ಈ ಬಾರಿ ಬರಿಮಾರಿನಲ್ಲಿ ನಡೆಯುವ ವೈದಿಕ ಕ್ರೀಡೋತ್ಸವ ಕ್ರಿಕೆಟ್ ಪಂದ್ಯಾಟ 2024ರ ಜನವರಿ 20ರಿಂದ 21ರವರೆಗೆ ನಡೆಯಲಿದೆ ಎಂದು ವೈದಿಕ ಕ್ರೀಡೋತ್ಸವ ಸಮಿತಿ ಪ್ರಕಟಿಸಿದೆ.
ಗಮನಾರ್ಹವೆಂದರೆ, ವೈದಿಕ ಕ್ರೀಡೋತ್ಸವ ಸಮಿತಿಯು ಆಯೋಜನೆ ಮಾಡುವ ಈ ಬಾರಿಯ ಕ್ರಿಕೆಟ್ ಪಂದ್ಯಾವಳಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವಾಗಿದ್ದು ವೈದಿಕರ ವಿವಿಧ ತಂಡಗಳು ಪರಸ್ಪರ ಹಣಾಹಣಿ ನಡೆಸಲಿವೆ. ಈ ವೈದಿಕ ಕ್ರೀಡೋತ್ಸವ ಕ್ರಿಕೆಟ್ ಪಂದ್ಯಾಟಕ್ಕೆ ವೈದಿಕರ ಹೆಸರನ್ನು ನೋಂದಾಯಿಸುವ ಪ್ರಕ್ರಿಯೆಯು ದಿನಾಂಕ 28-09-2023 ನೇ ಗುರುವಾರ ಅನಂತ ಚತುರ್ದಶಿ ಯಂದು ಪ್ರಾರಂಭವಾಗಲಿದೆ. ಹೆಸರನ್ನು ನೋಂದಾಯಿಸುವವರು ಪ್ರವೇಶ ಶುಲ್ಕದ ಬಾಪ್ತು ರೂ. 1500 ನ್ನು ಸುಧೇಶ್ ಭಟ್ ಇವರ ನಂಬರ್ 8197536122 ಗೆ phone pay ಅಥವಾ google pay ಮುಖಾಂತರ ಕಳುಹಿಸಬೇಕು.
*ಕ್ರೀಡೋತ್ಸವ ನಡೆಯುವ ದಿನಾಂಕ 2024 ಜನವರಿ 20-21 (ದಶಮಿ – ಏಕಾದಶಿ) ಶನಿವಾರ ಮತ್ತು ಆದಿತ್ಯವಾರ.*
ವೈದಿಕ ಕ್ರೀಡೋತ್ಸವಕ್ಕೆ ಈಗಾಗಲೇ ಹಲವಾರು ವಿಧಗಳಲ್ಲಿ ತಯಾರಿ ನಡೆಯುತ್ತಿದ್ದು ಆಯಾಯಾ ವಿಚಾರಕ್ಕೆ ಸಂಬಂಧಿಸಿದಂತೆ (ಆಟ,ಕ್ರೀಡಾಂಗಣ, ಫಲಕ,ಬಹುಮಾನ ಇತ್ಯಾದಿ) ಎಲ್ಲಾ ವಿಷಯಗಳಿಗೂ ಅದರದ್ದೇ ಆದ ಕ್ರಮ ಪ್ರಕಾರ ಆಯೋಜನೆ ಮಾಡಲಾಗುತ್ತಿದೆ. ಪ್ರತಿಯೊಂದು ವಿಚಾರ ಸುಸೂತ್ರವಾಗಿ ನಡೆಯುವ ಸಲುವಾಗಿ ವೈದಿಕ ಕ್ರೀಡೋತ್ಸವ ಸಮಿತಿ ಇದರ ಜೊತೆ ಕೈ ಜೋಡಿಸಬೇಕಾಗಿ ಆಯೋಜಕರಲ್ಲಿ ಪ್ರಮುಖರಾದ ಪಂಡಿತ್ ಕಾಶೀನಾಥ ಆಚಾರ್ಯ ವಿನಂತಿಸಿದ್ದಾರೆ.
