ಬಿಗುವಿನ ದಾಳಿಯಿಂದ ಅಬ್ಬರಿಸಿದ ಪ್ರಸಿದ್ಧ್ ಕೃಷ್ಣಾ, ಸಿರಾಜ್‌ : ಐದನೇ ಟೆಸ್ಟ್‌ನಲ್ಲಿ ಭಾರತಕ್ಕೆ ಜಯದ ಭರವಸೆ

ಬಿಗುವಿನ ದಾಳಿಯಿಂದ ಅಬ್ಬರಿಸಿದ ಪ್ರಸಿದ್ಧ್ ಕೃಷ್ಣಾ, ಸಿರಾಜ್‌ : ಐದನೇ ಟೆಸ್ಟ್‌ನಲ್ಲಿ ಭಾರತಕ್ಕೆ ಜಯದ ಭರವಸೆ

ಬಿಗುವಿನ ದಾಳಿಯಿಂದ ಅಬ್ಬರಿಸಿದ ಪ್ರಸಿದ್ಧ್ ಕೃಷ್ಣಾ, ಸಿರಾಜ್‌ : ಐದನೇ ಟೆಸ್ಟ್‌ನಲ್ಲಿ ಭಾರತಕ್ಕೆ ಜಯದ ಭರವಸೆ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯವು ಪ್ರಸ್ತುತ ಉದ್ವಿಗ್ನ ಹಂತದಲ್ಲಿದೆ. ಭಾರತ ಗೆದ್ದರೆ ಸರಣಿ ಸಮಬಲಗೊಳ್ಳುತ್ತದೆ. ಇಂಗ್ಲೆಂಡ್ ಡ್ರಾ ಮಾಡಿಕೊಂಡರೆ ಸರಣಿಯನ್ನು ತನ್ನದಾಗಿಸಿಕೊಳ್ಳುತ್ತದೆ. ಈ ಪಂದ್ಯದಲ್ಲಿ ಭಾರತ ತಂಡ ಖಂಡಿತವಾಗಿಯೂ ಸೋಲುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು.

ಇಂಗ್ಲೆಂಡ್ ಓಪನರ್‌ಗಳು ಅದ್ಭುತವಾಗಿ ಬ್ಯಾಟಿಂಗ್ ಮಾಡುವುದನ್ನು ನೋಡಿದ ನಂತರ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪುಟಿದೇಳುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಭಾರತೀಯ ಬೌಲರ್‌ಗಳು ಅದ್ಭುತವಾಗಿ ಬೌಲಿಂಗ್ ಮಾಡಿ ಇಂಗ್ಲೆಂಡ್ ಅನ್ನು ತಡೆದರು. ಭಾರತೀಯ ಬೌಲರ್‌ಗಳು ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡಿ ಇಂಗ್ಲೆಂಡ್ ತಂಡವನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿದರು.ಸಿರಾಜ್ ಮತ್ತು ಪ್ರಸಿತ್ ಅದ್ಭುತ ಬೌಲಿಂಗ್ ಮಾಡಿದರು. ಅಷ್ಟೇ ಅಲ್ಲ, ಅವರು ಇಂಗ್ಲಿಷ್ ಆಟಗಾರರನ್ನು ನಿರಾಶೆಗೊಳಿಸಿದರು.

ಭರವಸೆಯ ಬೌಲರ್‌ಗಳಾದ ಕನ್ನಡಿಗ ಪ್ರಸಿದ್ಧ್ ಕೃಷ್ಣಾ (62 ಕ್ಕೆ 4) ಹಾಗೂ ಮೊಹಮ್ಮದ್‌ ಸಿರಾಜ್‌ (86 ಕ್ಕೆ 4) ಅವರ ಬಿಗುವಿನ ದಾಳಿಯ ನೆರವಿನಿಂದ ಟೀಮ್ ಇಂಡಿಯಾ ಐದನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆಗೆ ಕಟ್ಟಿ ಹಾಕುವಲ್ಲಿ ಸಫಲವಾಗಿದೆ. ಈ ಮೂಲಕ ಐದನೇ ಟೆಸ್ಟ್‌ ಸರಣಿ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಕನಸು ಕಾಣುತ್ತಿದೆ.

Leave a Reply

Your email address will not be published. Required fields are marked *