ಬೆಂಗಳೂರು-ಕನ್ನಡ ಸಾಂಸ್ಕೃತಿಕ ಕ್ರಿಯಾ ಸಮಿತಿ(ರಿ)ಶ್ರೀ ರಾಮಪುರ ಬೆಂಗಳೂರು ಹಾಗೂ ಕಸ್ತೂರಿ ಪ್ರಭ ಸಹಯೋಗದೊಂದಿಗೆ,ಪತ್ರಿಕೆಯ ೯ ನೇ ವಾರ್ಷಿಕೋತ್ಸವ,ಕರ್ನಾಟಕ ನಾಮಕರಣ ಸುವರ್ಣ-೫೦ ರ ಮಹೋತ್ಸವ,ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಖ್ಯಾತ ವೀಕ್ಷಕ ವಿವರಣೆಕಾರ,ರಂಗಭೂಮಿ ಕಲಾವಿದ ಪ್ರಶಾಂತ್ ಕೆ.ಎಸ್ ಅಂಬಲಪಾಡಿ ಯವರಿಗೆ “ಕನ್ನಡ ಸೇವಾರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀಯುತ ಪ್ರಶಾಂತ್ ಅಂಬಲಪಾಡಿ ಇವರಿಗೆ ರಾಜ್ಯ ಟೆನಿಸ್ ಕ್ರಿಕೆಟ್, ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮತ್ತು ಸ್ಟಾರ್ ವರ್ಟೆಕ್ಸ್-Sportskannadatv ಯೂಟ್ಯೂಬ್ ಲೈವ್ ಚಾನೆಲ್ ವತಿಯಿಂದ ಹಾರ್ದಿಕ ಅಭಿನಂದನೆಗಳು.