ಕ್ರಿಕೆಟ್ತಾಲೂಕಮಂದಾರ್ತಿ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಪಂದ್ಯಾಟ ಮತ್ತು ಕ್ರೀಡಾಕೂಟ

ಮಂದಾರ್ತಿ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಪಂದ್ಯಾಟ ಮತ್ತು ಕ್ರೀಡಾಕೂಟ

-

- Advertisment -spot_img

ಬ್ರಹ್ಮಾವರ : ಹಲುವಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಉಡುಪಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬ್ರಹ್ಮಾವರ ವಲಯ ಮತ್ತು ಹಿರಿಯ ಪ್ರಾಥಮಿಕ ಶಾಲೆ ಹಲುವಳ್ಳಿ ಸಂಯುಕ್ತ ಆಶ್ರಯದಲ್ಲಿ ಮಂದಾರ್ತಿ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಪಂದ್ಯಾಟ ಮತ್ತು ಕ್ರೀಡಾಕೂಟ ನಡೆಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ ಕ್ರೀಡಾಕೂಟ ಉದ್ಘಾಟಿಸಿದರು. ಉಡುಪಿ ಶಾಸಕ ರಘುಪತಿ ಭಟ್, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ರಘುರಾಮ ಶೆಟ್ಟಿ ಕನ್ನಾರು, ಕರ್ಜೆ ಪ್ರೌಢಶಾಲೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಮೇಶ್ ಭಟ್, ನೀರಾವರಿ ಇಲಾಖೆಯ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಧನಂಜಯ ಅಮೀನ್, ಚಂದ್ರಶೇಖರ ಶೆಟ್ಟಿ ಮೂಡೂರು, ಶಿವರಾಮ ಶೆಟ್ಟಿ ಕೋಟಂಬೈಲು, ದೈಹಿಕ ಶಿಕ್ಷಣಾಧಿಕಾರಿ ಭುಜಂಗ ಶೆಟ್ಟಿ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಜಾತಾ ಶೆಟ್ಟಿ, ಉದಯ್ ಎಚ್.ಟಿ., ಶೇಖರ್ ನಾಯ್ಕ್ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಸುಮತಿ ಸ್ವಾಗತಿಸಿದರು. ಶಿಕ್ಷಕ ಪ್ರಶಾಂತ ಶೆಟ್ಟಿ ಹಾವಂಜೆ ನಿರೂಪಿಸಿದರು. ಸಹ ಶಿಕ್ಷಕ ರೋಹಿತ್ ಶೆಟ್ಟಿ ಸಹಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಸುಮನಾ ವಂದಿಸಿದರು.

ಮಳೆಯ ನಡುವೆಯೂ ಉತ್ಸಾಹ : ಬ್ರಹ್ಮಾವರ ಪರಿಸರದಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಭಾರಿ ಮಳೆ ಸುರಿಯುತ್ತಿದ್ದರೂ ಮಳೆಯನ್ನು ಲೆಕ್ಕಿಸದೇ ಶಾಲಾ ವಿದ್ಯಾರ್ಥಿಗಳು ಉತ್ಸಾಹದಿಂದ ವಾಲಿಬಾಲ್, ಕೊಕ್ಕೊ, ಕಬಡ್ಡಿ, ಥ್ರೋಬಾಲ್ ಕ್ರೀಡೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

five + 4 =

Latest news

ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್ ರಿ.ಪಿತ್ರೋಡಿ ಇವರ 19 ನೇ ವರ್ಷದ ಪಿ.ಪಿ‌‌.ಎಲ್ ಸಂಭ್ರಮ

ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್ ರಿ.ಪಿತ್ರೋಡಿ ಇವರ 19 ನೇ ವರ್ಷದ ಪಿ.ಪಿ‌‌.ಎಲ್ ಸಂಭ್ರಮ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್, ಪಿತ್ರೋಡಿ ಸಂಸ್ಥೆಯ ವತಿಯಿಂದ ಪ್ರತಿವರ್ಷದಂತೆ ಈ...

