ಹೆಸರಾಂತ ಕ್ರೀಡಾ ಸರಕುಗಳ ಕಂಪನಿ ಡೆಕಾಥ್ಲಾನ್ ಮಂಗಳೂರು ಶಾಖೆಯು ತನ್ನ 5 ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಾ ಇದೆ. ಈ ಆಚರಣೆಯ ಸಂದರ್ಭದಲ್ಲಿ ಕಾರ್ಪೊರೇಟ್ ಕಂಪನಿಯ ಉದ್ಯೋಗಿಗಳಿಗೆ ”ಡೆಕಾಥ್ಲಾನ್ ಕಾರ್ಪೊರೇಟ್ ಚಾಂಪಿಯನ್‌ಶಿಪ್ 2023” ಎಂಬ ಶೀರ್ಷಿಕೆಯೊಂದಿಗೆ 5 ಕ್ರೀಡಾಕೂಟಗಳನ್ನು ಆಯೋಜಿಸಲಿದೆ. ಪ್ರತ್ಯೇಕವಾಗಿ ಕಾರ್ಪೊರೇಟ್ ವಲಯಕ್ಕೆ ಮಾತ್ರ ಸೀಮಿತವಾಗಿ ಬ್ಯಾಡ್ಮಿಂಟನ್, ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್ ಮತ್ತು ಸಾಫ್ಟ್ ಆರ್ಚರಿ (ಮೃದು ಬಿಲ್ಲುಗಾರಿಕೆ) ಸ್ಪರ್ಧೆಗಳನ್ನು ಆಯೋಜಿಸಿದೆ.
ಸ್ಪರ್ಧೆಗಳು 20 ಆಗಸ್ಟ್ 2023 ರಿಂದ 17 ಸೆಪ್ಟೆಂಬರ್ 2023 ರ ವರೆಗೆ ನಡೆಯಲಿದೆ. ವಿಜೇತರು ಅತ್ಯಾಕರ್ಷಕ ಟ್ರೋಫಿ ಮತ್ತು ಉಡುಗೊರೆ ವೋಚರ್‌ಗಳನ್ನು ಗೆಲ್ಲಲಿದ್ದಾರೆ.
ನೋಂದಣಿಗಾಗಿ ಮತ್ತು ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ ಸಂಖ್ಯೆ 9632479957ಗೆ ಕರೆ ಮಾಡಿ.
ಕ್ರೀಡೆಗಳು ಮತ್ತು ಮನರಂಜನೆಯು ಕೆಲಸ ಮತ್ತು ಆರೋಗ್ಯಕರ ಜೀವನದ ಸಮತೋಲನವನ್ನು ರಚಿಸಲು ಮುಖ್ಯವಾಗಿದೆ. ಕ್ರೀಡೆಗಳು ಮತ್ತು ಮನರಂಜನಾ ಚಟುವಟಿಕೆಗಳನ್ನು ಬೆಂಬಲಿಸುವುದು ಮತ್ತು ಉತ್ತೇಜಿಸುವುದು ನಿಜಕ್ಕೂ ಶ್ರೇಷ್ಠ. ಐದು ವರ್ಷಗಳ ಬೆಳವಣಿಗೆ ಮತ್ತು ಯಶಸ್ಸಿಗೆ ಅಭಿನಂದನೆಗಳು ಹಾಗೂ ಡೆಕಾಥ್ಲಾನ್ ಮಂಗಳೂರು ಶಾಖೆಗೆ ಸ್ಪೋರ್ಟ್ಸ್ ಕನ್ನಡ ವತಿಯಿಂದ 5 ನೇ ವಾರ್ಷಿಕೋತ್ಸವದ ಶುಭಾಶಯಗಳು!
-ಸುರೇಶ್ ಭಟ್, ಮುಲ್ಕಿ
ಸ್ಪೋರ್ಟ್ಸ್ ಕನ್ನಡ ವರದಿಗಾರ.
*ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನಲ್ ಗೆ ನಿಮ್ಮ ಬೆಂಬಲ ಮತ್ತು ಆಶೀರ್ವಾದ ಇರಲಿ. ಕಾರ್ಯಕ್ರಮಗಳ ನೇರ ಪ್ರಸಾರಕ್ಕಾಗಿ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನಲ್ ಅನ್ನು 6363022676-9632178537 ರಲ್ಲಿ ಸಂಪರ್ಕಿಸಿ.*