ಕ್ರಿಕೆಟ್ಜೈ ಕರ್ನಾಟಕ ಆಟಗಾರರು ಪವಾಡ ಸದೃಶ ಪಾರು

ಜೈ ಕರ್ನಾಟಕ ಆಟಗಾರರು ಪವಾಡ ಸದೃಶ ಪಾರು

-

- Advertisment -spot_img

ಜೈ ಕರ್ನಾಟಕ ಆಟಗಾರರು ಪವಾಡ ಸದೃಶ ಪಾರು

ಮೂಲ್ಕಿಯಲ್ಲಿ ನಡೆಯುತ್ತಿರುವ ಮಿಥುನ್ ರೈ ಕಪ್-2025 ಕ್ರಿಕೆಟ್ ಪಂದ್ಯಾಟಕ್ಕೆ ಆಗಮಿಸುತ್ತಿದ್ದ ವೇಳೆ ಧರ್ಮಸ್ಥಳ ಸಮೀಪ ಜೈ ಕರ್ನಾಟಕ ಬೆಂಗಳೂರು ತಂಡದ ಆಟಗಾರರ ವಾಹನ ಕಂದಕಕ್ಕೆ ಉರುಳಿದ್ದು ತಂಡದ ನಾಲ್ವರು ಪ್ರಮುಖ ಆಟಗಾರರು ಪವಾಡ ಸದೃಶವಾಗಿ ಪಾರಾಗಿದ್ದಾರೆ.

ಅಪಘಾತವಾದ ಕಾರಿನಲ್ಲಿ ಸಚಿನ್ ಮಹಾದೇವ್,ಡೇವಿಡ್,ಉತ್ತಪ್ಪ ಮತ್ತು ಸುಬ್ಬ ಪ್ರಯಾಣ ಮಾಡುತ್ತಿದ್ದರು.ಡೇವಿಡ್ ಮತ್ತು ಉತ್ತಪ್ಪ ಅಲ್ಪಸ್ವಲ್ಪ ಗಾಯಗೊಂಡಿದ್ದು,ಸಚಿನ್ ಮಹಾದೇವ್ ಮತ್ತು ಸುಬ್ಬ ಈರ್ವರು ಅಪಾಯದಿಂದ ಪಾರಾಗಿದ್ದಾರೆ ಎಂದು ಸಚಿನ್ ಮಹಾದೇವ್ ಸ್ಪೋರ್ಟ್ಸ್ ಕನ್ನಡದೊಂದಿಗೆ ತಿಳಿಸಿದ್ದಾರೆ.

ಜೈ ಕರ್ನಾಟಕ ಪಾಲಿಗೆ ಅದೃಷ್ಟದ ಮೈದಾನವಾಗಿರುವ ಮೂಲ್ಕಿಯ ವಿಜಯಾ ಕಾಲೇಜು ಮೈದಾನದಲ್ಲಿ ಇದುವರೆಗೂ ಸತತ ಮೂರು ರಾಜ್ಯಮಟ್ಟದ ಪಂದ್ಯಾಟ ಜಯಿಸಿದ್ದು,ಇದೀಗ ನಾಲ್ಕನೇ ಟ್ರೋಫಿಯ ಕನಸು ಹೊತ್ತು ಬಂದ ತಂಡಕ್ಕೆ ಆಘಾತ ಕಾದಿತ್ತು.

ಡೇವಿಡ್ ಮತ್ತು ಉತ್ತಪ್ಪ ಅಲ್ಪಸ್ವಲ್ಪ ಗಾಯಗೊಂಡಿದ್ದು ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಪೋರ್ಟ್ಸ್ ಕನ್ನಡದೊಂದಿಗೆ ಮಾತನಾಡಿದ ಸಚಿನ್ ಮಹಾದೇವ್ ಇಬ್ಬರು ಆಟಗಾರರನ್ನು ಹೊರಗಿಟ್ಟು,ನಾವು ಪಂದ್ಯಾಟವನ್ನು ಆಡಲಿದ್ದು,ಮೂಲ್ಕಿ,ಉಡುಪಿ,ಮಂಗಳೂರು ಪರಿಸರದ ಅಭಿಮಾನಿಗಳನ್ನು ನಿರಾಸೆ ಮಾಡುವುದಿಲ್ಲ ಎಂದರು.

