ಕ್ರಿಕೆಟ್ಟೆನಿಸ್ಬಾಲ್ ಕ್ರಿಕೆಟ್ ನ ಜಗಜಟ್ಟಿಗಳ ಕಾಳಗ- ಬೆಣ್ಣೆ ನಗರಿಯಲ್ಲಿ ನಡೆಯಲಿದೆಯೇ ಲಂಕಾ...

ಟೆನಿಸ್ಬಾಲ್ ಕ್ರಿಕೆಟ್ ನ ಜಗಜಟ್ಟಿಗಳ ಕಾಳಗ- ಬೆಣ್ಣೆ ನಗರಿಯಲ್ಲಿ ನಡೆಯಲಿದೆಯೇ ಲಂಕಾ ದಹನ?

-

- Advertisment -spot_img

ಟೆನಿಸ್ಬಾಲ್ ಕ್ರಿಕೆಟ್ ನ ಜಗಜಟ್ಟಿಗಳ ಕಾಳಗ- ಬೆಣ್ಣೆ ನಗರಿಯಲ್ಲಿ ನಡೆಯಲಿದೆಯೇ ಲಂಕಾ ದಹನ?

ಟೆನಿಸ್ಬಾಲ್ ಕ್ರಿಕೆಟ್ ವಿಶ್ವಕಪ್ ಗೆ ಬೆಣ್ಣೆನಗರಿ ಸಜ್ಜಾಗುತ್ತಿದೆ.‌ಇದೇ ಬರುವ ನವೆಂಬರ್ 26 ದಾವಣಗೆರೆಯಲ್ಲಿ ಕ್ರಿಕೆಟ್ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಕ್ರಿಕೆಟ್ ಪ್ರಿಯರ ಬಹು ನಿರೀಕ್ಷೆಯ ಶಾಮನೂರು ಡೈಮಂಡ್ ಮತ್ತು ಶಿವಗಂಗಾ ಕಪ್ 17 ನೇ ಬಾರಿ ದಿವಂಗತ ಪಾರ್ವತಿ ಶಿವಶಂಕರಪ್ಪ ಇವರ ಸ್ಮರಣಾರ್ಥ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಕಣ್ಣು ಕೋರೈಸುವ ಹೊನಲು ಬೆಳಕಿನಲ್ಲಿ ನಡೆಯಲಿದೆ.

ಪ್ರತೀ ವರ್ಷ ದಾವಣಗೆರೆ ಕ್ರಿಕೆಟ್ ಪಂದ್ಯವನ್ನಾಡಲು ಕನಸು ಕಾಣುವ ಆಟಗಾರರ ಪಡೆ ಬಹಳಷ್ಟು ದೊಡ್ಡದಿದೆ. ಈ ಬಾರಿಯೂ ಕೂಡ ಮುಂಬಯಿ,ಮಧ್ಯಪ್ರದೇಶ,ಕೇರಳ,ಚೆನ್ನೈ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 50 ತಂಡಗಳು ಕತ್ತು ಕತ್ತಿನ ಹೋರಾಟ ನಡೆಯಲಿದ್ದು ಕ್ರೀಡಾ ಪ್ರೇಕ್ಷಕರ ಕಣ್ಣು ದಾವಣಗೆರೆಯತ್ತ ನೆಟ್ಟಿದೆ.

