ಫೆಬ್ರವರಿ 23ರಿಂದ ಶುರುವಾಗಿದ್ದ ಸಿಸಿಎಲ್ 10ನೇ ಸೀಸನ್‌ಗೆ ತೆರೆ ಬಿದ್ದಿದೆ. ಫೈನಲ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ಎದುರು ಕರ್ನಾಟಕ ಬುಲ್ಡೋಜರ್ಸ್ ತಂಡ ಸೋಲುಂಡಿದೆ. ಇದೇ ತಂಡದ ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದು ಸ್ಯಾಂಡಲ್‌ವುಡ್ ತಾರೆಯರ ತಂಡ ಫೈನಲ್ ಪ್ರವೇಶಿಸಿತ್ತು.
ಟೂರ್ನಿಯುದ್ದಕ್ಕೂ ಕರ್ನಾಟಕ ಬುಲ್ಡೋಜರ್ಸ್ ತಂಡ ಉತ್ತಮ ಪ್ರದರ್ಶನ ನೀಡಿತ್ತು. ಫೈನಲ್ ಪಂದ್ಯದಲ್ಲಿ ಕೂಡ ಪ್ರಬಲ ಹೋರಾಟ ನಡೆಸಿ ನಟ ಕಿಚ್ಚ ಸುದೀಪ್ ನೇತೃತ್ವದ ತಂಡ ಸೋಲುಂಡಿದೆ. ನಾಲ್ಕು ಇನ್ನಿಂಗ್ಸ್‌ಗಳಾಗಿ ನಡೆದ ಪಂದ್ಯದಲ್ಲಿ 12 ರನ್‌ಗಳಿಂದ ಬೆಂಗಾಲ್ ಟೈಗರ್ಸ್ ತಂಡ ಗೆಲುವು ಸಾಧಿಸಿದೆ. ವಿಶೇಷ ಅಂದ್ರೆ ಸರಣಿಯಲ್ಲಿ ಎರಡು ಬಾರಿ ಬೆಂಗಾಲ್ ಟೈಗರ್ಸ್ ಎದುರು ಕರ್ನಾಟಕ ಬುಲ್ಡೋಜರ್ಸ್ ತಂಡ ಗೆಲುವಿನ ನಗೆ ಬೀರಿತ್ತು.
ಕಳಪೆ ಬೌಲಿಂಗ್ ಕಾರಣಕ್ಕೆ ಕರ್ನಾಟಕ ಬುಲ್ಡೋಜರ್ಸ್ ತಕ್ಕ ಬೆಲೆ ತೆರುವಂತಾಯಿತು. ಸಿಸಿಎಲ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಸೋತಿರುವುದು ಬೇಸರ ಮೂಡಿಸಿದೆ. ಆದರೂ ಆಟಗಾರರು ತಮ್ಮ ಆಟದ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.