5 C
London
Wednesday, April 24, 2024
Homeಕ್ರಿಕೆಟ್ಶಿಕ್ಷಣ ಕ್ಷೇತ್ರದ ತಾರೆಯರ ಸಾರಥ್ಯದಲ್ಲಿ ಮಿನುಗುತ್ತಿರುವ ಮಾಸ್ಟರ್ ಬ್ಲಾಸ್ಟರ್ ಕ್ರಿಕೆಟ್ ಕ್ಲಬ್,(ಎಮ್ ಬಿ ಸಿ ಸಿ)...

ಶಿಕ್ಷಣ ಕ್ಷೇತ್ರದ ತಾರೆಯರ ಸಾರಥ್ಯದಲ್ಲಿ ಮಿನುಗುತ್ತಿರುವ ಮಾಸ್ಟರ್ ಬ್ಲಾಸ್ಟರ್ ಕ್ರಿಕೆಟ್ ಕ್ಲಬ್,(ಎಮ್ ಬಿ ಸಿ ಸಿ) ಬೆಂಗಳೂರು

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಹಿರಿಯ ಮತ್ತು ಕಿರಿಯ ಕ್ರಿಕೆಟ್ ಆಟಗಾರರನ್ನು ಒಳಗೊಂಡಿರುವ ಬೆಂಗಳೂರಿನ ಪ್ರಸಿದ್ಧ ತಂಡ
ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಪ್ರಗತಿಪರ ಶೈಕ್ಷಣಿಕ ಕ್ಷೇತ್ರದ ಹರಿಕಾರರೆಂದೇ ಖ್ಯಾತಿ ಪಡೆದ                 ಶ್ರೀ ಕೆ. ಎಮ್.ನಾಗರಾಜ್ ರವರ ಮಾರ್ಗದರ್ಶನದಲ್ಲಿ ಅವರ ಸುಪುತ್ರ ಕಮ್ಯುನಿಟಿ ಸೆಂಟರ್ ಸಮೂಹ ಶಿಕ್ಷಣ ಸಂಸ್ಥೆಗಳು, ಜಯನಗರ, ಇದರ ಉಪಾಧ್ಯಕ್ಷರಾದ  ಶ್ರೀ ಹರೀಶ್ ಎನ್. ರವರು ದಿನಾಂಕ 26ನೇ ಜನವರಿ 2007ರಂದು ಬೆಂಗಳೂರಿನ ಜಯನಗರ 2ನೇ  ಬಡಾವಣೆಯಲ್ಲಿರುವ ಕನಕನಪಾಳ್ಯದಲ್ಲಿ ಎಂ.ಬಿ.ಸಿ.ಸಿ. ತಂಡವನ್ನು ಸ್ಥಾಪನೆ ಮಾಡಿದರು.
ಎಂ.ಬಿ.ಸಿ.ಸಿ.ತಂಡದ ಚೊಚ್ಚಲ ಆಟಗಾರರಾಗಿ ಸೇರ್ಪಡೆ ಗೊಂಡವರು:
1.ಕೆ ಎನ್ ರಾಘವೇಂದ್ರ  (ರಘು)
2.ಶ್ರೀನಿವಾಸ (ಸೀನ)
3.ಸುರೇಶ್ (ಸೂರಿ)
4.ಗಣೇಶ್ (ಗಣಿ)
5.ನಿತಿನ್ (ಗಾರೆ)
6.ಸಂದೀಪ್ (ಕೀನ್ಯ)
7.ಪ್ರವೀಣ್ (ತಂಬೂರಿ)
8.ರವಿ (ಬಸ್ಯ)
9.ಭರತ್ (ಭಟ್ಟ)
10.ವಿನಯ್ (ಲೊಡ್ಡೆ)
11. ಸುನಿಲ್ (ಸುನಿ)
12.ಕೇಶವ
13.ಹರೀಶ್ (ಹರಿ)
14.ಹರೀಶ್ ಎನ್.
