ಕ್ರಿಕೆಟ್ನಂಬಿಕೆ ಇಡಿ.. ಅವನು ಯುವರಾಜನ ಗರಡಿಯಲ್ಲಿ ಪಳಗಿದ ಹುಡುಗ..! 

ನಂಬಿಕೆ ಇಡಿ.. ಅವನು ಯುವರಾಜನ ಗರಡಿಯಲ್ಲಿ ಪಳಗಿದ ಹುಡುಗ..! 

-

- Advertisment -spot_img

ನಂಬಿಕೆ ಇಡಿ.. ಅವನು ಯುವರಾಜನ ಗರಡಿಯಲ್ಲಿ ಪಳಗಿದ ಹುಡುಗ..! 

 

ಬ್ಯಾಟ್ಸ್’ಮನ್’ಗಳು ಪಂದ್ಯ ಗೆಲ್ಲಿಸುತ್ತಾರೆ..

ಬೌಲರ್’ಗಳು ಟೂರ್ನಮೆಂಟ್’ಗಳನ್ನು ಗೆಲ್ಲಿಸುತ್ತಾರೆ.. 

ಎರಡನ್ನೂ ಬಲ್ಲ ಸವ್ಯಸಾಚಿಗಳು ವಿಶ್ವಕಪ್’ಗಳನ್ನೇ ಗೆದ್ದು ಕೊಡುತ್ತಾರೆ. 

ಹಾಗೆ ಭಾರತಕ್ಕೆ ಮೂರು ವಿಶ್ವಕಪ್’ಗಳನ್ನು ಗೆದ್ದು ಕೊಟ್ಟ ಸವ್ಯಸಾಚಿ ಯುವರಾಜ್ ಸಿಂಗ್. 

‘’ಯುವರಾಜನ ಉತ್ತುಂಗದ ದಿನಗಳಲ್ಲಿ ಆತನಿಗೆ ಬೌಲಿಂಗ್ ಮಾಡಲು ನಮ್ಮ ಬೌಲರ್’ಗಳು ಹೆದರುತ್ತಿದ್ದರು’’ ಎಂದಿದ್ದರು the great ಕುಮಾರ ಸಂಗಕ್ಕಾರ. 

ವೈಟ್ ಬಾಲ್ ಕ್ರಿಕೆಟ್’ನಲ್ಲಿ ಯುವರಾಜನ ಆಟಕ್ಕೆ ಅಂಥಾ ಶಕ್ತಿಯಿತ್ತು. ಬ್ಯಾಟ್ ಹಿಡಿದು ನಿಂತನೆಂದರೆ ಬೌಲರ್’ಗಳನ್ನು ಹುರಿದು ಮುಕ್ಕಿ ಬಿಡುತ್ತಿದ್ದ ವೀರಾಗ್ರಣಿಯವನು. 

ಹೌದು.. ಬಿಳಿ ಚೆಂಡಿನಾಟದಲ್ಲಿ ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಮ್ಯಾಚ್ ವಿನ್ನರ್. ಅಂಥಾ ಯುವರಾಜನ ಗರಡಿಯಲ್ಲಿ ಪಳಗಿದ ಹುಡುಗ ಈಗಿನ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್. 

ಇಂಗ್ಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯ ಸೋತ ಬೆನ್ನಲ್ಲೇ ಶುಭಮನ್ ಗಿಲ್ ನಾಯಕತ್ವವನ್ನು ಟೀಕಿಸಲಾಗುತ್ತಿದೆ. ಟೆಸ್ಟ್ ನಾಯಕತ್ವದಲ್ಲಿ ಅಂಬೆಗಾಲಿಟ್ಟಿರುವ ಹುಡುಗ ಈ ಟೀಕೆಗಳಿಗೆ ಅರ್ಹನೇ..? 

2018ರಲ್ಲಿ ಶುಭಮನ್ ಗಿಲ್ ‌ಜೊತೆ ಮೊದಲ ಬಾರಿ ಮಾತನಾಡಿದ್ದೆ. ಆಗಷ್ಟೇ ಪೃಥ್ವಿ ಶಾ ನಾಯಕತ್ವದ ಭಾರತ ತಂಡ ನ್ಯೂಜಿಲೆಂಡ್’ನಲ್ಲಿ ಅಂಡರ್-19 ವಿಶ್ವಕಪ್ ಗೆದ್ದಿತ್ತು. ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ನನಗೆ ನಾಯಕ ಪೃಥ್ವಿ ಶಾಗಿಂತಲೂ ಆಕರ್ಷಕವಾಗಿ ಕಂಡವನು ಶುಭಮನ್ ಗಿಲ್. 

ಪಾಕಿಸ್ತಾನ ವಿರುದ್ಧದ ಸೆಮಿಫೈನಲ್’ನಲ್ಲಿ ಬಾರಿಸಿದ ಶತಕ ಸಹಿತ ಟೂರ್ನಿಯಲ್ಲಿ 372 ರನ್ ಗಳಿಸಿ ವಿಶ್ವಕಪ್ ಗೆಲ್ಲಲು ಕಾರಣನಾದವನನ್ನು ಒಮ್ಮೆ ಮಾತನಾಡಿಸಬೇಕೆಂದು ಅವನಿಗೆ ವಾಟ್ಸಾಪ್ ಸಂದೇಶ ಕಳುಹಿಸಿದೆ. 

