ಗುರುಗಣೇಶ್ ನೇಜಾರು ಮೈಸೂರಿನಲ್ಲಿ ಚಾಂಪಿಯನ್ಸ್

ಗುರುಗಣೇಶ್ ನೇಜಾರು ಮೈಸೂರಿನಲ್ಲಿ ಚಾಂಪಿಯನ್ಸ್

ಗುರುಗಣೇಶ್ ನೇಜಾರು ಮೈಸೂರಿನಲ್ಲಿ ಚಾಂಪಿಯನ್ಸ್

ಮೈಸೂರು ವಿಶ್ವವಿದ್ಯಾನಿಲಯ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ವಿಶ್ವಬ್ರಹ್ಮ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಕಾಶ್ ಆಚಾರ್ಯ ನೇಜಾರು ಮಾಲೀಕತ್ವದ ಗುರುಗಣೇಶ್ ನೇಜಾರು ತಂಡ ಚಾಂಪಿಯನ್ನಾಗಿ ಹೊರಹೊಮ್ಮಿದೆ.

ಮೈಸೂರು ಜಿಲ್ಲಾ ಚಿನ್ನ ಮತ್ತು ಬೆಳ್ಳಿ ಕೆಲಸಗಾರರ ಅಭಿವೃದ್ಧಿ ನಿಗಮ ವತಿಯಿಂದ ಆಯೋಜಿಸಿದ್ದ ಅಂತಿಮ ಪಂದ್ಯದಲ್ಲಿ ಎಂಆರ್‌ಸಿ ತಂಡದ ವಿರುದ್ಧ ಗೆಲುವು ಸಾಧಿಸುವ ಮೂಲಕ 30,000 ನಗದು ಹಾಗೂ ಟ್ರೋಫಿ ಬಹುಮಾನವನ್ನು ಪಡೆದುಕೊಂಡಿದೆ, ಗುರು ಗಣೇಶ್ ತಂಡದ ಪರ ಸಾಗರ್ ಉತ್ತಮ ಬೌಲರ್ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಎಂ ಆರ್ ಸಿ ತಂಡವು ದ್ವಿತೀಯ ಸ್ಥಾನದೊಂದಿಗೆ ಟ್ರೋಫಿ ಹಾಗೂ ರೂ.20,000 ನಗದು ತನ್ನದಾಗಿಸಿ ಕೊಂಡಿದೆ ತಂಡದ ಆಟಗಾರ ಅಕ್ಷಯ ಕುಮಾರ್ ಬೆಸ್ಟ್ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದರು, ಮೈಸೂರು ಸೂಪರ್ ಕಿಂಗ್ ತಂಡವು ಸಮಾಧಾನಕರ ಬಹುಮಾನವನ್ನು ಪಡೆದುಕೊಂಡಿದೆ.

ಸಹಾಯಕ ಆರಕ್ಷಕ ಉಪನಿರೀಕ್ಷಕ ಎಂಎಸ್ ಉಮಾಪತಿ,ಗಜ್ಜಗಳ್ಳಿಯ ಮಹೇಶ್,ಬೆಂಗಳೂರು ಚಿನ್ನ ಮತ್ತು ಬೆಳ್ಳಿಯ ಬಣ್ಣಗಳ ತಯಾರಿಕ ನಿಗಮದ ಅಧ್ಯಕ್ಷ ವಿಶ್ವನಾಥ್ ಆಚಾರ್ಯ,ಡಾ ಬಿಎಂ ಉಮೇಶ್ ಕುಮಾರ್ , ಮೈಸೂರು ಜಿಲ್ಲಾ ಚಿನ್ನಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಂಘದ ಅಧ್ಯಕ್ಷ ಗೋಲ್ಡನ್ ಟೀ ಸುರೇಶ್, ಗೌರವಾಧ್ಯಕ್ಷರಾದ ರವಿಪ್ರಕಾಶ್, ಕಾರ್ಯಧ್ಯಕ್ಷ ರಾಘವೇಂದ್ರ ಸೇಠ್, ಕಾರ್ಯದರ್ಶಿ ಶಶಿಧರ್ ಆಚಾರ್ಯ ಕ್ರೀಡಾ ಕಾರ್ಯದರ್ಶಿ ನಾಗರಾಜ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *