ಒಂದು ಕಾಲದ ಟೀಂ ಇಂಡಿಯಾ ಯಶಸ್ವಿ ಕೋಚ್ ಜಾನ್ ರೈಟ್ ಹಾಗು ಕ್ಯಾಪ್ಟನ್ ಸೌರವ್ ಗಂಗೂಲಿ, ಹಲವು ದಿನಗಳ ಬಳಿಕ ಮತ್ತೆ ಒಟ್ಟಾಗಿ ಕಾಣಿಸಿಕೊಂಡ್ರು. ಟೀಂ ಇಂಡಿಯಾ- ಬಾಂಗ್ಲಾದೇಶದ ನಡುವೆ ನಿನ್ನೆ ನಡೆದ ವಿಶ್ವಕಪ್ ಟೂರ್ನಿಯ ಎರಡನೇ ಅಭ್ಯಾಸ ಪಂದ್ಯದ ವೇಳೆ, ಈ ದಿಗ್ಗಜರ ಸಮಾಗಮವಾಯ್ತು. ಕಾಮೆಂಟೇಟರಿ ಬಾಕ್ಸ್ನಲ್ಲಿ ಈ ಇಬ್ಬರು ಕೂತು ವೀಕ್ಷಕ ವಿವರಣೆ ನೀಡಿದ್ರು. ಅಲ್ಲದೇ ಟೀಂ ಇಂಡಿಯಾ ಜೊತೆಗಿನ ತಮ್ಮ ಹಳೆಯ ನೆನಪುಗಳನ್ನ ಮೆಲುಕು ಹಾಕಿದ್ರು.ನಾನು ಕ್ಯಾಪ್ಟನ್ ಆಗಿದ್ದಾಗ ಕೋಚ್ ಜಾನ್ ರೈಟ್ ಎಲ್ಲಾ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಿದ್ರು. ನಾನು ವಿಧೇಯ ವಿದ್ಯಾರ್ಥಿಯಂತೆ ಅವರ ಸೂಚನೆಗಳನ್ನ ಪಾಲಿಸುತ್ತಿದ್ದೆ ಎಂದು ಗಂಗೂಲಿ ಹೇಳಿದ್ರು. 2000ರಿಂದ 2005ರವರೆಗು, ಟೀಂ ಇಂಡಿಯಯಾದ ಕೋಚ್ ಆಗಿ ರೈಟ್ ಕಾರ್ಯನಿರ್ವಹಿಸಿದ್ರು. ಇದೇ ವೇಳೆ ಸೌರವ್ ಗಂಗೂಲಿ ತಂಡದ ನಾಯಕರಾಗಿದ್ರು. ಇವರಿಬ್ಬರ ನೇತೃತ್ವದಲ್ಲಿ ಟೀಂ ಇಂಡಿಯಾ ಹಲವು ಟೂರ್ನಿಗಳನ್ನ ಗೆದ್ದುಕೊಂಡಿತ್ತು. 2003ರ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ವರೆಗೆ ತಲುಪಿತ್ತು.