Home ಕ್ರಿಕೆಟ್ ಗಂಗೊಳ್ಳಿಯಲ್ಲಿ “ಚಾರೋಡಿ ಮೇಸ್ತ ಟ್ರೋಫಿ–2026” ಕ್ರಿಕೆಟ್ ಪಂದ್ಯಾವಳಿ

ಗಂಗೊಳ್ಳಿಯಲ್ಲಿ “ಚಾರೋಡಿ ಮೇಸ್ತ ಟ್ರೋಫಿ–2026” ಕ್ರಿಕೆಟ್ ಪಂದ್ಯಾವಳಿ

ಗಂಗೊಳ್ಳಿಯಲ್ಲಿ “ಚಾರೋಡಿ ಮೇಸ್ತ ಟ್ರೋಫಿ–2026” ಕ್ರಿಕೆಟ್ ಪಂದ್ಯಾವಳಿ

ಗಂಗೊಳ್ಳಿಯಲ್ಲಿ “ಚಾರೋಡಿ ಮೇಸ್ತ ಟ್ರೋಫಿ–2026” ಕ್ರಿಕೆಟ್ ಹಬ್ಬ

ಬೆಣಗೆರೆ ಗುಜ್ಜಾಡಿಯ ಶ್ರೀ ಸುಬ್ರಹ್ಮಣ್ಯೇಶ್ವರ ಯೂತ್ ಕ್ಲಬ್‌ನ ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಲೈಟ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ “ಚಾರೋಡಿ ಮೇಸ್ತ ಟ್ರೋಫಿ–2026” ಅನ್ನು ಆಯೋಜಿಸಲಾಗಿದೆ. ಈ ಪ್ರತಿಷ್ಠಿತ ಟೂರ್ನಮೆಂಟ್ ಜನವರಿ 17 ಮತ್ತು 18, 2026ರಂದು ಗಂಗೊಳ್ಳಿಯ ಎಸ್.ವಿ. ಕಾಲೇಜು ಮೈದಾನದಲ್ಲಿ ನಡೆಯಲಿದೆ.

ರಾಜ್ಯದ ವಿವಿಧ ಭಾಗಗಳಿಂದ ಪ್ರತಿಭಾನ್ವಿತ ತಂಡಗಳು ಭಾಗವಹಿಸುವ ನಿರೀಕ್ಷೆಯಿರುವ ಈ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ.50,005 ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ಪ್ರದಾನ ಮಾಡಲಾಗುತ್ತದೆ. ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.30,003 ನಗದು ಬಹುಮಾನ ನೀಡಲಾಗುತ್ತದೆ.

ಒಟ್ಟು 6 ಓವರ್‌ಗಳ ಪಂದ್ಯಗಳೊಂದಿಗೆ ನಡೆಯುವ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸುವ ತಂಡಗಳು ಜನವರಿ 12, 2026ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ
ಪ್ರಜ್ವಲ್ – 7760005871,
ರಾಜೇಶ್ – 9611253077,
ಪ್ರದೀಪ್ – 9901958544
ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.

ಈ ಟೂರ್ನಮೆಂಟ್‌ನ ನೇರಪ್ರಸಾರವನ್ನು ಸ್ಪೋರ್ಟ್ಸ್ ಕನ್ನಡ ಲೈವ್ ಮೀಡಿಯಾ ಬಿತ್ತರಿಸಲಿದೆ.

LEAVE A REPLY

Please enter your comment!
Please enter your name here

eighteen + 15 =

ಗಂಗೊಳ್ಳಿಯಲ್ಲಿ “ಚಾರೋಡಿ ಮೇಸ್ತ ಟ್ರೋಫಿ–2026” ಕ್ರಿಕೆಟ್ ಪಂದ್ಯಾವಳಿ

ಗಂಗೊಳ್ಳಿಯಲ್ಲಿ “ಚಾರೋಡಿ ಮೇಸ್ತ ಟ್ರೋಫಿ–2026” ಕ್ರಿಕೆಟ್ ಹಬ್ಬ ಬೆಣಗೆರೆ ಗುಜ್ಜಾಡಿಯ ಶ್ರೀ ಸುಬ್ರಹ್ಮಣ್ಯೇಶ್ವರ ಯೂತ್ ಕ್ಲಬ್‌ನ ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಲೈಟ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ “ಚಾರೋಡಿ ಮೇಸ್ತ ಟ್ರೋಫಿ–2026” ಅನ್ನು ಆಯೋಜಿಸಲಾಗಿದೆ. ಈ ಪ್ರತಿಷ್ಠಿತ ಟೂರ್ನಮೆಂಟ್ ಜನವರಿ 17 ಮತ್ತು 18, 2026ರಂದು ಗಂಗೊಳ್ಳಿಯ ಎಸ್.ವಿ. ಕಾಲೇಜು ಮೈದಾನದಲ್ಲಿ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ ಪ್ರತಿಭಾನ್ವಿತ ತಂಡಗಳು ಭಾಗವಹಿಸುವ ನಿರೀಕ್ಷೆಯಿರುವ ಈ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ.50,005 ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ಪ್ರದಾನ ಮಾಡಲಾಗುತ್ತದೆ. ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.30,003 ನಗದು ಬಹುಮಾನ ನೀಡಲಾಗುತ್ತದೆ. ಒಟ್ಟು 6 ಓವರ್‌ಗಳ ಪಂದ್ಯಗಳೊಂದಿಗೆ ನಡೆಯುವ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸುವ ತಂಡಗಳು ಜನವರಿ 12, 2026ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಪ್ರಜ್ವಲ್ – 7760005871, ರಾಜೇಶ್ – 9611253077, ಪ್ರದೀಪ್ – 9901958544 ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.

Send this to a friend