ಮೊಗವೀರ ಸಂಘ, ಬೆಂಗಳೂರು(ನೋಂ) ತನ್ನ ಸದಸ್ಯರಿಗಾಗಿ ಆಯೋಜಿಸಿದ್ದ *ಮೊಗವೀರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ* ಯು ಜಕ್ಕೂರಿನ ಜೆ ಪಿ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಯಶಸ್ವಿಯಾಗಿ ಸಮಾಪ್ತಿಯಾಯಿತು. ಸಂಘದ ಹಿರಿಯ ಸದಸ್ಯರಾದ ಶ್ರೀಮತಿ ಜಾಂಬವತಿ ಮತ್ತು ಶ್ರೀ ಶ್ರೀನಿವಾಸ ಮೊಗೇರ ದಂಪತಿಗಳು ಪಂದ್ಯಾವಳಿಗೆ ಚಾಲನೆ ನೀಡಿ ಕ್ರೀಡಾಳುಗಳಿಗೆ ಶುಭ ಹಾರೈಸಿದರು.

ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್, ಡಬಲ್ಸ್ ಮತ್ತು ಮಿಕ್ಸೆಡ್ ಡಬಲ್ಸ್‌ನಲ್ಲಿ ಒಟ್ಟು ಏಳು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.


ಮೊಗವೀರ ಸಮುದಾಯದ ಹಲವಾರು ಕಿರಿಯರು, ಹಿರಿಯರು ಉತ್ಸಾಹದಿಂದ ಪಂದ್ಯಾವಳಿಯಲ್ಲಿ ಪಾಲ್ಗೊಂಡರು. ಪಂದ್ಯಾವಳಿಯ ನಂತರ ವಿನ್ನರ್ ಮತ್ತು ರನ್ನರ್ ವಿಭಾಗದಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು..