ಎಮ್ ಬಿ ಸಿ ಸಿ ತಂಡವು ಭಾಗವಹಿಸಿದ್ದ ಪಂದ್ಯಾವಳಿಗಳು ಮತ್ತು ಸಾಧನೆಗಳು :
1. 2007 ಜನವರಿ ತಿಂಗಳಲ್ಲಿ  ಬಿಟಿಎಂ ಲೇಔಟ್ ಬೆಂಗಳೂರು ಇಲ್ಲಿ ನಡೆದ BTM CUP ಪಂದ್ಯದಲ್ಲಿ ಜೈ ಹಿಂದ್ (ಹುಳಿ ಮಾವು ಕುಮ್ಮೀಸ್) ತಂಡದ ವಿರುದ್ಧ ಗೆಲುವು ಸಾಧಿಸಿ ಪಡೆದ ನಗದು ಬಹುಮಾನ ರೂ. 10, 000/-.
2. 2007 ಫೆಬ್ರವರಿ ತಿಂಗಳ 4 ರಂದು ಸೆಂಟ್ರಲ್ ಕಾಲೇಜು ಕ್ರೀಡಾಂಗಣ ಬೆಂಗಳೂರು ಇಲ್ಲಿ ನಡೆದ COURT FIELD ಪಂದ್ಯದಲ್ಲಿ  Team Dolphins ಎದುರು ಗೆಲುವು ಸಾಧಿಸಿ ಪಡೆದ ನಗದು ಬಹುಮಾನ ರೂ. 10,000/-.
3. 2007 ರಲ್ಲಿ MBCC ಮಾಲೀಕರಾದ ಶ್ರೀ ಹರೀಶ್ ಎನ್ ಇವರ ನೇತೃತ್ವದಲ್ಲಿ ನ್ಯಾಶನಲ್ ಕಾಲೇಜು ಮೈದಾನ ಜಯನಗರ , ಬೆಂಗಳೂರು ಇಲ್ಲಿ ನಡೆದ ರಾಜ್ಯೋತ್ಸವ ಕಪ್ ಪಂದ್ಯದಲ್ಲಿ ನಾಶ್ ಕ್ರಿಕೆಟರ್ಸ್ ವಿರುದ್ಧ ರನ್ನರ್ ಅಪ್ ಸ್ಥಾನ ಗಳಿಸಿ ಪಡೆದ ನಗದು ಮೊತ್ತ 10,000/-.
4. 2007 ಡಿಸೆಂಬರ್ ತಿಂಗಳಲ್ಲಿ ಶ್ರೀ ಹರೀಶ್ ಎನ್ ಪ್ರಾಯೋಜಕತ್ವದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ ಜಯನಗರ, ಬೆಂಗಳೂರು ಇಲ್ಲಿ ನಡೆದ “ಸೂಪರ್ ಸಿಕ್ಸ್” ಪಂದ್ಯದಲ್ಲಿ ನ್ಯಾಶ್ ಕ್ರಿಕೆಟರ್ಸ್ ವಿರುದ್ಧ ರನ್ನರ್ ಅಪ್ ಸ್ಥಾನ ಗಳಿಸಿ ಪಡೆದ ನಗದು ಬಹುಮಾನ ರೂ. 5,000/-.
ಇಷ್ಟೆಲ್ಲಾ ಸಾಧನೆ, ಬಹುಮಾನ ಪಡೆದ MBCC ತಂಡವನ್ನು ಇನ್ನಷ್ಟು ಸುಭದ್ರ ಮತ್ತು ಬಲಶಾಲಿ ತಂಡವಾಗಿ ಮಾಡುವ ನಿಟ್ಟಿನಲ್ಲಿ ಒಂದಷ್ಟು ವರ್ಷಗಳ ಕಾಲ  ಯಾವುದೇ ಪಂದ್ಯದಲ್ಲಿ ಭಾಗವಹಿಸದೇ ಉಳಿಯಿತು.
ಮತ್ತೆ ಫೀನಿಕ್ಸ್ ಹಕ್ಕಿಯಂತೆ 2019 ರಲ್ಲಿ ಕೆ ಎಮ್ ನಾಗರಾಜ್ ಮತ್ತು ಹರೀಶ್ ಎನ್ ಇವರ ಮಾರ್ಗದರ್ಶನದಲ್ಲಿ ಪ್ರತಿಭಾವಂತ  ರಾಜ್ಯ ಮಟ್ಟದ ಯುವ ಆಟಗಾರರನ್ನು ಒಳಗೊಂಡ  “ಎಂ.ಬಿ.ಸಿ.ಸಿ.” ತಂಡವನ್ನು ಪುನರ್ ಸ್ಥಾಪಿಸಲಾಯಿತು
ಈ ನೂತನ ತಂಡದ ಆಟಗಾರರು :
1. ಖೈಜರ್ (ನಾಯಕ)
2. ಸುಧಾನ್ ಅಲೋಕ್ (ಮಧು)
3. ಅಝರ್
4. ಅಶೋಕ್
5.ಸುಜಯ್
6.ಸ್ವಸ್ತಿಕ್
7.ಸುಜಿತ್
8.ಅಲಿ
9. ಝೀಶನ್
10.ಶ್ರೀನಿವಾಸ್
11.ರಕ್ಷಿತ್
12.ಸಂದೀಪ್
13.ದೀಪು
14.ಕೇಶವ್
15.ರಿಯಾಝ್
16.ವಿಮಲ್
17.ಕಾರ್ತಿಕ್
18.ಚೇತನ್
19.ವಿಜಯ್
20.ವಿನೀಶ್.
2019-20 ರಲ್ಲಿ ‘ಎಮ್ ಬಿ ಸಿ ಸಿ’ ಯ ಸಾಧನೆಯ ವಿವರ ಹೀಗಿದೆ:
1.BEML ಕ್ರೀಡಾಂಗಣದಲ್ಲಿ ನಡೆದ MAYUR CUP ಪಂದ್ಯದಲ್ಲಿ STRICKERS ತಂಡದ ವಿರುದ್ಧ ಜಯ ಗಳಿಸಿ ಪಡೆದ ನಗದು ಬಹುಮಾನ ರೂ. 10,000/-.
2.ತೀರ್ಥಹಳ್ಳಿ ಯಲ್ಲಿ ನಡೆದ ಸೌಹಾರ್ದ ಕಪ್  ಪಂದ್ಯದಲ್ಲಿ ಜೈ ಕರ್ನಾಟಕ ವಿರುದ್ಧ ಆಡಿ ಮೂರನೇ ಸ್ಥಾನದ ಗಳಿಕೆ.
3. ಮೈಸೂರಿನಲ್ಲಿ ನಡೆದ ಡಾ. ಅಂಬೇಡ್ಕರ್ ಕಪ್ ಕ್ರಿಕೆಟ್ ಪಂದ್ಯದಲ್ಲಿ ಶ್ರೀ ರಾಮಾಂಜನೇಯ ಗುಡ್ಡೆ ಕೊಪ್ಪಳ ತಂಡದ ವಿರುದ್ಧ ಆಡಿ ರನ್ನರ್ ಅಪ್ ಸ್ಥಾನ ಪಡೆದು ಗಳಿಸಿದ ಬಹುಮಾನದ ಮೊತ್ತ ರೂ 1,00,000/-
4.ಬಂಗಾರಪೇಟೆಯಲ್ಲಿ ನಡೆದ EVERGREEN CRICKET TOURMENT ಅಲ್ಲಿ “EVERGREEN A” ತಂಡದ ವಿರುದ್ಧ ಆಡಿ ಜಯ ಗಳಿಸಿ ಪಡೆದ ನಗದು ಬಹುಮಾನದ ಮೊತ್ತ ರೂ 2,00,000/-.
5. ಕೆ. ಆರ್. ಪುರಂ. ನಲ್ಲಿ ನಡೆದ “THUNDERS CUP” ಪಂದ್ಯದಲ್ಲಿ NAGA XI ವಿರುದ್ಧ ಆಡಿ ಜಯ ಗಳಿಸಿ ಪಡೆದ ನಗದು ಬಹುಮಾನದ ಮೊತ್ತ ರೂ 50,000/-.
