
ದುಬೈ-ಫ್ರೈಡೇ-ಕ್ರಿಕೆಟ್ ಲೀಗ್;ಟೆಕ್ನೋ ಟೈಟಾನ್ಸ್ ಕ್ವಾರ್ಟರ್ ಫೈನಲಗೆ ತೇರ್ಗಡೆ.
ದುಬೈನಲ್ಲಿ ಜರಗುತ್ತಿರುವ ಅತ್ಯಂತ ಪ್ರತಿಷ್ಠಿತ ಫ್ರೈಡೇ ಕ್ರಿಕೆಟ್ ಲೀಗ್-9ರಲ್ಲಿ ಅವಿಭಜಿತ ದಕ್ಷಿಣಕನ್ನಡ ಮೂಲದ ಒಡೆತನ ಹೊಂದಿರುವ ಟೆಕ್ನೋ ಟೈಟಾನ್ಸ್ ಕ್ರಿಕೆಟ್ ತಂಡವು ಈಗಾಗಲೇ ಆಡಿದ ಎಂಟು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಭರ್ಜರಿಯಾಗಿ ಜಯಿಸಿ ಪ್ರೀ-ಕ್ವಾರ್ಟರ್ ಹಂತವನ್ನು ತಲುಪಿದೆ.ಮುಂದಿನ ಪಂದ್ಯದ ಜಯವು ತಂಡವನ್ನು ಸೆಮಿಫೈನಲಗೆ ತಲುಪಿಸುತ್ತದೆ.
ಟೆಕ್ನೋ ಟೈಟಾನ್ಸ್ ತಂಡವು ಉಡುಪಿಜಿಲ್ಲೆಯ ಸೂರಾಲಿನ ವಿಠಲ ರಿಷಾನ್ ನಾಯಕ್ ರವರ ನಾಯಕತ್ವ ಹಾಗೂ ಅಕದ್ ಅವರ ಉಪನಾಯಕತ್ವದಲ್ಲಿ ಕಣಕ್ಕೆ ಇಳಿದಿದೆ.ಉಳಿದಂತೆ ಅಬಿದ್,ಅಸ್ಮಾರ್,ನದೀಮ್,ಅಮಾನ್,ಓವೈಸಿ,ರಹೀಂ,ಅಲ್ಮಿನ್,ಅಶ್ರಫ್,ರಿಯಾಝ್,ದಾನಿಶ್,ರೆಹಾನ್,ಆಸೀಫ್,ನಿತಿನ್,ಶೇರ್ ಆಲಿ,ಆದಿಲ್,ತಲಾ ಅವರನ್ನು ಒಳಗೊಂಡಿರುವ ತಂಡಕ್ಕೆ ಮೇಲ್ವಿಚಾರಕರಾಗಿ ಜೀಶನ್,ಇಸ್ರಾರ್,ತನ್ವೀರ್ ಅವರು ಸಾಥ್ ನೀಡುತ್ತಿದ್ದಾರೆ.

ದುಬೈನ ಪ್ರತಿಷ್ಠಿತ ಹತ್ತು ತಂಡಗಳು ಈ ಕ್ರಿಕೆಟ್ ಪಂದ್ಯಾಕೂಟದಲ್ಲಿ ಭಾಗವಹಿಸುತ್ತಿದ್ದು ಟೆಕ್ನೋ ಟೈಟಾನ್ಸ್ ತಂಡವು ಈ ಪಂದ್ಯಾಕೂಟದಲ್ಲಿ ಅತ್ಯಂತ ಭರವಸೆಯ ತಂಡವಾಗಿ ಪ್ರದರ್ಶನ ನೀಡುತ್ತಿದೆ.ಫೆಬ್ರವರಿ ಮೊದಲ ವಾರದಲ್ಲಿ ಮುಂದಿನ ಪಂದ್ಯಗಳು ಜರಗಲಿವೆ.28 ಫೆಬ್ರವರಿಯಂದು ಫೈನಲ್ ಪಂದ್ಯವು ಯು.ಎ.ಯಿ ಅಜ್ಮಾನ ಮೈದಾನದಲ್ಲಿ ಜರಗಲಿದೆ.




