ಕುಂದಾಪುರ-ಇಲ್ಲಿನ ಮಣೂರು ಪರಿಸರದ ಸುಮಾರು 40 ಕ್ಕೂ ಅಧಿಕ ಉತ್ಸಾಹಿ ಯುವ ಗೆಳೆಯರು ಮರೆಯಲಾಗದ ಮಾಣಿಕ್ಯ ಪುನೀತ್ ರಾಜ್ ಕುಮಾರ್ ನಾಮಾಂಕಿತ ಸಂಸ್ಥೆಅಪ್ಪು ಅಟ್ಯಾಕರ್ಸ್ ಇವರ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಪಿನ್ ಕೋಡ್ ಮಾದರಿಯ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ರಾಜರತ್ನ ಟ್ರೋಫಿ-2024 ಆಯೋಜಿಸಲಾಗಿದೆ.
ಮಣೂರು ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿರುವ ನಡುಬೆಟ್ಟು ಮೈದಾನದಲ್ಲಿ ಹೊನಲು ಬೆಳಕಿನನಲ್ಲಿ ಸಾಗಲಿರುವ ಈ ಪಂದ್ಯಾಟದ ಪ್ರಥಮ ಬಹುಮಾನ 25,555 ರೂ,ದ್ವಿತೀಯ 17,777 ರೂ,ತೃತೀಯ 11,111 ರೂ ನಗದು ಸಹಿತ ಆಕರ್ಷಕ ಟ್ರೋಫಿ ಹಾಗೂ ಚತುರ್ಥ ಬಹುಮಾನ ಆಕರ್ಷಕ ಟ್ರೋಫಿ ನೀಡಲಾಗುತ್ತಿದೆ.
ಸಾಧಕರಿಗೆ ಸನ್ಮಾನ
ಸಭಾ ಕಾರ್ಯಕ್ರಮದ ಸಂದರ್ಭ ಗಡಿ ಕಾಯುವ ಸೈನಿಕ ಯೋಗೀಶ್ ಕಾಂಚನ್,ರಾಷ್ಟ್ರೀಯ ಮಟ್ಟದ
ಕ್ರೀಡಾಪಟುಗಳಾದ ಅಖಿಲೇಶ್ ಕೋಟ,ಪ್ರೇರಣಾ ಜೊತೆಗೆ ಹಿರಿಯ ಕ್ರೀಡಾಪಟು ವಸಂತ ಸುವರ್ಣ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು,
ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಿದ್ದಾರೆ.
ಮಾರ್ಚ್ 16 ಶನಿವಾರ ಸಂಜೆ 7 ಗಂಟೆಗೆ ಸರಿಯಾಗಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ರಾಜಕೀಯ ಧುರೀಣರು,ಉದ್ಯಮಿಗಳು ಹಾಗೂ ಗಣ್ಯಾತಿಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ.