ಕ್ರಿಕೆಟ್GPL 2025: ಫೆಬ್ರವರಿಯಲ್ಲಿ ಸಹ್ಯಾದ್ರಿ ಮೈದಾನದಲ್ಲಿ ಜಿಪಿಎಲ್ ನತ್ತ ಎಲ್ಲರ ಚಿತ್ತ

GPL 2025: ಫೆಬ್ರವರಿಯಲ್ಲಿ ಸಹ್ಯಾದ್ರಿ ಮೈದಾನದಲ್ಲಿ ಜಿಪಿಎಲ್ ನತ್ತ ಎಲ್ಲರ ಚಿತ್ತ

-

- Advertisment -spot_img

GPL 2025: ಫೆಬ್ರವರಿಯಲ್ಲಿ ಸಹ್ಯಾದ್ರಿ ಮೈದಾನದಲ್ಲಿ ಜಿಪಿಎಲ್ ನತ್ತ ಎಲ್ಲರ ಚಿತ್ತ

ಕೆಲವೇ ದಿನಗಳಲ್ಲಿ ಜಿಪಿಎಲ್ ಕ್ರಿಕೆಟ್‌ ಹಬ್ಬ ಆರಂಭವಾಗಲಿದೆ, ಎಲ್ಲಾ ತಂಡಗಳು ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿವೆ. ಜಿಪಿಎಲ್ ಕಪ್ ಎತ್ತುವುದೆಂದರೆ ಎಲ್ಲರಿಗೂ ವಿಶ್ವಕಪ್‌ಗೆ ಮುತ್ತಿಟ್ಟಂತೆ. ಯಾಕೆಂದರೆ ಪ್ರತಿವರ್ಷ ಕೂಡ ಹೈ-ವೋಲ್ಟೇಜ್ ಪಂದ್ಯದಿಂದ ಕೂಡಿರುತ್ತೆ. ಅದರ ಕ್ರೆಡಿಟ್ ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಷನ್ ಗೆ ಸಲ್ಲುತ್ತೆ.

ಜಿ ಎಸ್ ಬಿ ಕ್ರಿಕೆಟ್‌ಗೆ ಮತ್ತೊಂದು ಹೆಸರೇ ಜಿಪಿಎಲ್ ಎನ್ನುವ ವಾತಾವರಣ ಇದೆ. ಯಾಕಂದ್ರೆ ಈ ಕ್ರಿಕೆಟ್ ಹುಟ್ಟಿದ್ದು ಮಂಗಳೂರಿನಲ್ಲಿ., ಅದನ್ನು ಜಿಎಸ್ಬಿ ಗಳ ಹಲವಾರು ತಂಡಗಳು ಫೇಮಸ್ ಮಾಡಿವೆ. ಸಾವಿರಾರು ಅಭಿಮಾನಿಗಳು ಜಿಪಿಎಲ್ ಗೆ ಬೆಂಬಲ ನೀಡ್ತಾರೆ. ಜಿ ಎಸ್ ಬಿ ಕ್ರಿಕೆಟ್‌ಗೆ ‘ ಜಿಪಿಎಲ್’ ಕ್ರೀಡಾಕೂಟ ಹೊಸ ಹೊಳಪು ನೀಡಿದ್ದು, ಜಿ ಎಸ್ ಬಿ ಕ್ರೀಡಾಲೋಕಕ್ಕೆ ‘ಜಿಪಿಎಲ್’ ಕೊಡುಗೆ ದೊಡ್ಡದು. ಅದ್ರಲ್ಲೂ 2025ರ ಜಿಪಿಎಲ್ ಟೂರ್ನಿಯ ಸಿದ್ಧತೆಗಳನ್ನು ಕಂಡು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ!

