5 C
London
Wednesday, April 24, 2024
Homeಭರವಸೆಯ ಬೆಳಕುಕ್ರೀಡಾ ಕ್ಷೇತ್ರದ ಸಾಧಕಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ಶ್ರೀಮತಿ ಸವಿತಾ ಶೆಟ್ಟಿ ನೆರವಿಗಾಗಿ ಮನವಿ

ಕ್ರೀಡಾ ಕ್ಷೇತ್ರದ ಸಾಧಕಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ಶ್ರೀಮತಿ ಸವಿತಾ ಶೆಟ್ಟಿ ನೆರವಿಗಾಗಿ ಮನವಿ

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಮನುಷ್ಯ ತನ್ನ ಚಂದವನ್ನು ಹೆಚ್ಚಿಸಿ ಕೊಳ್ಳುವ ಪ್ರಯತ್ನ ಕನ್ನಡಿ ಮುಂದೆ ನಿಂತು ಮಾಡುತ್ತಾನೆ.. ಆದರೆ ತನ್ನ ಅಂದವನ್ನು ಓಲೈಸದೆ ಜೀವನ ಅಂದರೆ ಕನ್ನಡಿ ಇದ್ದ ಹಾಗೆ ನಕ್ಕರೆ ನಗುತ್ತದೆ ಅತ್ತರೆ ಅಳುತ್ತದೆ. ಅಳುವೇ ಜೀವನ ಅಂತ ಅಂದುಕೊಂಡು ಇದ್ದರೆ ಬಹುಶಃ ಈಕೆ ಇಷ್ಟು ಸಾಧನೆ ಮಾಡಲು ಸಾಧ್ಯ ಆಗುತ್ತಿರಲಿಲ್ಲ.
ಕನಸು ಕಂಗಳಲ್ಲಿ ಬಂದು ಭರವಸೆಯ ಹಾದಿಯಲ್ಲಿ ಸಾಗುತ್ತಿರುವಾಗಲೇ ಅದೆಂತಹ ಘೋರ ಅನ್ಯಾಯ?
ಹೌದು ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಓಟಗಾತಿ, ಮೂಲತಃ ಶೃಂಗೇರಿಯ ಪ್ರಸ್ತುತ ಉಡುಪಿ ದೊಡ್ಡಣಗುಡ್ಡೆಯ ನಿವಾಸಿ  ಶ್ರೀಮತಿ ಸವಿತಾ ಶೆಟ್ಟಿ ಅವರ ಕಣ್ಣೀರಿನ ಕತೆ.
ಕಡು ಬಡತನದಿಂದ ಬೆಳೆದ ಸವಿತಾ ಇವರಿಗೆ ಹೊಟ್ಟೆಯ ಹಸಿವು ತಣಿಸುವುದೇ ಸಮಸ್ಯೆ ಆದಾಗ ಓದನ್ನು ಅರ್ಧಕ್ಕೆ ನಿಲ್ಲಿಸಿ ಅಪ್ಪ ಅಮ್ಮ ತೋರಿಸಿದವರ ಜೊತೆಗೆ 16 ನೇ ವಯಸ್ಸಿನಲ್ಲಿ ವಿವಾಹ ಆಯಿತು.  ಮದುವೆ ಆದ ಇವರ ಸಂತಸದ ವೈವಾಹಿಕ ಜೀವನವನ್ನು ನೋಡಲು ದೇವರಿಗೆ ಸಹಿಸಲು ಆಗಲಿಲ್ಲ ಅನ್ನುವ ಹಾಗೆ ಜೀವನ ಸಂಗಾತಿಯನ್ನು 2004 ರಲ್ಲಿ ಅಂದರೆ ತನ್ನ 24 ನೇ ವಯಸ್ಸಿನಲ್ಲಿ  ಪತಿಯನ್ನು ಕಳೆದುಕೊಂಡರು.
