ಇಂದು ಕಾರ್ಡಿಫ್ನಲ್ಲಿ ನಡೆಯಲಿರೋ ಎರಡನೇ ಅಭ್ಯಾಸ ಪಂದ್ಯದಲ್ಲಿ, ಟೀಮ್ ಇಂಡಿಯಾ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. ನ್ಯೂಜಿಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಕೊಹ್ಲಿ ಪಡೆ, ಇಂದು ಬಾಂಗ್ಲಾ ವಿರುದ್ಧ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ತವಕದಲ್ಲಿದೆ. ಕಿವೀಸ್ ವಿರುದ್ಧ ಮಾಡಿದ ತಪ್ಪುಗಳನ್ನ ಸರಿಪಡಿಸಿಕೊಂಡು, ವಿಶ್ವಕಪ್ ಅಭಿಯಾನ ಆರಂಭಿಸೋಕೆ ಕೊಹ್ಲಿ ಬಾಯ್ಸ್ ರೆಡಿಯಾಗಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಡಿಪಾರ್ಟ್ಮೆಂಟ್ನಲ್ಲಿ ಎದುರಾಗಿರೋ ಸಮಸ್ಯೆಗಳನ್ನ ಬಗೆಹರಿಸಲು, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮುಂದಾಗಿದೆ. ಮತ್ತೊಂದೆಡೆ ಪಾಕ್ ವಿರುದ್ಧ ಅಭ್ಯಾಸ ಪಂದ್ಯ ಮಳೆಯಿಂದ ರದ್ದಾದ ಕಾರಣ, ಇಂದು ಟೀಮ್ ಇಂಡಿಯಾ ವಿರುದ್ಧದ ಪಂದ್ಯ ಬಾಂಗ್ಲಾ ತಂಡಕ್ಕೆ ಅತ್ಯಂತ ಮಹತ್ವದಾಗಿದೆ. ಹೀಗಾಗಿ ಬಲಿಷ್ಠ ಟೀಮ್ ಇಂಡಿಯಾಕ್ಕೆ ಟಫ್ ಫೈಟ್ ನೀಡಲು ಬಾಂಗ್ಲಾ ಟೈಗರ್ಸ್ ರೆಡಿಯಾಗಿದೆ.