ಅರ್ಧ ಗಂಟೆಯಾಗಿತ್ತು ಅಷ್ಟೇ.. ಮೊಬೈಲ್ ರಿಂಗಣಿಸಿತು. ಕರೆ ಮಾಡಿದವನು ಶುಭಮನ್ ಗಿಲ್. 10 ನಿಮಿಷ ಮಾತನಾಡಿದ. ವಿಶ್ವಕಪ್ ಗೆಲುವಿನ ಬಗ್ಗೆ ಹೇಳಿದ.. ಕ್ರಿಕೆಟ್ ಶುರು ಮಾಡಿದ ದಿನಗಳನ್ನು ನೆನಪಿಸಿಕೊಂಡ.. ಕ್ರಿಕೆಟ್ ಆಡಲು ಪ್ರೇರಣೆಯಾದವರ ಬಗ್ಗೆ ಹೇಳಿದ. 

ಶುಭಮನ್ ಗಿಲ್ ಪಂಜಾಬ್‌ನ ಫಜಿಕಾ ಜಿಲ್ಲೆಯಲ್ಲಿರುವ ಚಕ್‌ಖರೆವಾಲಾ ಎಂಬ ಹಳ್ಳಿಯವನು. ‌ತಂದೆ ಲಖ್ವಿಂದರ್‌ ಸಿಂಗ್‌ ಕ್ರಿಕೆಟಿಗನಾಗುವ ಕನಸು ಕಂಡಿದ್ದರು. ಆದರೆ ಸಾಧ್ಯವಾಗಲಿಲ್ಲ. ತಮ್ಮ ಕನಸನ್ನು ಮಗನ ಮೂಲಕ ಈಡೇರಿಸಲು ನಿಂತ ತಂದೆ ಮಗನಿಗೆ ಕ್ರಿಕೆಟ್ ಪಾಠ ಕಲಿಸಲು ಆರಂಭಿಸುತ್ತಾರೆ. ಹಳ್ಳಿಯಲ್ಲಿ ಕ್ರಿಕೆಟ್‌ ಆಡಲು ಹೆಚ್ಚಿನ ಸೌಕರ್ಯಗಳಿಲ್ಲದ ಕಾರಣ ಕುಟುಂಬ ಸಮೇತ ಮೊಹಾಲಿಗೆ ಬಂದು ನೆಲೆಸುತ್ತಾರೆ. 2007ರಲ್ಲಿ ಪಂಜಾಬ್‌ ಕ್ರಿಕೆಟ್‌ ಸಂಸ್ಥೆಯ ಬಳಿಯಲ್ಲಿಯೇ ಬಾಡಿಗೆ ಮನೆಯೊಂದನ್ನು ಪಡೆದು ಮಗನ ಕ್ರಿಕೆಟ್‌ ಬದುಕಿಗೆ ಒತ್ತಾಸೆಯಾಗಿ ನಿಲ್ಲುತ್ತಾರೆ. ತಮ್ಮ ಸಮಯವನ್ನೆಲ್ಲಾ ಮಗನಿಗೆ ನೀಡುತ್ತಾರೆ.

‘’ನಮ್ಮದು ಕೃಷಿ ಹಿನ್ನೆಲೆಯ ಕುಟುಂಬ. ತಂದೆಯೇ ನನ್ನ ಮೊದಲ ಕ್ರಿಕೆಟ್ ಗುರು‌.ನನಗಾಗಿ ಹುಟ್ಟೂರನ್ನು ತೊರೆದು 300 ಕಿ.ಮೀ ದೂರದಲ್ಲಿರುವ ಮೊಹಾಲಿಯಲ್ಲಿ ಮನೆ ಮಾಡಿದರು. ಪ್ರತಿ ದಿನ 500ಕ್ಕೂ ಹೆಚ್ಚು ಎಸೆತಗಳನ್ನು ಎಸೆದು ಅಭ್ಯಾಸ ಮಾಡಿಸುತ್ತಿದ್ದರು’’ ಎಂದಿದ್ದ ಗಿಲ್.  

ಮಾತಿನ ಮಧ್ಯೆ ಆಗಿನ ಭಾರತ ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರ ಬಗ್ಗೆ ಕೇಳಿದಾಗ ಶುಭಮನ್ ಗಿಲ್ ಏನು ಹೇಳಿದ್ದ ಗೊತ್ತೇ..? 