6. ವೈಟ್ ಫೀಲ್ಡ್ ಬೆಂಗಳೂರು ಇಲ್ಲಿ ನಡೆದ ಪಂದ್ಯದಲ್ಲಿ FASH CRICKETERS ವಿರುದ್ಧ ಪಂದ್ಯದಲ್ಲಿ ಜಯ ಸಾಧಿಸಿ “WHITE FIELD THUNDER CUP” ಪ್ರಶಸ್ತಿ ಜೊತೆಗೆ ಪಡೆದ ನಗದು ಬಹುಮಾನದ ಮೊತ್ತ ರೂ. 40,000/-.
7. DECATHLON BANGALORE ಇವರ ನೇತೃತ್ವದಲ್ಲಿ ನಡೆದ “COOLULU CUP” ಪಂದ್ಯದಲ್ಲಿ NASH CRICKETERS ವಿರುದ್ಧ ಆಡಿ ರನ್ನರ್ ಅಪ್ ಸ್ಥಾನ ಗಳಿಸಿ, ಪಡೆದ ನಗದು ಬಹುಮಾನದ ಮೊತ್ತ     ರೂ 35,000/-.
8.ಚಿಕ್ಕ ಬಳ್ಳಾಪುರದಲ್ಲಿ ನಡೆದ ಪಂದ್ಯದಲ್ಲಿ, ಪ್ರಾಯೋಜಕ ತಂಡದ ವಿರುದ್ಧ ಆಡಿ ಜಯ ಸಾಧಿಸಿ ಪಡೆದ ನಗದು ಬಹುಮಾನದ ಮೊತ್ತ ರೂ 50,000/-.
9 . ಜಯನಗರ 3ನೇ ಬಡಾವಣೆಯ್ಲಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ನಡೆದ “ರಾಜ್ಯೋತ್ಸವ ಕಪ್-2019″ರಲ್ಲಿ ಭಾಗವಹಿಸಿ  FRIENDS XI ವಿರುದ್ಧ ಆಡಿ ರನ್ನರ್ ಅಪ್ ಸ್ಥಾನ ಗಳಿಸಿ, ಪಡೆದ ನಗದು ಬಹುಮಾನದ ಮೊತ್ತ ರೂ 25,000/-.
10. ಬೆಂಗಳೂರಿನ ಜಯನಗರ 3ನೇ ಬಡಾವಣೆಯ್ಲಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ನಡೆದ “ರಾಜ್ಯೋತ್ಸವ ಕಪ್-2019″ರಲ್ಲಿ ಭಾಗವಹಿಸಿ  BLUE STAR ವಿರುದ್ಧ ಜಯ ಗಳಿಸಿ, ಪಡೆದ ನಗದು ಬಹುಮಾನದ ಮೊತ್ತ     ರೂ 20,000/-.
11. ಬೆಂಗಳೂರಿನ ಜಯನಗರದ ಶಾಲಿನಿ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾಗವಹಿಸಿ BLUE STAR ವಿರುದ್ಧ ಜಯ ಗಳಿಸಿ, ಪಡೆದ ನಗದು ಬಹುಮಾನದ ಮೊತ್ತ ರೂ 20,000/-.
12. ಬೆಂಗಳೂರಿನ ಯಲಹಂಕದಲ್ಲಿ  ನಡೆದ ರಲ್ಲಿ  ROCKERS CUP – 2019 ರಲ್ಲಿ ಭಾಗವಹಿಸಿ “ಜಯಕರ್ನಾಟಕ” ತಂಡದ ವಿರುದ್ಧ  ಆಡಿ ರನ್ನರ್ ಅಪ್ ಸ್ಥಾನ ಗಳಿಸಿ, ಪಡೆದ ನಗದು ಬಹುಮಾನದ ಮೊತ್ತ     ರೂ 50,000/-.
13. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ NASH TROPHY-2020 ರಲ್ಲಿ ಭಾಗವಹಿಸಿ MIGHTY BANGALORE   ತಂಡದ ವಿರುದ್ಧ  ಆಡಿ ರನ್ನರ್ ಅಪ್ ಸ್ಥಾನ ಗಳಿಸಿ, ಪಡೆದ ನಗದು ಬಹುಮಾನದ ಮೊತ್ತ ರೂ 1,00,000/-.
14 . ಬೆಂಗಳೂರಿನ ಆರ್.ಟಿ.ನಗರದಲ್ಲಿ ನಡೆದ “ಡಾ. ವಿಷ್ಣುವರ್ಧನ್ ಕಪ್ 2020″ರಲ್ಲಿ ಭಾಗವಹಿಸಿ BLUE STAR ವಿರುದ್ಧ ರನ್ನರ್ ಅಪ್ ಸ್ಥಾನ ಗಳಿಸಿ, ಪಡೆದ ನಗದು ಬಹುಮಾನದ ಮೊತ್ತ ರೂ 60,000/-.
MBCC ಯು ಮತ್ತೊಂದು ಕಿರಿಯ ಆಟಗಾರನ್ನು ಒಳಗೊಂಡ ವಿಶೇಷ ಕ್ರಿಕೆಟ್ ತಂಡವನ್ನು ಹೊಂದಿದ್ದು ಅದು “BEST XI” ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ .  ‘ಬೆಸ್ಟ್ ಇಲೆವೆನ್’ ಸಹ ಬಸವನಗುಡಿ ಸುತ್ತಮುತ್ತಲಿನ ಹಳೆಯ ಮತ್ತು ಉತ್ತಮ ಮಾನ್ಯತೆ ಪಡೆದ ತಂಡವಾಗಿದ್ದು, ಇದನ್ನು 1995 ರಲ್ಲಿ ಅದೇ ಸ್ಥಳೀಯ ಯುವಕರಿಂದ ಪ್ರಾರಂಭಿಸಲಾಯಿತು.
ಹಳೆಯ “BEST XI” ತಂಡದ ಆಟಗಾರರು :
ಕೆ.ಎನ್.ರಾಘವೇಂದ್ರ (ರಘು) – ನಾಯಕ
ಹೆಚ್.ಎಸ್. ಚಂದ್ರಶೇಖರ್ (ಶೇಕಿ)
ಸುರೇಶ ಎನ್.
ಕೆ.ಎನ್.ಮುರಳೀಧರ್
ಕೆ.ಆರ್. ರಮೇಶ್
ಕೆ.ಜಿ.ರಾಮ್ ಕುಮಾರ್
ಕೆ. ಸತೀಶ್
ಪ್ರದೀಪ್
ಕೆ.ಜಿ. ರಾಮಚಂದ್ರ
ಡಿ. ಶಿವಕುಮಾರ್
ಕೆ.ಸಿ. ಸೋಮಶೇಖರ್
ರಾಘವೇಂದ್ರ
ನಂದಕುಮಾರ್
ಈಗ ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಯುವ ಆಟಗಾರರನ್ನು ಸೇರಿಸಿ ಸುಧಾರಿತ ಬೆಸ್ಟ್ ಇಲೆವೆನ್  ತಂಡವು ಶ್ರೀ ಹರೀಶ್ ಎನ್.ರವರ ಮಾರ್ಗದರ್ಶನದಲ್ಲಿ  ರೂಪಿತಗೊಂಡಿದೆ. ಈ ತಂಡದ ಹೆಚ್ಚಿನ ಯುವ ಆಟಗಾರರು “ದಿ ಕಮ್ಯುನಿಟಿ ಸೆಂಟರ್ ಸಮೂಹ ಶಿಕ್ಷಣ ಸಂಸ್ಥೆಗಳು”, ಜಯನಗರ, ಬೆಂಗಳೂರು, ಇಲ್ಲಿನ ವಿದ್ಯಾರ್ಥಿಗಳಾಗಿದ್ದಾರೆ.