2017ರ ಜಿಪಿಎಲ್ ಟೂರ್ನಿ ಜಿ ಎಸ್ ಬಿ ಕ್ರಿಕೆಟ್ ಲೋಕಕ್ಕೆ ಎಂದೆಂದಿಗೂ ಮರೆಯಲು ಆಗದ ವರ್ಷ. 2017ರ ಜಿಪಿಎಲ್ ಕಪ್ ಜಿ ಎಸ್ ಬಿ ಕ್ರಿಕೆಟ್ ಲೋಕಕ್ಕೆ ತಿರುವು ನೀಡಿದ್ದು ಇಡೀ ಜಗತ್ತನ್ನೇ ಸೆಳೆದಿತ್ತು, ಹಾಗೇ ಜಿ ಎಸ್ ಬಿ ಕ್ರಿಕೆಟ್ ಗಟ್ಟಿಯಾಗಿ ನೆಲೆಯೂರಲು ಕಾರಣ ಕೂಡ ಆಗಿತ್ತು. ಹೀಗಿದ್ದಾಗ 2025ರ ಜಿಪಿಎಲ್ ಸೀಸನ್ 9 ಮತ್ತೆ ಜಾಗತಿಕ ಮಟ್ಟದಲ್ಲಿ ಗತ್ತು ತೋರಿಸಿದೆ!

ಈ ಮೂಲಕ ಮಂಗಳೂರಿನ ಜಿಪಿಎಲ್ ಕ್ರೀಡಾಕೂಟ ಮತ್ತಷ್ಟು ಹೆಸರು ಮಾಡುತ್ತಿದೆ. ಹೀಗಿದ್ದಾಗ ಸಹಸ್ರಾರು ಅಭಿಮಾನಿಗಳನ್ನು ಹೊಂದಿ ಅತ್ಯಂತ ವಿಜೃಂಭಣೆಯಲ್ಲಿ ನಡೆಸುತ್ತಿರುವ 2025ರ ಜಿಪಿಎಲ್ ಜಿ ಎಸ್ ಬಿ ಕ್ರೀಡಾ ಲೋಕದ ಗತ್ತು ಹೆಚ್ಚು ಮಾಡಿದೆ. ಕ್ರಿಕೆಟ್ ಟೂರ್ನಮೆಂಟ್ ಗಳನ್ನು ನಿರಂತರವಾಗಿ ಆಯೋಜಿಸುತ್ತಿರುವ ಇತರ ಆಯೋಜಕರು ಕೂಡ ಈ ಅಬ್ಬರ ಕಂಡು ಬಾಯಿ ಮೇಲೆ ಬೆರಳು ಇಟ್ಟುಕೊಂಡಿದೆ. ಕರ್ನಾಟಕ ಮಾತ್ರವಲ್ಲ ಇತರ ರಾಜ್ಯಗಳಿಗೂ ಇದು ಅಚ್ಚರಿಯ ವಿಚಾರವಾಗಿದೆ.

ಜಿ ಎಸ್ ಬಿ ಕ್ರಿಕೆಟ್ ಜಗತ್ತಿಗೆ ದೊಡ್ಡ ತಿರುವು ನೀಡಿದ್ದೇ ‘ ಜಿಪಿಎಲ್’ ಅಥವಾ ‘ಜಿ ಎಸ್ ಬಿ ಪ್ರೀಮಿಯರ್ ಲೀಗ್’. ಹೀಗೆ ‘ಜಿಪಿಎಲ್’ ಮಾಯಾ ಲೋಕ ಕ್ರಿಕೆಟ್ ಲೋಕದಲ್ಲೇ ಅತಿ ದೊಡ್ಡ ಟೂರ್ನಿ ಎಂಬುದೇ ಹೆಮ್ಮೆಯ ವಿಚಾರ ಅಂತಿದ್ದಾರೆ ನಮ್ಮ ಕ್ರಿಕೆಟ್ ಅಭಿಮಾನಿಗಳು!

ಒಟ್ನಲ್ಲಿ ಜಿ ಎಸ್ ಬಿ ಜಗತ್ತಿನ ಕ್ರಿಕೆಟ್ ಲೋಕದಲ್ಲಿ ಜಿ ಪಿಎಲ್ ಇದೇ ರೀತಿ ಮಿನುಗುತ್ತಿರಲಿ. ಹಾಗೇ GPL ಕೀರ್ತಿ ಇನ್ನಷ್ಟು ಎತ್ತರಕ್ಕೆ ಹೋಗಲಿ ಅನ್ನೋದೆ ಅಭಿಮಾನಿಗಳ ಆಸೆ. ಹೀಗಾಗಿ ಜಿಪಿಎಲ್‌ಗೆ ಅಭಿಮಾನಿಗಳಿಂದ ಮತ್ತಷ್ಟು, ಇನ್ನಷ್ಟು ಬೆಂಬಲ ಕೂಡ ಸಿಗುತ್ತಿದ್ದು ಖುಷಿ ನೀಡುತ್ತಿದೆ. ಈ ಮೂಲಕ ನೂರಾರು ಜಿ ಎಸ್ ಬಿ ಕ್ರಿಕೆಟ್ ಆಟಗಾರರಿಗೆ ಜಿಪಿಎಲ್ ಹೊಸ ಹುಮ್ಮಸ್ಸು ನೀಡುತ್ತಿದೆ.