”ದ್ರಾವಿಡ್‌ ಅವರಂತಹ ವ್ಯಕ್ತಿಯನ್ನು ನಾನು ನೋಡಿಯೇ ಇಲ್ಲ. ಅವರ ಸರಳತೆ, ವಿನಮ್ರತೆ, ಶಿಸ್ತಿನ ಬಗ್ಗೆ ಕೇಳಿದ್ದೆ. ಅದನ್ನು ಕಣ್ಣಾರೆ ಕಂಡ ಬಳಿಕ ಒಬ್ಬ ದೊಡ್ಡ ವ್ಯಕ್ತಿತ್ವದ ಮನುಷ್ಯ ಹೀಗೂ ಇರಬಲ್ಲರೇ ಎಂಬ ಪ್ರಶ್ನೆ ಮೂಡಿತು. ಕಳೆದ 15 ತಿಂಗಳುಗಳಿಂದ ಸ್ನೇಹಿತನ ರೀತಿಯಲ್ಲಿ ನಮ್ಮೊಂದಿಗೆ ಬೆರೆತರು, ಮಾರ್ಗದರ್ಶನ ನೀಡಿದರು. ಕ್ರಿಕೆಟ್‌ ಜತೆಗೆ ಜೀವನಮೌಲ್ಯಗಳನ್ನೂ ಹೇಳಿಕೊಟ್ಟರು. ವಿಶ್ವಕಪ್‌ ಗೆದ್ದ ಕ್ಷ ಣ ಎಷ್ಟು ಸ್ಮರಣೀಯವೋ, ದ್ರಾವಿಡ್‌ ಅವರೊಂದಿಗೆ ಕಳೆದ ಕ್ಷ ಣಗಳೂ ಅಷ್ಟೇ ಅಮೂಲ್ಯ. ಅವರು ಹೇಳಿಕೊಟ್ಟ ಪಾಠ ನಮಗೆ ಜೀವನದುದ್ದಕ್ಕೂ ನೆರವಾಗಲಿದೆ’’ ಎಂದಿದ್ದ. 

ದ್ರಾವಿಡ್ ಗರಡಿ ಸೇರುವ ಮುನ್ನ ಮೊಹಾಲಿಯಲ್ಲಿ ಶುಭಮನ್ ಗಿಲ್’ಗೆ ಕ್ರಿಕೆಟ್ ಪಾಠಗಳನ್ನು ಹೇಳಿ ಕೊಟ್ಟವರು ಭಾರತದ ವಿಶ್ವಕಪ್ ಹೀರೋ ಯುವರಾಜ್ ಸಿಂಗ್. 

ಪಂಜಾಬ್’ನ ರೈತನ ಮಗ ಭಾರತ ಟೆಸ್ಟ್ ತಂಡದ ನಾಯಕನಾಗಿದ್ದಾನೆ. ಶುಭಮನ್ ಗಿಲ್ ಟೆಸ್ಟ್ ನಾಯಕತ್ವಕ್ಕೆ ಸೋಲಿನ ಆರಂಭ ಸಿಕ್ಕಿದೆ ನಿಜ. ಹಾಗೆಂದ ಮಾತ್ರಕ್ಕೆ ಎಲ್ಲವೂ ಇಲ್ಲಿಗೇ ಮುಗಿದೂ ಇಲ್ಲ, ಇದು ಅಂತ್ಯವೂ ಅಲ್ಲ. 

‘’ಸ್ವಲ್ಪ ತಾಳ್ಮೆ ಇರಲಿ, ಅವನು ಈಗಷ್ಟೇ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದಾನೆ. ಯುವರಾಜನ ಶಿಷ್ಯನ ಮೇಲೆ ನಂಬಿಕೆಯಿರಲಿ’’. 

-ಸುದರ್ಶನ್

LEAVE A REPLY

Please enter your comment!
Please enter your name here

2 × 4 =

Latest news

Chicken Road: Gioco Crash a Quick‑Play per Vincitori dal Ritmo Veloce

IntroduzioneNel mondo dei giochi da casinò online, molti titoli cercano di catturare i giocatori con rulli appariscenti o trame...

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026 ಮಂಗಳೂರು: ಜಿಎಸ್‌ಬಿ ಸಮುದಾಯದ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆಯಾಗಿರುವ ಪ್ರತಿಷ್ಠಿತ **ಪ್ಯಾಂಥರ್ಸ್ ಸೂಪರ್...

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ

ಟೀಕೆಗೆ ಬ್ಯಾಟ್‌ನಲ್ಲೇ ಉತ್ತರ: ಫೈನಲ್‌ನಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 96 ರನ್: ವೈಭವ್ ಸೂರ್ಯವಂಶಿಯ ಸ್ಫೋಟಕ ಪ್ರತಿಭೆಗೆ ಕ್ರಿಕೆಟ್ ಲೋಕ ಫಿದಾ 15 ವರ್ಷದ...

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ.) ಬೆಳಪು, 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026

ಬೆಳಪು ಸ್ಪೋರ್ಟ್ಸ್ ಕ್ಲಬ್ (ರಿ.) ಬೆಳಪು, 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 2026 ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ಮೇರಾ ಯುವ ಭಾರತ್, ಉಡುಪಿ...
- Advertisement -spot_imgspot_img

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...

Must read

- Advertisement -spot_imgspot_img

You might also likeRELATED
Recommended to you