ಕಳೆದ 35 ವರ್ಷಗಳಿಂದ ಕ್ರೀಡೆ ಮಾತ್ರವಲ್ಲದೇ ಧಾರ್ಮಿಕ,ಸಾಮಾಜಿಕ, ಶೈಕ್ಷಣಿಕ,ಸಾಂಸ್ಕೃತಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆಗೈದ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಸಂಸ್ಥೆ “ಮಾರುತಿ ಜನಸೇವಾ ಸಂಘ(ರಿ) ಮೊಗವೀರಪಟ್ಣ ಉಳ್ಳಾಲ 2023 ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದೆ.
ಮಾರುತಿ ಜನಸೇವಾ ಸಂಘ(ರಿ)ಸಂಸ್ಥೆಗೆ 2013 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು,10 ವರ್ಷಗಳ ಬಳಿಕ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದು ಸಂಸ್ಥೆಯ ಸೇವಾ ಕಾರ್ಯಗಳಿಗೆ ಮತ್ತಷ್ಟು ಪ್ರೇರಣೆ ದೊರೆತಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷರಾದ ಸುಧೀರ್ ಅಮೀನ್ ಉಳ್ಳಾಲ ಮತ್ತು ಅಧ್ಯಕ್ಷರಾದ ವರದರಾಜ್ ಬಂಗೇರ ಸ್ಪೋರ್ಟ್ಸ್ ಕನ್ನಡದೊಂದಿಗೆ ಸಂತಸ ವ್ಯಕ್ತ ಪಡಿಸಿದ್ದಾರೆ.
ಮಾರುತಿ ಜನಸೇವಾ ಸಂಘ(ರಿ) ಉಳ್ಳಾಲ ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರಿಗೂ ರಾಜ್ಯ ಟೆನಿಸ್ ಕ್ರಿಕೆಟ್,ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್,ಸ್ಟಾರ್ ವರ್ಟೆಕ್ಸ್-Sportskannadatv ಯೂಟ್ಯೂಬ್ ಲೈವ್ ಚಾನೆಲ್ ವರ್ಷಗಳ ಹಾರ್ದಿಕ ಅಭಿನಂದನೆಗಳು…