ಮುಂದಿನ ತಿಂಗಳು ಫೆಬ್ರವರಿಯಲ್ಲಿ ಜಿಪಿಎಲ್ ಕಪ್‌ ಟೂರ್ನಿ ಆರಂಭವಾಗಲಿದೆ. ಕ್ರಿಕೆಟ್ ಪ್ರೇಮಿಗಳು ಟೂರ್ನಿಯ ಆರಂಭಕ್ಕಾಗಿ ಕಾತರದಿಂದ ಕಾಯುತ್ತಿದ್ದು, ಈ ಕ್ರಿಕೆಟ್ ಹಬ್ಬದಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿವೆ. ಹಾಲಿ ಚಾಂಪಿಯನ್ಸ್ ವೊಳಲಂಕೆ ಫೈಟರ್ಸ್ ಮೂಲ್ಕಿ, ಕಳೆದ ಸೀಸನ್ ನ ರನ್ನರ್ ಅಪ್ ರಾಯಲ್ ಚಾಲೆಂಜರ್ಸ್ ಬಳ್ಳಂಬೆಟ್ಟು, ಜಿ ಆರ್ ಎಸ್ ಫ್ಯಾಂಟಸಿ ಪಾರ್ಕ್ ಮೈಸೂರು ವಾರಿಯರ್ಸ್ , ಆಭರಣ್ ಡೈಮಂಡ್ಸ್ , ಕೊಡಿಯಾಲ್ ಸೂಪರ್ ಕಿಂಗ್ಸ್ , ಮುಂಬೈ ಪಲ್ಟಾನ್ಸ್ , ಉಡುಪಿ ಬ್ಲಾಸ್ಟರ್ಸ್, ಡೆಡ್ಲಿ ಪ್ಯಾಂಥರ್ಸ್ ಕೊಡಿಯಾಲ್ ( ರಿ), ಸುಪ್ರೀಂ ಗೋಲ್ಡನ್ ಗರುಡಾಸ್ ಕೊಚ್ಚಿ, ಸಪ್ತಮಿ ವಾರಿಯರ್ಸ್, ಇರ್ವತ್ತೂರು ಸ್ಪೋರ್ಟ್ಸ್ ಕ್ಲಬ್ ಮಣಿಪಾಲ, ಅವತಾರ್’ಸ್ ಇಲೆವೆನ್ ಮಲ್ಪೆ ,ಗಜಕೇಸರಿ ಸುಳ್ಯ ಬ್ಯಾಟ್ಲರ್ಸ್, ರೈಸಿಂಗ್ ಸ್ಟಾರ್ಸ್ ಮಂಗಳೂರು, ದರ್ಶ್ ಸ್ಪೋರ್ಟ್ಸ್, ಏಕದಂತ ಕ್ರಿಕೆಟ್ ಕ್ಲಬ್ ಬೆಂಗಳೂರು ಸೇರಿದಂತೆ ಈ ಎಲ್ಲಾ ತಂಡಗಳು ಈ ಬಾರಿಯ ಟೂರ್ನಿಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ ಹಾಗೂ ಟೂರ್ನಿಯಲ್ಲಿ ಪ್ರಶಸ್ತಿ ಹಿಡಿಯುವ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿಯಲ್ಲಿದ್ದಾರೆ.

