ಕ್ರಿಕೆಟ್ಮಿಡ್‌ಮ್ಯಾಕ್ ಟ್ರೋಫಿ 2026: ಎರಡನೇ ದಿನ ರೋಚಕ ಪಂದ್ಯಗಳು-ಮೊದಲ ಪಂದ್ಯದಲ್ಲಿ  ನಿಹಾಲ್...

ಮಿಡ್‌ಮ್ಯಾಕ್ ಟ್ರೋಫಿ 2026: ಎರಡನೇ ದಿನ ರೋಚಕ ಪಂದ್ಯಗಳು-ಮೊದಲ ಪಂದ್ಯದಲ್ಲಿ  ನಿಹಾಲ್ ಇಲೆವನ್‌ಗೆ ಆರು ವಿಕೆಟ್ ಜಯ ; ಅಲ್ ಖಾಸಿಮ್ ಮಂಕಿ ಜಯಭೇರಿ, ನಿಹಾಲ್ XI ಹಾಗೂ ಹೊನ್ನಾವರ XI ಮುನ್ನಡೆ

-

- Advertisment -spot_img

ಮಿಡ್‌ಮ್ಯಾಕ್ ಟ್ರೋಫಿ 2026: ಎರಡನೇ ದಿನ ರೋಚಕ ಪಂದ್ಯಗಳು

ಮೊದಲ ಪಂದ್ಯದಲ್ಲಿ  ನಿಹಾಲ್ ಇಲೆವನ್‌ಗೆ ಆರು ವಿಕೆಟ್ ಜಯ 

ಅಲ್ ಖಾಸಿಮ್ ಮಂಕಿ ಜಯಭೇರಿ, ನಿಹಾಲ್ XI ಹಾಗೂ ಹೊನ್ನಾವರ XI ಮುನ್ನಡೆ

ಕರಾವಳಿ ಸ್ಪೋರ್ಟ್ಸ್ ಕ್ಲಬ್, ಕುಮಟಾ ಆಯೋಜಿಸಿರುವ ಮಿಡ್‌ಮ್ಯಾಕ್ ಟ್ರೋಫಿ ಸೀಸನ್–2 ಕ್ರಿಕೆಟ್ ಟೂರ್ನಿಯ ಗುಂಪು ಹಂತದ  ಎರಡನೇ  ದಿನದ ಮೊದಲ  ಪಂದ್ಯದಲ್ಲಿ ನಿಹಾಲ್ ಇಲೆವನ್ ತಂಡವು ಕಾರವಾರ ಪ್ರಾಸ್ವಿಂಗರ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿ ಗಮನಾರ್ಹ ಜಯ ಸಾಧಿಸಿತು.  ಮೊದಲು ಬ್ಯಾಟಿಂಗ್ ಮಾಡಿದ ಕಾರವಾರ ಪ್ರಾಸ್ವಿಂಗರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 138 ರನ್ ಗಳಿಸಿತು.   ಲಕ್ಷ್ಯ ಬೆನ್ನಟ್ಟಿದ ನಿಹಾಲ್ ಇಲೆವನ್ ತಂಡ 18.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿ ಗೆಲುವು ಸಾಧಿಸಿತು.  ಕಾರವಾರ ಪ್ರಾಸ್ವಿಂಗರ್ಸ್  ತಂಡದ ಪರ ಅಭಿಷೇಕ್ ನಾಯಕ್  ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಈ ಗೆಲುವಿನೊಂದಿಗೆ ನಿಹಾಲ್ ಇಲೆವನ್ ತಂಡ ಗುಂಪು ಹಂತದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ.

ಎರಡನೇ  ಪಂದ್ಯದಲ್ಲಿ  ಅಲ್ ಖಾಸಿಮ್ ಮಂಕಿ ತಂಡವು ಕರಾವಳಿ ಸ್ಪೋರ್ಟ್ಸ್ ಕ್ಲಬ್ ವಿರುದ್ಧ ಐದು ವಿಕೆಟ್‌ಗಳಿಂದ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಸ್ಥಾನ ಬಲಪಡಿಸಿಕೊಂಡಿತು.

ಕರಾವಳಿ ಸ್ಪೋರ್ಟ್ಸ್ ಕ್ಲಬ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತು. ಪವನ ಜಿ (37) ತಂಡದ ಪರ ಪ್ರಮುಖ ಕೊಡುಗೆ ನೀಡಿದರು. ಅಲ್ ಖಾಸಿಮ್ ಮಂಕಿ ಪರ ಜಮೀರ್ ಖಲೀಫಾ ಹಾಗೂ ಇಯಾದ್ ಹಜಿಕಾ ತಲಾ ಒಂದು ವಿಕೆಟ್ ಪಡೆದು ಬೌಲಿಂಗ್‌ನಲ್ಲಿ ಮಿಂಚಿದರು.

