14 C
London
Monday, September 9, 2024
Homeಯಶೋಗಾಥೆನೀರಿಲ್ಲದ ನೆಲದಿಂದ ಬಂದು ಭಾರತವನ್ನು U-19 ವಿಶ್ವಕಪ್ ಫೈನಲ್’ಗೆ ಮುನ್ನಡೆಸಿದವವನ ಕಥೆ..!

ನೀರಿಲ್ಲದ ನೆಲದಿಂದ ಬಂದು ಭಾರತವನ್ನು U-19 ವಿಶ್ವಕಪ್ ಫೈನಲ್’ಗೆ ಮುನ್ನಡೆಸಿದವವನ ಕಥೆ..!

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಬೆಂಕಿಯಲ್ಲಿ ಬೆಂದ ಬಂಗಾರವೇ ಯಾವಾಗಲೂ ಗಟ್ಟಿ. ಚಿನ್ನ ಫಳಫಳ ಹೊಳೆಯಬೇಕು ಅಂದ್ರೆ ಕುಲುಮೆಯಲ್ಲಿ ಬೇಯಲೇಬೇಕು. ಇದು ಅಂಥಾ ಕುಲಮೆಯಲ್ಲಿ ಬೆಂದು ಬಂದ ಹುಡುಗನೊಬ್ಬನ ಕಥೆ.
ದಕ್ಷಿಣ ಆಫ್ರಿಕಾದಲ್ಲಿ ಅಂಡರ್-19 ವಿಶ್ವಕಪ್ ನಡೆಯುತ್ತಿದೆ. ಭಾರತ ತಂಡ ಮಂಗಳವಾರ ನಡೆದ ಸೆಮಿಫೈನಲ್’ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 2 ವಿಕೆಟ್’ಗಳಿಂದ ರೋಚಕವಾಗಿ ಸೋಲಿಸಿ 9ನೇ ಬಾರಿ ಫೈನಲ್ ಪ್ರವೇಶಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಸೋಲುತ್ತಿದ್ದ ಪಂದ್ಯವನ್ನು ನಾಯಕ ಉದಯ್ ಸಹರಣ್ ಜೊತೆಗೂಡಿ ಗೆಲ್ಲಿಸಿದ್ದು ಇದೇ ಸಚಿನ್ ಧಾಸ್. 245 ರನ್ ಟಾರ್ಗೆಟ್ ಮುಂದೆ 32 ರನ್ನಿಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತ, ಸೋಲಿನತ್ತ ಮುಖ ಮಾಡಿ ನಿಂತಿತ್ತು. ಅಂಥಾ ಸಂದರ್ಭದಲ್ಲಿ ಕೌಂಟರ್ ಅಟ್ಯಾಕ್ ಶುರು ಮಾಡ್ತಾನೆ ಸಚಿನ್ ಧಾಸ್. 95 ಎಸೆತಗಳಲ್ಲಿ 96 ರನ್ ಗಳಿಸಿ ಔಟಾದಾಗ ಭಾರತ ತಂಡ ಗೆಲುವಿನ ಬಾಗಿಲಲ್ಲಿ ನಿಂತಿತ್ತು.
ಟೂರ್ನಮೆಂಟ್’ನ ಬೆಸ್ಟ್ ಬೌಲಿಂಗ್ ಅಟ್ಯಾಕ್ ಅಂತ ಕರೆಸಿಕೊಂಡಿರುವ ದಕ್ಷಿಣ ಆಫ್ರಿಕಾ ವಿರುದ್ಧ, ಅದೂ ಅಂಥಾ ಒತ್ತಡದ ಸಮಯದಲ್ಲಿ ಆ ರೀತಿಯ ಆಟವಾಡಲು ಪ್ರತಿಭೆಯೊಂದಿದ್ದರೆ ಸಾಲದು. Temperament, ಕೆಚ್ಚು, ಕಿಚ್ಚು, ಛಲ, ಧೈರ್ಯ ಬೇಕು. ಒಂದೇ ಇನ್ನಿಂಗ್ಸ್’ನಲ್ಲಿ ಅದೆಲ್ಲವನ್ನೂ ತೋರಿಸಿದ ಸಚಿನ್ ಧಾಸ್, ಭಾರತವನ್ನು ಫೈನಲ್”ಗೆ ಕೊಂಡೊಯ್ದಿದ್ದಾನೆ.
ಸಚಿನ್ ಧಾಸ್ ಮಹಾರಾಷ್ಟ್ರದ ಮರಾಠಾವಾಡ ಪ್ರದೇಶದ ಬೀಡ್ ಎಂಬ ಜಿಲ್ಲೆಯವನು. ಅದು ಸತತ ಬರಗಾಲದಿಂದ ತತ್ತರಿಸಿ ಹೋಗಿರುವ ಊರು. ಕ್ರಿಕೆಟ್ ಆಡುವುದಿರಲಿ, ಬದುಕೇ ದುಸ್ತರ ಎಂಬ ಊರದು. ಅಂಥಾ ಊರಿನಿಂದ ಬಂದು ಅಂಡರ್-19 ವಿಶ್ವಕಪ್ ಸೆಮಿಫೈನಲ್’ನಲ್ಲಿ 96 ರನ್ ಗಳಿಸಿ ಭಾರತ ತಂಡವನ್ನು ಫೈನಲ್’ಗೆ ಮುನ್ನಡೆಸಿದ್ದಾನೆ ಸಚಿನ್ ಧಾಸ್. ಈ ಹುಡುಗನ ಕ್ರಿಕೆಟ್ ಆಸಕ್ತಿಗೆ ನೀರೆರೆರದು ಪೋಷಿಸಿದವರು ಕೋಚ್ ಅಜರ್.
2011ರಲ್ಲಿ ಭಾರತ ಐಸಿಸಿ ವಿಶ್ವಕಪ್ ಗೆಲ್ಲುವ ಹೊತ್ತಿಗೆ ಇಡೀ ಬೀಡ್ ಜಿಲ್ಲೆಯಲ್ಲಿ ಒಂದೇ ಒಂದು ಟರ್ಫ್ ವಿಕೆಟ್ ಇರಲಿಲ್ಲ. ಆಗ ಸಚಿನ್ ಧಾಸ್ ತಂದೆಯ ಬಳಿ ಅಜರ್ ಒಂದು ಮಾತು ಹೇಳ್ತಾರೆ.
“ನಿಮ್ಮ ಮಗನ ಕ್ರಿಕೆಟರ್ ಆಗ್ಬೇಕು ಅಂದ್ರೆ, ನಾವು ಟರ್ಫ್ ವಿಕೆಟ್’ಗಳನ್ನು ನಿರ್ಮಿಸಲೇಬೇಕು. ಇದೇ ರೀತಿ matting ವಿಕೆಟ್’ಗಳಲ್ಲಿ ಆಡ್ತಾ ಇದ್ರೆ, ಆತ ನಮ್ಮಂತೆಯೇ ಆಗಿ ಬಿಡುತ್ತಾನೆ” ಅಂತ.
ಟರ್ಫ್ ವಿಕೆಟ್ ನಿರ್ಮಿಸುವ ಕೆಲಸ ಮರುದಿನ ಬೆಳಗ್ಗೆಯಿಂದಲೇ ಶುರುವಾಗುತ್ತದೆ. ಸಚಿನ್ ಧಾಸ್ ತಂದೆ ಸಂಜಯ್ ಮತ್ತು ಕೋಚ್ ಅಜರ್ ಸಾಲ ಮಾಡಿ roller ಖರೀದಿಸುತ್ತಾರೆ. ಬರದ ನಾಡಿನಲ್ಲಿ ಟರ್ಫ್ ವಿಕೆಟ್ ನಿರ್ಮಿಸಿಯೇ ಬಿಡುತ್ತಾರೆ.