ಅದಾಗಲೇ ಎರಡು ಗಂಡು ಮಕ್ಕಳಾದ ಇವರಿಗೆ ಜೀವನ ನಡೆಸುವುದು ಅಸಾಧ್ಯ ಅನಿಸಿದ್ದು ಸುಳ್ಳಲ್ಲ. ತೀರ ಬಡ ಕುಟುಂಬದಿಂದ ಬಂದ ಇವರಿಗೆ ಮತ್ತೆ ತವರೂರಿಗೆ, ಮತ್ತು ಕೊಟ್ಟ ಮನೆಗೆ ಹೊರೆ ಆಗಲು ಮನಸಾಗಲಿಲ್ಲ.
ಎರಡು ಮಕ್ಕಳು ಕಾಲಿಗೆ ಧರಿಸಲು ಚಪ್ಪಲಿ ಕೂಡ ಇಲ್ಲದ ಸ್ಥಿತಿಯಲ್ಲಿ ಉಡುಪಿಗೆ 2005 ರಲ್ಲಿ ಬಂದು ಮಣಿಪಾಲ ವಿಶ್ವವಿದ್ಯಾಲಯದಲ್ಲಿ “ಹೌಸ್ ಕೀಪಿಂಗ್ ಸ್ಟಾಫ್” ಕೆಲಸ ಮಾಡಲು ಆರಂಭಿಸಿದರು.
ಕಷ್ಟದ ನಡುವೆಯೂ ಬಂದ ಎಲ್ಲ ಕಷ್ಟಗಳನ್ನು ಎದುರಿಸುತ್ತ ಬಂದರು.
ಹೌದು ಕಷ್ಟ ಬಂದವರಿಗೆ ಮತ್ತೆ ಮತ್ತೆ ಪರೀಕ್ಷೆ ನಡೆಯುತ್ತಲೇ ಇರುತ್ತವೆ ಎನ್ನುವುದು ಮತ್ತೊಮ್ಮೆ ಅವರ ಜೀವನದಲ್ಲಿ ನಡೆದೇ ಹೋಯಿತು.
2009 ರಲ್ಲಿ ಒಂದು ದಿನ ಮನೆಯ ಕೆಲಸ ನಿರ್ವಹಿಸುವ ಸಮಯದಲ್ಲಿ ಸೀಮೆ ಎಣ್ಣೆ ಒಲೆ ಸಿಡಿದು ಮೈ ಪೂರ್ತಿ ಸುಟ್ಟು , ಮುಖದ ಒಂದು ಭಾಗ, ಮೈಯ ಅರ್ಧ ಭಾಗ ಸಂಪೂರ್ಣ ಸುಟ್ಟು ಹೋಗಿದೆ. ದೇವರ ದಯೆ ಮತ್ತು ತಾನು ಮಾಡಿದ ಒಳ್ಳೆಯ ಕೆಲಸದಿಂದ ಇಷ್ಟೇ ಆಯಿತು ಅನ್ನುತ್ತಾರೆ ಸವಿತಾ.
ಧೈರ್ಯವಂತೆ ಸವಿತಾ ಸ್ವಲ್ಪ ಚೇತರಿಕೆ ಕಂಡವರೇ ಮತ್ತೆ ತನ್ನನ್ನು ತಾನು ಕೆಲಸದಲ್ಲಿ ತೊಡಿಸಿಕೊಂಡು ಉದ್ಯೋಗದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಹವಣಿಸ ತೊಡಗಿದರು, ಸಾಮಾಜಿಕವಾಗಿಯೂ ತನ್ನನ್ನು ತಾನು ತೊಡಗಿಸಿ ಕೊಂಡು ಸಾಧನೆ ಮಾಡಲು ಕೇಂದ್ರೀಕೃತವಾದರು. ಸಾಧಿಸುವ ಛಲ ಹೊತ್ತು ಮುನ್ನಡೆದರು.
ಛಲ ಬಿಡದ ಮಲ್ಲನಂತೆ ನಿರಂತರ ಹೋರಾಟದ ಫಲವಾಗಿ 2017 ರಿಂದ  ಸಾಧನೆಯನ್ನು ಮಾಡುತ್ತಲೇ ಹೋದರು.
