
ಡಿ.7ರಂದು ಬದ್ರಿಯಾ ಪ್ರೀಮಿಯರ್ ಲೀಗ್ ಸೀಸನ್ 8 ಕ್ರಿಕೆಟ್ ಪಂದ್ಯಾಟ
ದುಬೈ: ‘ಬದ್ರಿಯಾ ಫ್ರೆಂಡ್ಸ್ ಯುಎಇ’ ಆಶ್ರಯದಲ್ಲಿ ಡಿಸೆಂಬರ್ 7ರಂದು ಶಾರ್ಜಾದ ಅಲ್ ಬತಾಯಿ ಬಿಸಿಸಿ ಕ್ರೀಡಾಂಗಣದಲ್ಲಿ ‘ಬದ್ರಿಯಾ ಪ್ರೀಮಿಯರ್ ಲೀಗ್ -ಸೀಸನ್ 8’ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.

ರಕ್ತದಾನ, ಅಶಕ್ತರಿಗೆ ಸಹಾಯ, ಹಲವು ಕ್ರೀಡಾಕೂಟ ಸೇರಿದಂತೆ ಯುಎಇಯಲ್ಲಿ ಹಲವಾರು ಸಾಮಾಜಿಕ ಕಾರ್ಯಗಳನ್ನು ನಡೆಸುತ್ತ ಬಂದಿರುವ ಪ್ರತಿಷ್ಠಿತ ‘ಬದ್ರಿಯಾ ಫ್ರೆಂಡ್ಸ್ ಯುಎಇ’, ತನ್ನ 8ನೇ ಸೀಸನ್’ನ ‘ಬದ್ರಿಯಾ ಪ್ರೀಮಿಯರ್ ಲೀಗ್’ನ್ನು ಅದ್ದೂರಿಯಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ‘ಬದ್ರಿಯಾ ಫ್ರೆಂಡ್ಸ್ ಯುಎಇ’ ಅಧ್ಯಕ್ಷ ಮುಹಮ್ಮದ್ ಆಶಿಕ್ ಅವರು, ಈ ಬಾರಿಯ ‘ಬದ್ರಿಯಾ ಪ್ರೀಮಿಯರ್ ಲೀಗ್-ಸೀಸನ್ 8’ರ ಟ್ರೋಫಿಯನ್ನು ಈಗಾಗಲೇ ಅನಾವರಣಗೊಳಿಸಲಾಗಿದೆ. ಈ ಬಾರಿ ವಿಶೇಷವಾಗಿ ‘ಸೀಸನ್ 8’ ನಡೆಯಲಿದೆ. ಅದಕ್ಕೆ ಬೇಕಾದ ಎಲ್ಲ ರೀತಿಯ ಸಕಲ ಸಿದ್ಧತೆಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಡಿಸೆಂಬರ್ 7ರ ರವಿವಾರದಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯ ವರಗೆ ಈ ಪಂದ್ಯಾಕೂಟ ನಡೆಯಲಿದ್ದು, ಯುಎಇಯ ಒಟ್ಟು ಐದು ಆಹ್ವಾನಿತ ಬಲಿಷ್ಠ ತಂಡಗಳು ಟ್ರೋಫಿಗಾಗಿ ಸೆಣಸಾಟ ನಡೆಸಲಿದೆ ಎಂದಿದ್ದಾರೆ.




