ಚೆನ್ನೈ ಕಿಂಗ್ಸ್ ವಿರುದ್ಧ ಜಯ; ಫೈನಲ್ ಪ್ರವೇಶಿಸಿದ ಕರ್ನಾಟಕ ಬುಲ್ಡೋಜರ್ಸ್ – ಕಪ್‌ ಮೇಲೆ ಕಣ್ಣು

ಚೆನ್ನೈ ಕಿಂಗ್ಸ್ ವಿರುದ್ಧ ಜಯ; ಫೈನಲ್ ಪ್ರವೇಶಿಸಿದ ಕರ್ನಾಟಕ ಬುಲ್ಡೋಜರ್ಸ್ – ಕಪ್‌ ಮೇಲೆ ಕಣ್ಣು

 

ಚೆನ್ನೈ ಕಿಂಗ್ಸ್ ವಿರುದ್ಧ ಜಯ; ಫೈನಲ್ ಪ್ರವೇಶಿಸಿದ ಕರ್ನಾಟಕ ಬುಲ್ಡೋಜರ್ಸ್ – ಕಪ್‌ ಮೇಲೆ ಕಣ್ಣು

ಕನ್ನಡ ಚಿತ್ರರಂಗದ ಕ್ರಿಕೆಟ್ ತಂಡವಾದ ಕರ್ನಾಟಕ ಬುಲ್ಡೋಜರ್ಸ್, ಚೆನ್ನೈ ಕಿಂಗ್ಸ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಸಿಸಿಎಲ್–2026 ಫೈನಲ್‌ಗೆ ಪ್ರವೇಶಿಸಿದೆ. ಕಿಚ್ಚ ಸುದೀಪ್ ಅವರ ನಾಯಕತ್ವದ ತಂಡವು ಈ ಬಾರಿ ಯಾವುದೇ ಪಂದ್ಯದಲ್ಲೂ ಸೋಲಿಲ್ಲದೇ ಫೈನಲ್ ತಲುಪಿರುವುದು ವಿಶೇಷವಾಗಿದೆ.

 ಕರ್ನಾಟಕ ಬುಲ್ಡೋಜರ್ಸ್, ಈ ಬಾರಿ ಮೊದಲ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ನೇರವಾಗಿ ಸೆಮಿಫೈನಲ್ ಪ್ರವೇಶಿಸಿತ್ತು. ಚೆನ್ನೈನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಎದುರಾಳಿ ತಂಡವನ್ನು ಮಣಿಸುವ ಮೂಲಕ ಪ್ರಶಸ್ತಿಗೆ ಇನ್ನೊಂದು ಹೆಜ್ಜೆ ಮುನ್ನಡೆಯಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಚೆನ್ನೈ ಕಿಂಗ್ಸ್ ತಂಡವು 20 ಓವರ್‌ಗಳಲ್ಲಿ 160 ರನ್ ಗಳಿಸಿತು. ಬಳಿಕ ಬ್ಯಾಟಿಂಗ್‌ಗೆ ಇಳಿದ ಕರ್ನಾಟಕ ಬುಲ್ಡೋಜರ್ಸ್ ತಂಡವು 161 ರನ್ ಗಳಿಸಿ ಗೆಲುವು ಸಾಧಿಸಿತು. 

ಲಕ್ಷ್ಯವನ್ನು ಬೆನ್ನತ್ತಿದ ಕರ್ನಾಟಕ ತಂಡವು ಕೇವಲ 19.5 ಓವರ್‌ಗಳಲ್ಲಿ ಗುರಿ ತಲುಪುವ ಮೂಲಕ  ಜಯ ಸಾಧಿಸಿತು. ಈ ಸಾಧನೆಯೊಂದಿಗೆ ತಂಡವು ದಾಖಲೆಗೂ ಸಹಿ ಹಾಕಿದೆ.

ಸೆಮಿಫೈನಲ್ ಜಯವನ್ನು ಕಿಚ್ಚ ಸುದೀಪ್ ಅವರಿಗಾಗಿ ವಿಶೇಷ ಉಡುಗೊರೆಯಾಗಿ ನೀಡಬೇಕೆಂಬ ಆಟಗಾರರ ಆಶಯ ಇದೀಗ ನನಸಾಗಿದೆ. ಇದೀಗ ಫೈನಲ್ ಪಂದ್ಯದಲ್ಲಿ ಕಪ್ ಗೆಲ್ಲುವ ಉತ್ಸಾಹ ಮತ್ತು ಆತ್ಮವಿಶ್ವಾಸದೊಂದಿಗೆ ಕರ್ನಾಟಕ ಬುಲ್ಡೋಜರ್ಸ್ ತಂಡ ಕಣಕ್ಕಿಳಿಯಲಿದೆ.

Leave a Reply

Your email address will not be published. Required fields are marked *