ಟರ್ಫ್ ವಿಕೆಟ್’ಗಳನ್ನು ನಿರ್ವಹಣೆ ಮಾಡಲು ನೀರು ಬೇಕೇ ಬೇಕು. ಮೊದಲೇ ಬರಡು ನೆಲ. ಹೀಗಾಗಿ ದೂರದ ಊರಿನಿಂದ ದುಡ್ಡು ಕೊಟ್ಟು ಮೂರು ದಿನಕ್ಕೊಮ್ಮೆ ಟ್ಯಾಂಕರ್”ನಲ್ಲಿ ನೀರು ತರಿಸ್ತಾರೆ. ಅಲ್ಲಿಂದ ಶುರು ಸಚಿನ್ ಧಾಸ್’ನ ಅಸಲಿ ತಾಲೀಮು. ಹಗಲೂ ರಾತ್ರಿ ಅಜರ್ ಗರಡಿಯಲ್ಲಿ ಕ್ರಿಕೆಟ್ ಅಭ್ಯಾಸ.
2 ವರ್ಷಗಳ ಹಿಂದೆ ಪೂನಾದಲ್ಲಿ U-19 ಟೂರ್ನಿಯೊಂದರಲ್ಲಿ ಆಡುತ್ತಿದ್ದಾಗ ಸಚಿನ್ ಧಾಸ್ ಊರಾಚೆ ಸಿಕ್ಸರ್’ಗಳನ್ನು ಬಾರಿಸುತ್ತಿದ್ದದ್ದನ್ನು ನೋಡಿ ಟೂರ್ನಮೆಂಟ್ ಆಯೋಜಕರಿಗೆ ಅಚ್ಚರಿ. ಏನಪ್ಪಾ ಈ ಹುಡುಗ ಇಷ್ಟು ಸಲೀಸಾಗಿ, ದೊಡ್ಡ ದೊಡ್ಡ ಸಿಕ್ಸರ್’ಗಳನ್ನು ಬಾರಿಸುತ್ತಿದ್ದಾನಲ್ಲಾ… ಹೀಗಂದುಕೊಂಡವರೇ ಮೈದಾನಕ್ಕೆ ಬಂದು ಸಚಿನ್ ಧಾಸ್ ಕೈಯಲ್ಲಿದ್ದ ಬ್ಯಾಟನ್ನು ಪರಿಶೀಲಿಸುತ್ತಾರೆ, ಬ್ಯಾಟ್ ಸೈಜಿನಲ್ಲೇನಾದರೂ ವ್ಯತ್ಯಾಸವಿದೆಯೇ ಎಂಬುದು ಅವರ ಅನುಮಾನವಾಗಿತ್ತು. ಆದರೆ ಆ ಸಿಕ್ಸರ್’ಗಳು ಸಿಡಿಯುತ್ತಿದ್ದದ್ದು ಬ್ಯಾಟ್ ಕಾರಣದಿಂದ ಅಲ್ಲ, ಬ್ಯಾಟ್ ಹಿಡಿದವನ ಕಾರಣದಿಂದ.
ಸಚಿನ್ ಧಾಸ್ ತಂದೆ ಮತ್ತು ತಾಯಿ ಇಬ್ಬರೂ ಮಹಾರಾಷ್ಟ್ರ ಪರ ಆಡಿದ ಕಬಡ್ಡಿ ಕ್ರೀಡಾಪಟುಗಳು. ತಾಯಿ ಮಹಾರಾಷ್ಟ್ರದಲ್ಲಿ Assistant Police Inspector ಆಗಿ ಕೆಲಸ ಮಾಡುತ್ತಿದ್ದಾರೆ. ತಂದೆ ಸಂಜಯ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿ. ಹೀಗಾಗಿ ಮಗನಿಗೆ ಸಚಿನ್ ಎಂದು ಹೆಸರಿಟ್ಟಿದ್ದಾರೆ. ಸಚಿನ್ ಅವರ ಜರ್ಸಿ ನಂ.10 ಧರಿಸಿಯೇ ಅಂಡರ್-19 ವಿಶ್ವಕಪ್”ನಲ್ಲಿ ಆಡುತ್ತಿದ್ದಾನೆ.
#ICCUnder19WorldCup #

Latest stories

LEAVE A REPLY

Please enter your comment!
Please enter your name here

4 × 2 =