ತನ್ನ ವಿಶಿಷ್ಟ ಶೈಲಿಯ ಬೌಲಿಂಗ್ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮೂಲಕ ಆಲ್ ರೌಂಡ್ ಆಟಗಾರ ಅಂತ ಅನಿಸಿ ಕೊಂಡಿರುವ ರಾಜ್ಯ ಮಟ್ಟದಲ್ಲಿ ಗುರುತಿಸಿ ಕೊಂಡಿರುವ ಪ್ರಸಿದ್ಧ ಟೆನಿಸ್ ಬಾಲ್ ಕ್ರಿಕೆಟ್ ಆಟಗಾರ ಉಡುಪಿಯ ಮೂಲತಃ ಕಾಪು ಸಮೀಪದ ಪಾಂಗಾಳ ನಿವಾಸಿ 32 ವರ್ಷ ವಯಸ್ಸಿನ ಪ್ರಶಾಂತ್ ಕುಮಾರ್ ಕ್ರಿಕೆಟ್ ಆಟ ಆಡುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ತುಮಕೂರಿನ ಕ್ರಿಕೆಟ್ ಅಂಗಳದಲ್ಲಿ ನಡೆದಿದೆ.
ಆ ದಿನದ ಪಂದ್ಯದಲ್ಲಿ ಸತತ ಸಿಕ್ಸರ್ ಬಾರಿಸುತ್ತಿದ್ದ ಇವರು ನೀರು ಕುಡಿದು ಮರುಕ್ಷಣ ಕುಸಿದು ಬಿದ್ದ ಇವರನ್ನು ಆಸ್ಪತ್ರೆಗೆ ದಾಖಲು ಮಾಡಿತಾದರೂ ಕೂಡ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ತಂಡಗಳನ್ನು ಪ್ರತಿನಿಧಿಸಿದ್ಧ ಪ್ರಶಾಂತ್ ಬೆಂಗಳೂರು ಉದ್ಯೋಗಿ ಆಗಿದ್ದು ತಾಯಿ ಪತ್ನಿ ಮತ್ತು ಇಬ್ಬರು ಸಹೋದರರನ್ನು ಆಗಲಿದ್ದಾರೆ.
ಇನ್ನೊಬ್ಬ ಭರವಸೆಯ ಆಟಗಾರ ಮಂಗಳೂರಿನ ವಾಮಂಜೂರು ಮೂಲದ ಉಲ್ಲಾಸ್ ಮೆನೆಜಸ್. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಫೆಬ್ರುವರಿ 28 ರಂದು ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ಒಬ್ಬ ಭರವಸೆಯ ಬೆಳಕು ಅನಿವಾಸಿ ಭಾರತೀಯರ ಪರವಾಗಿ ಯು ಎ ಇ ಯಲ್ಲಿ ಅನೇಕ ಸಂಸ್ಥೆಗಳ ಪರವಾಗಿ ಆಟ ಆಡಿರುವ ಈತ ಪಯಾರು ಪಂಟರ್ಸ್ ಪರವಾಗಿ ಆಡಿರುವ ಒಬ್ಬ ಒಳ್ಳೆಯ ಕಲಾವಿದ ಕೂಡ ಹೌದು.
ಜೊತೆಗೆ ಹಲವಾರು ಕಾರ್ಯಕ್ರಮಗಳಿಗೆ ಸಂಘಟಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮರೆಯಾದ ಆಟಗಾರರ ಅತ್ಮಕ್ಕೆ ಶಾಂತಿ ಸಿಗಲಿ. ಮತ್ತೊಮ್ಮೆ ಈ ಆಟಗಾರರು ಹುಟ್ಟಿ ಬರಲಿ ಅನ್ನುವ ಹಾರೈಕೆ.
ಸ್ಪೋರ್ಟ್ಸ್ ಕನ್ನಡ ಜಾಲತಾಣದ ವತಿಯಿಂದ
ಕೋಟ ರಾಮಕೃಷ್ಣ ಆಚಾರ್ಯ.