*ವೈದಿಕ ಕ್ರೀಡೋತ್ಸವ ಸಮಿತಿ ಆಶ್ರಯದಲ್ಲಿ ಬರಿಮಾರುವಿನಲ್ಲಿ ಶತಚಂಡಿಕಾ ಮಹಾ ಯಾಗ*
ವಿಶೇಷ ಎಂಬಂತೆ ಈ ಬಾರಿ ಇದೇ ಬರುವ 2024 ಜನವರಿ 19 ರಂದು ವೈದಿಕ ಸಮೂಹದಿಂದ ಶತಚಂಡಿಕಾ ಯಾಗ ನಡೆಯಲಿದ್ದು ವೈದಿಕ ಕ್ರೀಡೋತ್ಸವ ಸಮಿತಿ ಇದರ ಜವಾಬ್ದಾರಿ ವಹಿಸಿಕೊಳ್ಳಲಿದೆ. ಈ ಕಾರ್ಯಕ್ರಮ ಲೋಕಕಣ್ಯಾರ್ಥವಾಗಿ ವೈದಿಕರಿಂದಲೇ ಆಯೋಜಿಸಲ್ಪಟ್ಟಿದ್ದು ಕೊಂಕಣಿ ಭಾಷಿಗ ವೈದಿಕರು ಹೆಚ್ಚಿನ ಸಂಖ್ಯೆಯಲ್ಲಿ ಜೋಡಿಸಿಕೊಳ್ಳಬೇಕಾಗಿ ಸಮಿತಿಯ ಅಧ್ಯಕ್ಷರಾದ ಪಂಡಿತ್ ಕಾಶೀನಾಥ ಆಚಾರ್ಯ ಪ್ರಸ್ತಾಪಿಸಿದರು. ಇದಕ್ಕೆ ಬೇಕಾಗುವ ಪೂರ್ವ ತಯಾರಿ ಇನ್ನೇನು ಕೆಲವೇ ದಿನಗಳಲ್ಲಿ ನಡಯಲಿದ್ದು ಅದರ ಮಾಹಿತಿ ನೀಡಲಾಗುವುದು. ನಿಗದಿಯಾದ ದಿನಾಂಕ ಜನವರಿ 19 ನೋಟ್ ಮಾಡಿ ಇಟ್ಟುಕೊಳ್ಳಬೇಕಾಗಿ ವೈದಿಕ ಕ್ರೀಡೋತ್ಸವ ಸಮಿತಿ ಪರವಾಗಿ ಕೇಳಿಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗಳಿಗಾಗಿ ಪಂಡಿತ್ ಕಾಶೀನಾಥ ಆಚಾರ್ಯ, ವೈದಿಕ ಕ್ರೀಡೋತ್ಸವ ಸಮಿತಿ ಬರಿಮಾರು ( ದೂರವಾಣಿ ಸಂಖ್ಯೆ 9108242822) ಇವರನ್ನು ಸಂಪರ್ಕಿಸಬಹುದು.
– ಸುರೇಶ್ ಭಟ್ ಮುಲ್ಕಿ
(ಪಂಡಿತ್ ಕಾಶಿನಾಥ ಆಚಾರ್ಯ ಅವರು ಹಂಚಿಕೊಂಡ ಪೋಸ್ಟ್ )
ಕ್ರಿಕೆಟ್ ನ ಹೆಚ್ಚಿನ ಅಪ್ ಡೇಟ್ಸ್ ಗಾಗಿ ಸ್ಪೋರ್ಟ್ಸ್ ಕನ್ನಡ ವನ್ನು ಫಾಲೋ ಮಾಡಿ. ನೇರ ಪ್ರಸಾರಕ್ಕಾಗಿ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲನ್ನು ಸಂಪರ್ಕಿಸಿ: 6363022676-9632178537