13.6 C
London
Wednesday, October 2, 2024
Homeಚಿರಸ್ಮರಣೆಮರೆಯಾದರೂ ಮರೆಯಲಾಗದ ಟೆನಿಸ್ಬಾಲ್ ಕ್ರಿಕೆಟ್ ನ ಮಾಣಿಕ್ಯ ವಿಶ್ವನಾಥ(ಎ.ಕೆ.ವಿಶ್ವ)

ಮರೆಯಾದರೂ ಮರೆಯಲಾಗದ ಟೆನಿಸ್ಬಾಲ್ ಕ್ರಿಕೆಟ್ ನ ಮಾಣಿಕ್ಯ ವಿಶ್ವನಾಥ(ಎ.ಕೆ.ವಿಶ್ವ)

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಟೆನಿಸ್ಬಾಲ್ಬ್ ಕ್ರಿಕೆಟ್ ವಿರಾಟ್ ವಿಶ್ವರೂಪಿ ವಿಶ್ವ ಎ‌.ಕೆ‌ ನಮ್ಮನಗಲಿ ಇಂದಿಗೆ 14 ವರ್ಷ
ಕರ್ನಾಟಕ ರಾಜ್ಯ ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸ ಕಂಡ ಶ್ರೇಷ್ಠ ಆಲ್ ರೌಂಡರ್,ಉಡುಪಿಯ ಬಲಿಷ್ಠ ತಂಡ ಎ.ಕೆ.ಉಡುಪಿಯ ಪರವಾಗಿ ಆಡಿ,ತನ್ನ ತಂಡಕ್ಕಾಗಿ ಹಲವಾರು ರಾಜ್ಯ,ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳನ್ನು ಗೆಲ್ಲಿಸಿಕೊಟ್ಟ ಶ್ರೇಷ್ಟ ಸವ್ಯಸಾಚಿ,ಅತ್ಯಂತ ಕಡಿಮೆ ಅವಧಿಯಲ್ಲಿಟೆನ್ನಿಸ್ ಕ್ರಿಕೆಟ್ ನಲ್ಲಿ ವಿಶ್ವರೂಪ ಪ್ರದರ್ಶಿಸಿ ಮಿಂಚಿ ಮರೆಯಾದ ರಿವರ್ಸ್ ಸ್ವೀಪ್ ಸ್ಪೆಷಲಿಸ್ಟ್ “ದಿ|ವಿಶ್ವನಾಥ್ ಗಾಣಿಗ ಯಾನೆ ವಿಶ್ವ” ವಿಧಿಯ ಕ್ರೂರ ಲೀಲೆಗೆ ಬಲಿಯಾಗಿ ಇಂದಿಗೆ 14 ವರ್ಷ ಸಂದಿತು.
ವಿಶ್ವನಾಥ ಕುಮಾರ್ (ವಿಶ್ವ)ಹಿನ್ನೆಲೆ
ಅತ್ಯಂತ ಕಡಿಮೆ ಅವಧಿಯಲ್ಲಿ ರಾಜ್ಯದಲ್ಲೇ ಹೆಸರುವಾಸಿ ಆಟಗಾರನಾಗಿ ಗುರುತಿಸಿಕೊಂಡ ವಿಶ್ವನಾಥ ಗಾಣಿಗ ಹುಟ್ಟಿದ್ದು ಉಡುಪಿ ಜಿಲ್ಲೆಯ ಕೆಮ್ಮಣ್ಣುವಿನಲ್ಲಿ.
ಗ್ರಾಮಾಂತರ ಪ್ರದೇಶವಾದ ಕೆಮ್ಮಣ್ಣು ಸರಕಾರಿ ಶಾಲೆ ಮತ್ತು ಕಾಲೇಜಿನಲ್ಲಿ ಓದಿದ ವಿಶ್ವ ಉಡುಪಿಯ ಪಿ.ಪಿ.ಸಿ‌ ಕಾಲೇಜಿನಲ್ಲಿ ಬಿ.ಬಿ.ಎಂ ಪದವಿಯನ್ನು ಪೂರ್ಣಗೊಳಿಸಿದರು.ಹಾಗೂ ಯು.ಬಿ ಗ್ರೂಪ್ಸ್ ನಲ್ಲಿ ಸೇಲ್ಸ್ ರೆಪ್ರೆಸೆಂಟೇಟಿವ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ತನ್ನ ಶಾಲಾ ಕಾಲೇಜು ದಿನಗಳಲ್ಲಿ ಕ್ರಿಕೆಟ್ ಬಗ್ಗೆ ಅತೀವ ಆಸಕ್ತಿ ತಳೆದ ವಿಶ್ವ ಕೆಮ್ಮಣ್ಣು ಪರಿಸರದಲ್ಲಿ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಗಳನ್ನಾಡಲು ಪ್ರಾರಂಭಿಸಿದ್ಧರು.