ಜೈ ಕರ್ನಾಟಕ ಇಂದು ಸಂಜೆ ತನ್ನ ಮೊದಲ ಪಂದ್ಯವನ್ನಾಡಲಿದೆ.

1 COMMENT

  1. ದೇವರ ದಯೆ ಎಲ್ಲರೂ ಕ್ಷೇಮವಾಗಿ ಬರಲ್ಲಿ ಇಂತಿ ನಿಮ್ಮ ಮಹೇಶ್( ಮ್ಯಾಕ್)

LEAVE A REPLY

Please enter your comment!
Please enter your name here

five × 1 =

Latest news

ಮಂಗಳೂರಿನಲ್ಲಿ ಜುಲೈ 1ರಿಂದ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ

ಮಂಗಳೂರಿನಲ್ಲಿ ಜುಲೈ 1ರಿಂದ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ **ಮಂಗಳೂರು, ಜೂನ್ 29:** ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ವತಿಯಿಂದ ಕರ್ನಾಟಕ...

ಯಶಸ್ವೀ ಬದುಕಿಗೆ ಕ್ರೀಡೆ ಅವಶ್ಯ:ವಿಠಲ್ ರಿಶಾನ್ ನಾಯಕ್.

ಯಶಸ್ವೀ ಬದುಕಿಗೆ ಕ್ರೀಡೆ ಅವಶ್ಯ:ವಿಠಲ್ ರಿಶಾನ್ ನಾಯಕ್. ಬ್ರಹ್ಮಾವರ ಸಂತೆಕಟ್ಟೆಯಲ್ಲಿ ವಿರಾಟ್ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾದ ಮಾನ್ಸೂನ್ ಟ್ರೋಫಿ -26 ಕ್ರಿಕೆಟ್ ಪಂದ್ಯಾಟವು ಶುಭಾರಂಭಗೊಂಡಿತು. ದುಬೈ ಟೆಕ್ನೋಟೈಟಾನ್ಸ್ ಕ್ರಿಕೆಟ್...

ಬಿಹಾರದ ಕನಸುಗಳಿಗೆ ಹೊಸ ರೆಕ್ಕೆ ನೀಡಿದ ವೈಭವ್ ಸೂರ್ಯವಂಶಿ

ಬಿಹಾರದ ಕನಸುಗಳಿಗೆ ಹೊಸ ರೆಕ್ಕೆ ನೀಡಿದ ವೈಭವ್ ಸೂರ್ಯವಂಶಿ ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲ; ಅದು ಜನರ ಭಾವನೆ ಮತ್ತು ಗುರುತಿನ ಭಾಗವಾಗಿದೆ. ಆದರೆ ದೀರ್ಘಕಾಲದವರೆಗೆ ಬಿಹಾರ...

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026 ಮಂಗಳೂರು: ಜಿಎಸ್‌ಬಿ ಸಮುದಾಯದ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆಯಾಗಿರುವ ಪ್ರತಿಷ್ಠಿತ **ಪ್ಯಾಂಥರ್ಸ್ ಸೂಪರ್...
- Advertisement -spot_imgspot_img

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 96 ರನ್: ವೈಭವ್ ಸೂರ್ಯವಂಶಿಯ ಸ್ಫೋಟಕ ಪ್ರತಿಭೆಗೆ ಕ್ರಿಕೆಟ್ ಲೋಕ ಫಿದಾ 15 ವರ್ಷದ...

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ.) ಬೆಳಪು, 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ.) ಬೆಳಪು, 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026 ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ಮೇರಾ ಯುವ ಭಾರತ್, ಉಡುಪಿ...

Must read

- Advertisement -spot_imgspot_img

You might also likeRELATED
Recommended to you