ದಾವಣಗೆರೆಯಲ್ಲಿ ಇದೇ ಮೊದಲ ಬಾರಿಗೆ ಶ್ರೀಲಂಕಾ ತಂಡ ಬಂದಿಳಿಯಲಿದ್ದು, ನವೆಂಬರ್ 30 ಸಂಜೆ 7 ಗಂಟೆಗೆ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಪ್ರದರ್ಶನ ಪಂದ್ಯ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಲಿದೆ. ಮೊನಚಾದ ಬೌಲಿಂಗ್,ಅಬ್ಬರದ ಬ್ಯಾಟಿಂಗ್ ಪಡೆಯನ್ನೇ ಹೊಂದಿರುವ ಶ್ರೀಲಂಕಾ,ಬಹುತೇಕ ಕರ್ನಾಟಕದ ಆಟಗಾರರಿಂದ ಕೂಡಿದ ಭಾರತ ತಂಡವನ್ನು ಮಣಿಸುವುದೇ ಅಥವಾ ಬೆಣ್ಣೆಗೆರೆ ದಾವಣಗೆರೆಯಲ್ಲಿ ಲಂಕಾ ದಹನ ನಡೆಯುವುದೇ ಕಾದು ನೋಡೋಣ.

ದಾವಣಗೆರೆ ಕ್ರಿಕೆಟ್ ಹಬ್ಬದ ಕ್ಷಣ ಕ್ಷಣದ ಮಾಹಿತಿಗಾಗಿ ಸ್ಪೋರ್ಟ್ಸ್ ಕನ್ನಡ ಚಾನೆಲ್ ವೀಕ್ಷಿಸಿ.

LEAVE A REPLY

Please enter your comment!
Please enter your name here

nineteen + eighteen =

Latest news

ಯಶಸ್ವೀ ಬದುಕಿಗೆ ಕ್ರೀಡೆ ಅವಶ್ಯ:ವಿಠಲ್ ರಿಶಾನ್ ನಾಯಕ್.

ಯಶಸ್ವೀ ಬದುಕಿಗೆ ಕ್ರೀಡೆ ಅವಶ್ಯ:ವಿಠಲ್ ರಿಶಾನ್ ನಾಯಕ್. ಬ್ರಹ್ಮಾವರ ಸಂತೆಕಟ್ಟೆಯಲ್ಲಿ ವಿರಾಟ್ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾದ ಮಾನ್ಸೂನ್ ಟ್ರೋಫಿ -26 ಕ್ರಿಕೆಟ್ ಪಂದ್ಯಾಟವು ಶುಭಾರಂಭಗೊಂಡಿತು. ದುಬೈ ಟೆಕ್ನೋಟೈಟಾನ್ಸ್ ಕ್ರಿಕೆಟ್...

ಬಿಹಾರದ ಕನಸುಗಳಿಗೆ ಹೊಸ ರೆಕ್ಕೆ ನೀಡಿದ ವೈಭವ್ ಸೂರ್ಯವಂಶಿ

ಬಿಹಾರದ ಕನಸುಗಳಿಗೆ ಹೊಸ ರೆಕ್ಕೆ ನೀಡಿದ ವೈಭವ್ ಸೂರ್ಯವಂಶಿ ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲ; ಅದು ಜನರ ಭಾವನೆ ಮತ್ತು ಗುರುತಿನ ಭಾಗವಾಗಿದೆ. ಆದರೆ ದೀರ್ಘಕಾಲದವರೆಗೆ ಬಿಹಾರ...

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026 ಮಂಗಳೂರು: ಜಿಎಸ್‌ಬಿ ಸಮುದಾಯದ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆಯಾಗಿರುವ ಪ್ರತಿಷ್ಠಿತ **ಪ್ಯಾಂಥರ್ಸ್ ಸೂಪರ್...

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 96 ರನ್: ವೈಭವ್ ಸೂರ್ಯವಂಶಿಯ ಸ್ಫೋಟಕ ಪ್ರತಿಭೆಗೆ ಕ್ರಿಕೆಟ್ ಲೋಕ ಫಿದಾ 15 ವರ್ಷದ...
- Advertisement -spot_imgspot_img

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ.) ಬೆಳಪು, 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ.) ಬೆಳಪು, 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026 ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ಮೇರಾ ಯುವ ಭಾರತ್, ಉಡುಪಿ...

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...

Must read

- Advertisement -spot_imgspot_img

You might also likeRELATED
Recommended to you