Categories
ಕ್ರಿಕೆಟ್ ರಾಜ್ಯ

“ಚಕ್ರವರ್ತಿ ಟ್ರೋಫಿ-2020” ಅನಾವರಣ ಸಮಾರಂಭ

ತುಮಕೂರು: ಚನ್ನಿಗಪ್ಪ ನನ್ನ ರಾಜಕೀಯ ಗುರು ಎಂದರು ಕೃಷ್ಣಮೂರ್ತಿ. ಸ್ವತಃ ಕ್ರೀಡಾಪಟು ಕೂಡಾ ಆಗಿರುವ ಅವರು ಕಾರ್ಯಕ್ರಮಗಳನ್ನು ಏರ್ಪಡಿಸುವುದರಲ್ಲಿ ‘ಧೂಮ್ ಧಾಮ್’. ಈಗ ಚಕ್ರವರ್ತಿ ಗೆಳೆಯರ ಬಳಗದ ಅಡಿಯಲ್ಲಿ ಮತ್ತೊಮ್ಮೆ ಫೆಬ್ರವರಿ ೨೮ ರಿಂದ ಮಾರ್ಚ್ ೧ ರ ವರೆಗೆ ರಾಜ್ಯಮಟ್ಟದ ಹೊನಲು ಬೆಳಕಿನ ಟೆನಿಸ್ ಬಾಲ ಕ್ರಿಕೆಟ್ ಟೂರ್ನಮೆಂಟ್ ಏರ್ಪಡಿಸಿ ಮತ್ತೆ ಪಿಚ್ ಗೆ ಬಂದಿದ್ದಾರೆ.

 

ಸುಮಾರು ೨೪ ತಂಡಗಳು ಪಾಲ್ಗೊಳ್ಳುತ್ತಿರುವ ಈ ಟೂರ್ನಿ ಹೆಸರಾಂತ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಅಂದ ಹಾಗೆ ಉದ್ಘಾಟನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರವಾಗಿ ಅವರ ಸುಪುತ್ರ ಬಿ ವೈ ವಿಜಯೇಂದ್ರ ಬರಲಿದ್ದಾರೆ.

ಖ್ಯಾತ ಕ್ರಿಕೆಟ್ ಪಟು ಭಾರತದ ಮಾಜಿ ನಾಯಕ ಮೊಹಮದ್ ಅಝರುದ್ದೀನ್ ಕೂಡಾ ಆಗಮಿಸಲಿದ್ದಾರೆ. ಅಂದ ಹಾಗೆ ದೊಡ್ದಗಣೇಶ್ ಮತ್ತು ಕೃಷ್ಣಮೂರ್ತಿ ಜತೆ ಜತೆಯಲ್ಲೇ ಬೆಂಗಳೂರಿನ ಪೀಣ್ಯದಲ್ಲಿ ಕ್ರಿಕೆಟ್ ಆಡಿ ಬೆಳೆದವರು.

ಅವರು ಬಂದೇ ಬರುತ್ತಾರೆ. ನಗರ ಶಾಸಕ ಜ್ಯೋತಿಗಣೆಶ್ ಅವರಿಂದ ಹಿಡಿದು ಸಚಿವ ಜೆ ಸಿ ಮಾಧುಸ್ವಾಮಿ ಸೇರಿದಂತೆ ಉದ್ಯಮಿ ಎನ್ ಎಸ್ ಜಯಕುಮಾರ್ ಕೂಡಾ ಸಹಕಾರ ನೀಡಿದ್ದಾರೆ ಎನ್ನುತ್ತಾರೆ ಮೂರ್ತಿ. ಪಕ್ಷಾತೀತ ಜಾತ್ಯತೀತವಾಗಿ ಜನರನ್ನು ಸಂಭಾಳಿಸುವ ಕಲೆ ಕರಗತ ಮಾಡಿಕೊಂಡಿರುವ ಅವರಿಗೆ ಧನಿಯಾ ಕುಮಾರ್, ಚಕ್ರವರ್ತಿ ಪ್ರಕಾಶ್, ಪಚ್ಚಿ, ಪಾಚಿ, ಶಿವಪ್ರಸಾದ್, ಚೇತನ್ ಸೇರಿದಂತೆ ಅವರೆಲ್ಲರ ಸ್ಫೂರ್ತಿಯ ಸೆಲೆ ನೇತಾಜಿ ಶ್ರೀಧರ್ ಅವರೂ ಕೂಡಾ ಸಾಥ್ ನೀಡಿದ್ದಾರೆ.

 

ಟೂರ್ನಿ ಚಾಂಪಿಯನ್ಷಿಪ್ ಬರೋಬರಿ ೨.೫ ಲಕ್ಷ ರೂಪಾಯಿ ರನ್ನರ್ ಅಪ್ ತಂಡಕ್ಕೆ ೧.೫ ಲಕ್ಷ ರೂಪಾಯಿ. ಹೊರ ಊರಿನಿಂದ ಬಂದ ಆಟಗಾರರಿಗೆ ಉಳಿದುಕೊಳ್ಳಲು ವಿಜ್ಞೇಶ್ವರ ಕಂಫರ್ಟ್ಸ್ ಮಾಲೀಕ ಚಂದ್ರಮೌಳಿ ಸಹಕರಿಸಲಿದ್ದಾರಂತೆ.

ಸುಮಾರು ಹದಿನೈದು ವರ್ಷದ ಹಿಂದೆ ಕೋಳಾಲ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದ ಪಿ ಎನ್ ಕೃಷ್ಣಮೂರ್ತಿ ಯಾನೆ ಪಿ ಎನ್ ಕೆ ಮಾಜಿ ಸಚಿವ ದಿವಂಗತ ಸಿ ಚನ್ನಿಗಪ್ಪ ಗರಡಿಯಲ್ಲಿ ಪಳಗಿದ ಕೈ.ಹಾಗಾಗಿ ವೇದಿಕೆಗೆ ಚನ್ನಿಗಪ್ಪ ಅವರ ಹೆಸರನ್ನೇ ಇಡಲಾಗುವುದಂತೆ. ಅಂದ ಹಾಗೆ ಮಾಜಿ ಸಚಿವ ಡಿ ಕೆ ಶಿವಕುಮಾರ ಅವರ ಕಟ್ಟಾ ಅಭಿಮಾನಿ. ಅವರು ಕೆ ಪಿ ಸಿ ಸಿ ಅಧ್ಯಕ್ಷ ಆಗುವುದು ಖಚಿತ ಎನ್ನುತ್ತಾರೆ.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

11 + eighteen =