ಲಕ್ಷ್ಯ ಬೆನ್ನಟ್ಟಿದ ಅಲ್ ಖಾಸಿಮ್ ಮಂಕಿ ತಂಡವು 18.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿ ಗೆಲುವು ದಾಖಲಿಸಿತು. ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಸಲ್ಮಾನ್ ಹೆಚ್‌ಬಿ ಮತ್ತು ಉಜೈಫ್ ಕದಿರಾ ಅವರ ನಿರಂತರ ಪ್ರದರ್ಶನ ಗಮನಸೆಳೆಯಿತು. ಈ ಪಂದ್ಯದಲ್ಲಿ ಪವನ ಜಿ ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

ಅಂಕಪಟ್ಟಿಯಲ್ಲಿ ನಿಹಾಲ್ XI ಮತ್ತು ಹೊನ್ನಾವರ XI ತಲಾ ಒಂದು ಪಂದ್ಯದಿಂದ ಎರಡು ಅಂಕಗಳೊಂದಿಗೆ ಮೇಲ್ಭಾಗದಲ್ಲಿವೆ. ಭಟ್ಕಳ ಫ್ರೆಂಡ್ಸ್ ಹಾಗೂ ಅಲ್ ಖಾಸಿಮ್  ತಲಾ ಎರಡು ಅಂಕಗಳನ್ನು ಹೊಂದಿದ್ದರೂ, ನಿಕರ ರನ್‌ರೇಟ್ ಆಧಾರದ ಮೇಲೆ ಸ್ಥಾನಮಾನ ನಿರ್ಧಾರಗೊಂಡಿದೆ. ಕರಾವಳಿ ಪ್ರಾಸ್ವಿಂಗರ್ಸ್ ಮತ್ತು ಕರಾವಳಿ ಸ್ಪೋರ್ಟ್ಸ್ ಕ್ಲಬ್ ಇನ್ನೂ ಖಾತೆ ತೆರೆದಿಲ್ಲ.

ಬ್ಯಾಟಿಂಗ್ ವಿಭಾಗದಲ್ಲಿ ಅಲ್ ಖಾಸಿಮ್ ಮಂಕಿಯ ಸಲ್ಮಾನ್ ಹೆಚ್‌ಬಿ (105 ರನ್) ಅಗ್ರಸ್ಥಾನದಲ್ಲಿದ್ದು, ಉಜೈಫ್ ಕದಿರಾ (100 ರನ್) ಎರಡನೇ ಸ್ಥಾನದಲ್ಲಿದ್ದಾರೆ. ಭಟ್ಕಳ ಫ್ರೆಂಡ್ಸ್‌ನ ಹೃತಿಕ್ (95) ಮೂರನೇ ಸ್ಥಾನದಲ್ಲಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಕಾರವಾರ ಪ್ರಾಸ್ವಿಂಗರ್ಸ್‌ನ ಪ್ರಹ್ಲಾದ್ ನಾಯ್ಕ್ 5 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ. ನಿಹಾಲ್ XIನ ಅಕ್ಬರ್ ಅಲಿ ಹಾಗೂ ಭಟ್ಕಳ ಫ್ರೆಂಡ್ಸ್‌ನ ಶೇಖರ್ ನಾಯ್ಕ್ ತಲಾ 3 ವಿಕೆಟ್‌ಗಳೊಂದಿಗೆ ಮುನ್ನಡೆಯಲ್ಲಿದ್ದಾರೆ.

ಟೂರ್ನಿಯ ಎರಡನೇ ದಿನವೇ ಸ್ಪರ್ಧೆ ತೀವ್ರಗೊಂಡಿದ್ದು, ಮುಂದಿನ ಪಂದ್ಯಗಳಲ್ಲಿ ಅಂಕಪಟ್ಟಿಯಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ.

ಕರಾವಳಿ ಸ್ಪೋರ್ಟ್ಸ್ ಕ್ಲಬ್ ಕುಮಟಾ ವತಿಯಿಂದ ಆಯೋಜಿಸಲಾದ MIDMAC TROPHY Season–2 ಈ ಕ್ರಿಕೆಟ್ ಟೂರ್ನಿಯ ಎಲ್ಲಾ ಪಂದ್ಯಗಳ ನೇರ ಪ್ರಸಾರವು ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ಮೂಲಕ ವೀಕ್ಷಕರಿಗೆ ಲಭ್ಯವಿದೆ

LEAVE A REPLY

Please enter your comment!
Please enter your name here

1 × 1 =

Latest news

AllySpin Casino: Quick‑Fire Slots for Short, High‑Intensity Play

1. The Pulse of Quick Wins at AllySpinΤο AllySpin καλεί παίκτες που λαχταρούν την αδρεναλίνη του γρήγορου παιχνιδιού. Με...

Mr Punter – Quick‑Hit Slots & Live Games for Rapid Wins

Witamy w świecie Quick‑Hit od Mr PunterMr Punter zaprasza Cię do krainy, gdzie każda obrotka przypomina pulsujący adrenaliny zastrzyk.Jeśli...

Simsinos Casino: Quick Wins and High‑Intensity Slots Play

1. The Pulse of Fast‑Paced GamingWhen you log in to Simsinos, the first thing that grabs your attention is...

Sevenplay Casino – Quick‑Hit Slots and Live Games for Short‑Burst Thrills

Introduction: The Pulse of Quick Wins at SevenplaySevenplay Casino has carved a niche for players who crave instant gratification....
- Advertisement -spot_imgspot_img

Vodka онлайн казино – обзор

Vodka онлайн казино - обзор ...

Пин Ап казино – Официальный сайт Pin Up Casino вход на зеркало

Пин Ап казино - Официальный сайт Pin Up Casino вход на зеркало ...

Must read

- Advertisement -spot_imgspot_img

You might also likeRELATED
Recommended to you