ಶ್ರೀ ಜಲವಿನಾಯಕ ಟ್ರೋಫಿ 2026: ಕ್ರಿಕೆಟ್ ಪಂದ್ಯಾವಳಿಗೆ ಸಜ್ಜಾದ ಹುಣಸವಳ್ಳಿ

ಶ್ರೀ ಜಲವಿನಾಯಕ ಟ್ರೋಫಿ 2026: ಕ್ರಿಕೆಟ್ ಪಂದ್ಯಾವಳಿಗೆ ಸಜ್ಜಾದ ಹುಣಸವಳ್ಳಿ ಹುಣಸವಳ್ಳಿ ಹಾಗೂ ಕುರುವಳ್ಳಿ ಪೋಸ್ಟ್, ತೀರ್ಥಹಳ್ಳಿ ತಾಲೂಕು ಕ್ರೀಡಾಭಿಮಾನಿಗಳಿಗೆ ಸಂತಸದ ಸುದ್ದಿ. ಆಗುಂಬೆ ಮತ್ತು ಮುತ್ತೂರು...

ಭಾರತೀಯ ತಂಡದಲ್ಲಿ ಸ್ಥಾನಕ್ಕಾಗಿ ಹೋರಾಡಿ ಹೀರೋ ಆದ ಸಂಜು ಸ್ಯಾಮ್ಸನ್ ಕಥೆ

  ಭಾರತೀಯ ತಂಡದಲ್ಲಿ ಸ್ಥಾನಕ್ಕಾಗಿ ಹೋರಾಡಿ ಹೀರೋ ಆದ ಸಂಜು ಸ್ಯಾಮ್ಸನ್ ಕಥೆ ಕ್ರಿಕೆಟ್ ಜೀವನದಲ್ಲಿ ಕೆಲ ಕ್ಷಣಗಳು ಆಟಗಾರನ ಜೀವನವನ್ನೇ ಬದಲಾಯಿಸುತ್ತವೆ. ಆ ಕ್ಷಣಗಳು ನೋವು,...

ಭಾರತ ವಿಶ್ವ ಚಾಂಪಿಯನ್: ಟಿ20 ವಿಶ್ವಕಪ್ ಮತ್ತೆ ಭಾರತಕ್ಕೇ!

  ಭಾರತ ವಿಶ್ವ ಚಾಂಪಿಯನ್: ಟಿ20 ವಿಶ್ವಕಪ್ ಮತ್ತೆ ಭಾರತಕ್ಕೇ! ಟೀಮ್ ಇಂಡಿಯಾ ಇತಿಹಾಸ ಸೃಷ್ಟಿಸಿದೆ. ಹಾಲಿ ಚಾಂಪಿಯನ್ ಆಗಿ ಟಿ20 ವಿಶ್ವಕಪ್ ಉಳಿಸಿಕೊಳ್ಳುವುದರ ಜೊತೆಗೆ, ತವರು ನೆಲದಲ್ಲಿ...
- Advertisement -spot_imgspot_img

ಭಾರತಕ್ಕೆ ಮೂರನೇ ಟಿ20 ವಿಶ್ವಕಪ್ ಕಿರೀಟ – ಐತಿಹಾಸಿಕ ಸಾಧನೆ

ಭಾರತಕ್ಕೆ ಮೂರನೇ ಟಿ20 ವಿಶ್ವಕಪ್ ಕಿರೀಟ – ಐತಿಹಾಸಿಕ ಸಾಧನೆ ಕ್ರಿಕೆಟ್ ಲೋಕದಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ Team India ತಂಡವು ಟಿ20 ವಿಶ್ವಕಪ್‌ನಲ್ಲಿ ತನ್ನ ಪ್ರಭಾವವನ್ನು...

NIPM ಕ್ರಿಕೆಟ್ ಎಕ್ಸ್‌ಪ್ಲೋಶನ್ ಕಾರ್ಪೊರೇಟ್ ಟೂರ್ನಮೆಂಟ್ 2026: NMPA ಚಾಂಪಿಯನ್

NIPM ಕ್ರಿಕೆಟ್ ಎಕ್ಸ್‌ಪ್ಲೋಶನ್ ಕಾರ್ಪೊರೇಟ್ ಟೂರ್ನಮೆಂಟ್ 2026: NMPA ಚಾಂಪಿಯನ್ **New Mangalore Port Authority (ಎನ್‌ಎಂಪಿಎ)** ತಂಡವು **NIPM Cricket Explosion Corporate Cricket Tournament...

Must read

- Advertisement -spot_imgspot_img

You might also likeRELATED
Recommended to you