
ಈಗಲ್ ಮೆರಿನ್ ಮುಲ್ಕಿ ಪ್ರಸ್ತುತಪಡಿಸುತ್ತಿದೆ – ರಾಷ್ಟ್ರೀಯ ಮಟ್ಟದ ಫ್ಲಡ್ ಲೈಟ್ ಓವರ್ ಆರ್ಮ್ ಕ್ರಿಕೆಟ್ ಟೂರ್ನಿ!
ಎಂ. ಮಿಥುನ್ ರೈ ಟ್ರೋಫಿ – 2025
By Suresh Bhat
Published: Friday October 10, 2025, 02:25 PM
ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ! ಮಂಗಳೂರು–ಉಡುಪಿ ಸಂಪರ್ಕ ಮಾರ್ಗದ ಮಧ್ಯಭಾಗ ಮುಲ್ಕಿ ಮತ್ತೊಮ್ಮೆ ಕ್ರಿಕೆಟ್ ಸಂಭ್ರಮಕ್ಕೆ ತಯಾರಾಗುತ್ತಿದೆ. ಈಗಲ್ ಮೆರಿನ್ ಮುಲ್ಕಿ ವತಿಯಿಂದ “ಎಂ. ಮಿಥುನ್ ರೈ ಟ್ರೋಫಿ – 2025” ರಾಷ್ಟ್ರೀಯ ಮಟ್ಟದ ಫ್ಲಡ್ ಲೈಟ್ ಓವರ್ ಆರ್ಮ್ ಕ್ರಿಕೆಟ್ ಟೂರ್ನಿಯು ಈ ನವೆಂಬರ್ 14, 15 ಹಾಗೂ 16ರಂದು ಮುಲ್ಕಿ ವಿಜಯಾ ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ.


ಟೂರ್ನಿಯ ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ. 3 ಲಕ್ಷ ನಗದು ಹಾಗೂ ಟ್ರೋಫಿ, ರನ್ನರ್ ಅಪ್ ತಂಡಕ್ಕೆ ರೂ. 1.5 ಲಕ್ಷ ನಗದು ಹಾಗೂ ಟ್ರೋಫಿ ನೀಡಲಾಗುತ್ತದೆ.
ಪ್ರತಿ ಪಂದ್ಯದಲ್ಲೂ ಮ್ಯಾನ್ ಆಫ್ ದಿ ಮ್ಯಾಚ್‌ಗೆ ಬೆಳ್ಳಿ ನಾಣ್ಯ, ಟೂರ್ನಿಯ ಮ್ಯಾನ್ ಆಫ್ ದಿ ಸೀರೀಸ್‌ಗೆ ರೂ. 10,000, ಹಾಗೂ ಶ್ರೇಷ್ಠ ಬ್ಯಾಟ್ಸ್‌ಮನ್, ಶ್ರೇಷ್ಠ ವಿಕೆಟ್ ಕೀಪರ್ ಮತ್ತು ಶ್ರೇಷ್ಠ ಬೌಲರ್‌ಗಳಿಗೆ ತಲಾ ರೂ. 5,000 ಬಹುಮಾನ ನೀಡಲಾಗುತ್ತದೆ.
ಫೈನಲ್ ಪಂದ್ಯದಲ್ಲಿ ಟಾಸ್ ಚಿನ್ನದ ನಾಣ್ಯದೊಂದಿಗೆ ನಡೆಯಲಿದೆ ಎಂಬುದು ವಿಶೇಷ.
ಟೂರ್ನಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ನಿರೀಕ್ಷಿತ್ – 9036605506
ಗೌರೀಶ್ ಆಚಾರ್ಯ – 9740412746
ದೀಪಕ್ – 9731618788