ಸ್ಥಳೀಯ ತಂಡಗಳಲ್ಲಿ ತನ್ನ ಕ್ರಿಕೆಟ್ ಜೀವನ ಪ್ರಾರಂಭಿಸಿದ ವಿಶ್ವ ಅಲ್ಲಿಂದಲೇ ರಿವರ್ಸ್ ಸ್ವೀಪ್ ಹೊಡೆತಗಳನ್ನು ಕರಗತ ಮಾಡಿಕೊಂಡು ತನ್ನ ಬ್ಯಾಟಿಂಗ್ ನ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿದ್ದರು‌.ತದನಂತರದ ದಿನಗಳಲ್ಲಿ 8 ವರ್ಷಗಳ ಕಾಲ ಎ.ಕೆ.ಉಡುಪಿ ತಂಡದ ಪರವಾಗಿ ಆಡಿದ ವಿಶ್ವ ತನ್ನ ಶ್ರೇಷ್ಠ ಸವ್ಯಸಾಚಿ ಪ್ರದರ್ಶನದ ಮೂಲಕ,
ಅದೆಷ್ಟೋ ಪಂದ್ಯಗಳಲ್ಲಿ ಸೋಲಿನ‌ ಸುಳಿಗೆ ಸಿಲುಕಿದ ತನ್ನ ತಂಡವನ್ನು ಗೆಲ್ಲಿಸಿ,ರಾಜ್ಯದ ನಂಬರ್ ಒನ್ ತಂಡವನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.ತಾನಾಡಿದ ಅಷ್ಟೂ ವರ್ಷಗಳ ಕಾಲ ಎಂದಿಗೂ ವೈಯಕ್ತಿಕ ಪ್ರಶಸ್ತಿಗಾಗಿ ಆಡದ ವಿಶ್ವ ಅವರಿಗೆ ಪ್ರಶಸ್ತಿಗಳು ತಾನಾಗಿ ಒಲಿದು ಬರುತ್ತಿತ್ತು.ಎದುರಾಳಿ ತಂಡದ ಪ್ರತಿಯೊಬ್ಬ ಆಟಗಾರರನ್ನು ಗೌರವಿಸುತ್ತಿದ್ದ,ಪ್ರೀತಿಸುತ್ತಿದ್ದ ವಿಶ್ವರವರ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಾಗಿತ್ತು.ವಿಶ್ವ ತನ್ನ ಕೊನೆಯ ಪಂದ್ಯವನ್ನು 2010 ರಲ್ಲಿ ಕೋಟ ಪ್ರೀಮಿಯರ್‌ ಲೀಗ್ ಪಂದ್ಯಾಟದಲ್ಲಿ ಚಾಂಪಿಯನ್ಸ್ ತಂಡವಾದ ಪಾರಂಪಳ್ಳಿ ಗ್ಲಾಡಿಯೇಟರ್ಸ್ ತಂಡದ  ಪರವಾಗಿ ಆಡಿ ಶ್ರೇಷ್ಠ ಪ್ರದರ್ಶನ ನೀಡಿದ್ದರು.
2010 ಜನವರಿ 30 ರಂದು ಮಣಿಪುರದ ಮೈದಾನದಲ್ಲಿ  ನಡೆಯುತ್ತಿದ್ದ ಪಂದ್ಯಾಟದ ನಡುವಿನಲ್ಲಿ ತೀವ್ರವಾದ ಎದೆನೋವಿನಿಂದ ಕುಸಿದುಬಿದ್ದ ವಿಶ್ವ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ
ಫೆಬ್ರವರಿ 2 ರಂದು ನಿಧನರಾದರು.
ಅಗಲಿದ ದಿವ್ಯಾತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ರಾಜ್ಯ ಟೆನಿಸ್ ಕ್ರಿಕೆಟ್,ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್,ಸ್ಟಾರ್ ವರ್ಟೆಕ್ಸ್-Sportskannadatv ಮತ್ತು ಕನ್ನಡ ನಾಡಿನ ಸಮಸ್ತ ಕ್ರೀಡಾಪಟುಗಳು ಕ್ರೀಡಾಭಿಮಾನಿಗಳ ಪರವಾಗಿ ಪ್ರಾರ್ಥಿಸುತ್ತಿದ್ದೇವೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

fourteen + six =