ಉದಯ ಯುವಕ ಕಲಾ ಸಂಘ ಮಲ್ಪೆ ಇಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನ,
ಜಿಲ್ಲಾ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನ
ಬಂಟರ ಸಂಘದ ವತಿಯಿಂದ ನಡೆದ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನ
ವನದುರ್ಗಾ ಫ್ರೆಂಡ್ಸು ಕಟಪಾಡಿ ಇವರು ನಡೆಸುವ ಕ್ರೀಡಾಂಗಣದಲ್ಲಿ ಭಾಗವಹಿಸಿ ಬಹುಮಾನ
ಮಾಸ್ಟರ್ ಅಥ್ಲೆಟಿಕ್ ಸಂಸ್ಥೆ ಬೆಂಗಳೂರು ಇವರ ವತಿಯಿಂದ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನ
ಮಣಿಪಾಲ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ ಬಹುಮಾನ
2019 ಆಗಸ್ಟ್ 17 – 18 ರಂದು  ಸಿಂಗಾಪುರದ ಬ್ರೂನೈ ಯಲ್ಲಿ ನಡೆದ ಕ್ರೀಡಾಕೂಟದಲ್ಲಿ 400 ಮೀಟರ್ ಓಟದಲ್ಲಿ ಮೂರನೆ ಬಹುಮಾನ ಪಡೆದ ಹೆಗ್ಗಳಿಕೆ ಇವರದು.
200, 400, 800 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ ಭಾಗವಹಿಸಿದ ಎಲ್ಲಾ ಕಡೆಯೂ ಬಹುಮಾನ ಪಡೆದಿದ್ದಾರೆ.
ಕ್ರೀಡಾಂಗಣದಲ್ಲಿ ತಮ್ಮ ಓಟದಿಂದ ಸಾಧನೆ ಮಾಡಿದ ಇವರು ತನ್ನನ್ನು ತಾನು ಸಾಮಾಜಿಕವಾಗಿ ಬಹಳಷ್ಟು ತೊಡಗಿಸಿಕೊಂಡಿದ್ದಾರೆ.
ಡಾಕ್ಟರ್ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಸೇವೆ , ಅಲ್ಲದೆ ಈಕೆ ಅತ್ಯುತ್ತಮ ಚಂಡೆವಾದಕಿ. ತಮ್ಮದೇ ಒಂದು ಪಂಗಡ ಮಾಡಿಕೊಂಡು ಎಲ್ಲಾ ಕಡೆ ಕಾರ್ಯಕ್ರಮ ನಡೆಸಲು ಹೋಗುತ್ತಾರೆ. ಕುಣಿತ ಭಜನೆ ಇವರ ಇನ್ನೊಂದು ಹವ್ಯಾಸ. ಜೊತೆಗೆ ಯಕ್ಷಗಾನ ಕಲಾವಿದೆ.  ನವೋದಯ ಒಕ್ಕೂಟದ ಅಧ್ಯಕ್ಷೆ ಕೂಡ.
ಇಷ್ಟೆಲ್ಲಾ ಸಾಧನೆ ಸಮಾಜ ಸೇವೆ ಮಾಡುವ ಮೂಲಕ ಹೆಸರು ಮಾಡಿರುವ ಈಕೆಯ ಜೀವನದಲ್ಲಿ ಮತ್ತೊಂದು ಬಹು ದೊಡ್ಡ ಆಘಾತ ನಡೆದೇ ಹೋಯಿತು.
ಸದಾಕಾಲ ಸಮಾಜ ಸೇವೆ ಸಲ್ಲಿಸುತ್ತಿರುವ ಈಕೆಗೆ ಇತ್ತೀಚೆಗೆ ಅನಾರೋಗ್ಯ ಮತ್ತೆ ಕಾಡಿತು. ಫೆಬ್ರವರಿ ತಿಂಗಳಲ್ಲಿ ಅಥ್ಲೆಟಿಕ್ಸ್ ಗಾಗಿ ಹೊರ ದೇಶಕ್ಕೆ ಹೋಗಬೇಕಾದ ಈಕೆಗೆ ಸ್ತನ ಕ್ಯಾನ್ಸರ್ ಇರುವುದು ತಿಳಿದು ಬಂತು.
