿಕೆ ಪ್ರಾಯೋಜಕರಾಗಿ ಬೆಂಬಲ ನೀಡಿದ್ದು, ಪಂದ್ಯಾವಳಿ ಯಶಸ್ವಿಗೆ ಮಹತ್ವದ ಸಹಕಾರ ನೀಡಿದ್ದಾರೆ. ಎಸ್‌ವಿಟಿ ಟ್ರೋಫಿ ಈಗಾಗಲೇ ಕ್ರೀಡಾಭಿಮಾನಿಗಳಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದು, ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆಯಾಗುತ್ತಿದೆ. ಕ್ರೀಡಾಸ್ಫೂರ್ತಿ, ಶಿಸ್ತು ಹಾಗೂ ಸಹೋದರತ್ವವನ್ನು ಬೆಳೆಸುವ ಉದ್ದೇಶದಿಂದ ಈ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಜಿಎಸ್‌ಬಿ ಕ್ರಿಕೆಟ್ ಪ್ರೇಮಿಗಳು, ಕ್ರೀಡಾಭಿಮಾನಿಗಳು

Send this to a friend