ಜಿ.ಎಸ್.ಬಿ ಪ್ರೀಮಿಯರ್ ಲೀಗ್ (ಜಿಪಿಎಲ್ 2025) ಆರಂಭಕ್ಕೆ ಕೆಲ ದಿನಗಳು ಮಾತ್ರ ಉಳಿದಿವೆ. ಜಿಪಿಎಲ್ ಕಪ್ ಕ್ರಿಕೆಟ್ ಟೂರ್ನಿ ಫೆಬ್ರವರಿ 14 ರಿಂದ ಆರಂಭವಾಗಲಿದೆ. 9ನೇ ಋತುವಿನ ಟೂರ್ನಮೆಂಟ್ ಫೆಬ್ರವರಿ 14,15 ಮತ್ತು 16 ರಂದು ನಡೆಯಲಿದೆ. ಎಲ್ಲಾ ತಂಡಗಳು ಜಿಪಿಎಲ್ ಟ್ರೋಫಿಯತ್ತ ದೃಷ್ಟಿ ನೆಟ್ಟಿವೆ. ಪ್ರತಿ ಕ್ರೀಡಾ ಋತುವಿನಲ್ಲೂ ಈ ಟ್ರೋಫಿ ಪಡೆಯಲು ಎಲ್ಲಾ ತಂಡಗಳ ನಡುವೆ ಕಠಿಣ ಪೈಪೋಟಿ ಇರುತ್ತದೆ. ಪ್ರಸ್ತುತ, ಆರ್ಚ್ ಫಾರ್ಮ್ ಲ್ಯಾಬ್ಸ್ ಶೀರ್ಷಿಕೆ ಪ್ರಾಯೋಜಕರಾಗಿದ್ದಾರೆ. ಈ ಬಾರಿ ಜಿಪಿಎಲ್​ ಹೊಸ ರೂಪದಲ್ಲಿ ಬರಲಿದೆ.

ಹಲವು ತಂಡಗಳು ಇನ್ನೂ ಜಿಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ. ಮುಂಬೈ ಇಂಡಿಯನ್ಸ್ ತಂಡ ಮತ್ತು ಒಳಲಂಕೆ ಫೈಟರ್ಸ್ ಈ  ಟ್ರೋಫಿಯನ್ನು ಗರಿಷ್ಠ ಬಾರಿ ಎತ್ತಿ ಹಿಡಿದಿದೆ. ಶರತ್ ಪ್ರಭು  ನಾಯಕತ್ವದಲ್ಲಿ ಒಳಲಂಕೆ ಫೈಟರ್ಸ್ ಮೂಲ್ಕಿ ಕಳೆದ ಋತುವಿನಲ್ಲಿ ಚಾಂಪಿಯನ್ ಪ್ರಶಸ್ತಿ ಸಾಧನೆ ಮಾಡಿದೆ. ಈ ಬಾರಿ ಯಾರು ಟ್ರೋಫಿ ಗೆಲ್ಲುತ್ತಾರೆ ಎಂಬ ಕುತೂಹಲ ಕ್ರೀಡಾ ಪ್ರೇಮಿಗಳಲ್ಲಿ ಗರಿಗೆದರಿದೆ.

The emotions, passions, dedications, and excitement attached to GPL is nothing less than the World Cup

Wishing the very best to all the teams and team players taking part in the GPL 2025.

Looking forward to an exciting tournament … 

LEAVE A REPLY

Please enter your comment!
Please enter your name here

13 − seven =

Latest news

Pinco Online Kazino (Пинко) 2026 – Yeni Oyunçular üçün Bonuslar

Pinco Online Kazino (Пинко) 2026 – Yeni Oyunçular üçün Bonuslar ...

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ!

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ! ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೇನ್...

Mostbet AZ – bukmeker ve kazino Mostbet – Giriş rəsmi sayt

Mostbet AZ - bukmeker ve kazino Mostbet - Giriş rəsmi sayt ...

Instasino Casino overzicht en opties

Praktische gids voor InstaSino Casino – Alles wat je moet weten Registratie en eerste stappen bij Instasino Casino Je wilt een...
- Advertisement -spot_imgspot_img

Σύνδεση στο Gangsta Casino: Οδηγός μπόνους και βήμα-βήμα εγγραφής για Κύπρο

Τι περιμένει το νέο παίκτη; Σύνδεση στο Gangsta CasinoΒήμα-βήμα εγγραφή – Πώς να δημιουργήσεις λογαριασμόΚαταθέσεις – Επιλογή μεθόδων πληρωμήςΣύνδεση...

Divaspin login – UK registration steps and quick start guide

Divaspin Login: The Practical UK Guide Why Divaspin Casino Appeals to UK...

Must read

- Advertisement -spot_imgspot_img

You might also likeRELATED
Recommended to you