ತನ್ನ ಕನಸನ್ನು ನನಸು ಮಾಡಿಕೊಳ್ಳಲು ಅವಕಾಶ ಬಂದಾಗ ಇಂತಹ ದೊಡ್ಡ ಆಘಾತ ಸಹಿಸಲು ಆಗಲೇ ಇಲ್ಲ.
ಬಹುಶಃ ಈಕೆಯ ಜೀವನದಲ್ಲಿ ಇಂತಹ ಘಟನೆ ನಡೆದಿರುವುದು ತುಂಬಾ ಆಘಾತಕಾರಿ ಅಂಶವಾಗಿದೆ.
ಬಡತನದ ಕಾರಣದಿಂದ ಆಸ್ಪತ್ರೆಯ ವೈದ್ಯಕೀಯ ವೆಚ್ಚವನ್ನು ಭರಿಸಲು ತುಂಬಾ ಕಷ್ಟ ಸಾಧ್ಯ. ಒಂದು ಬಾರಿಯ ಕೀಮೋ ಥೆರಪಿಗೆ ಸಮಾರು ವೆಚ್ಚ ಭರಿಸಬೇಕು. ಒಬ್ಬ ಮಗ ಹತ್ತನೇ ತರಗತಿ ಮುಗಿಸಿ ಅನಿವಾರ್ಯ ಕಾರಣಗಳಿಂದ ದುಡಿಯುತ್ತಿದ್ದಾನೆ. ಎರಡನೆಯ ಮಗನನ್ನು ಆದರೂ ಚೆನ್ನಾಗಿ ಓದಿಸಬೇಕು ಅನ್ನುವ ಆಸೆ ಸವಿತಾ ಅವರದ್ದು. ಅನೇಕ ಸಂಘ ಸಂಸ್ಥೆಗಳು ಈಕೆಯ ಸಾಧನೆಯನ್ನು ಗುರುತಿಸಿ ಸಹಾಯ ಹಸ್ತ ಚಾಚಿದ್ದಾರೆ. ಅವರೆಲ್ಲರ ಸಹಕಾರದಿಂದ ಆಸ್ಪತ್ರೆಯ ವೈದ್ಯಕೀಯ ವೆಚ್ಚವನ್ನು ಭರಿಸುತ್ತಿದ್ದಾರೆ.
ಜೀವನ ಮತ್ತು ಅದರ ಮೌಲ್ಯಗಳ ಬಗ್ಗೆ ಮಾತನಾಡುವ ಪ್ರಬುದ್ಧತೆ ಇಲ್ಲ. ಆದರೂ ಜೀವನದಲ್ಲಿ ಬರುವ ಅನುಭವಗಳ ಚಿಂತನೆಗಳ ಬೆಳವಣಿಗೆಗಳಲ್ಲಿ ನಮ್ಮ ಪಯಣ ಎಷ್ಟೊಂದು ಸೋಲು ಗೆಲುವಿನಿಂದ ಕೂಡಿರುತ್ತದೆ ಅನ್ನವುದಕ್ಕೆ ಉದಾಹರಣೆ ಶ್ರೀಮತಿ ಸವಿತಾ ಶೆಟ್ಟಿ.
ಬಾಡಿಗೆ ಮನೆಯಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಾಗಿರುವ ಈಕೆ ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು ಧೈರ್ಯದಿಂದ ಎದುರಿಸಿದ ಈಕೆಗೆ ಈಗಿನ ಪರಿಸ್ಥಿತಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ.
ಹಾಗಾಗಿ ತಮ್ಮೆಲ್ಲರ ಸಹಕಾರದ ನಿರೀಕ್ಷೆಯಲ್ಲಿ ಇದ್ದೇನೆ.
ಇಂತಿ ತಮ್ಮ ವಿಶ್ವಾಸಿ
ಶ್ರೀಮತಿ ಸವಿತಾ ಶೆಟ್ಟಿ
ದೊಡ್ಡಣಗುಡ್ಡೆ ಉಡುಪಿ 
Ac. No :0233220000434
IFSC :SYNB0000233
Mob no :8748955492
ಕೋಟ ರಾಮಕೃಷ್ಣ ಆಚಾರ್ಯ: +91 6363 022 576
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

five × four =