ಈ ಹೊಸ ‘ಬೆಸ್ಟ್ ಇಲೆವೆನ್’ ತಂಡದಲ್ಲಿ ಇರುವ ಆಟಗಾರರು :
1.ಜಯಂತ್ (ನಾಯಕ)
2. ಚೇತನ್
3.ಯಶವಂತ್
4.ರಾಕೇಶ್
5.ವರುಣ್
6.ಶೇಖರ್
7.ಸಲ್ಮಾನ್
8.ಶ್ರೇಯಸ್
9.ರಾಕೇಶ್. ಕೆ
10. ರಂಜಿತ್
11.ಸತೀಶ್
12.ಪ್ರದೀಪ್
13.ನಯನ್
14.ಭಾನು
15.ಶಂಕರ್
16.ಬಸವ
17.ಮಧು.
ಶ್ರೀಯುತ ಹರೀಶ್ ಎನ್ ಉಪಾಧ್ಯಕ್ಷರು, ಕಮ್ಯುನಿಟಿ ಸೆಂಟರ್ ಗ್ರೂಪ್ ಆಫ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ ಜಯನಗರ ಬೆಂಗಳೂರು ಇವರ ಮುಂದಾಳುತ್ವದಲ್ಲಿ ಇರುವ ಕಾಲೇಜಿನ ತಂಡವು 2019 ರಲ್ಲಿ ಬೆಂಗಳೂರಿನಲ್ಲಿ ನಡೆದ ಎಲ್ಲಾ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಗೆಲುವನ್ನು ತನ್ನದಾಗಿಸಿಕೊಂಡಿದೆ ಅನ್ನುವುದು ಹೆಮ್ಮೆಯ ಸಂಗತಿ. ಅಲ್ಲದೆ ಹರೀಶ್ ಎನ್ ಇವರು 2007 ರಿಂದ 2019 ರ ವರೆಗೆ ಜಯನಗರದ ಎರಡನೆಯ ಬ್ಲಾಕ್ ನ ನಿವಾಸಿಗಳಿಗೆಂದೇ ಹಲವಾರು ಕ್ರಿಕೆಟ್ ಪಂದ್ಯಗಳನ್ನು ನಡೆಸುತ್ತಾ ಬಂದಿರುವುದು ವಿಶೇಷ. ಅವುಗಳಲ್ಲಿ ಪ್ರಮುಖ ಪಂದ್ಯಗಳು: 2007 ರಿಂದ  2012 ರ ವರೆಗೆ ಪ್ರತಿ ವರ್ಷ ನ್ಯಾಶನಲ್ ಕಾಲೇಜು ಮೈದಾನ, ಬೆಂಗಳೂರು ಇಲ್ಲಿ ನಡೆದ ರಾಹುಲ್ ಗಾಂಧಿ ಕ್ರಿಕೆಟ್ ಟೂರ್ನ್ ಮೆಂಟ್.
2019 ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ ಜಯನಗರ ಬೆಂಗಳೂರು ಇಲ್ಲಿ ನಡೆದ 10 ರಿಂದ 16 ವರ್ಷ ವಯಸ್ಸಿನ ಕಿರಿಯ ವಿಭಾಗದ ಮತ್ತು 17 ರಿಂದ 50 ವರ್ಷ ವಯಸ್ಸಿನ ಹಿರಿಯರ ವಿಭಾಗದಲ್ಲಿ ನಡೆದ ರಾಜ್ಯೋತ್ಸವ ಕಪ್ ಕ್ರಿಕೆಟ್ ಟೂರ್ನಿ ಮೆಂಟ್.ನಡೆಸಿ ಮೆಚ್ಚುಗೆ ಗಳಿಸಿದೆ.
ಕಮ್ಯುನಿಟಿ ಸೆಂಟರ್ ಗ್ರೂಪ್ ಆಫ್ ಎಜುಕೇಷನಲ್ ಇನ್ಸ್ಟಿಟ್ಯೂಷನ್, ಜಯನಗರ,  ಬೆಂಗಳೂರು, ಈ ಶಿಕ್ಷಣ ಸಂಸ್ಥೆಯು 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ  ಶ್ರೀ ಹರೀಶ್ ಎನ್.ರವರ ಮಾರ್ಗದರ್ಶನದಲ್ಲಿ ಬೆಂಗಳೂರಿನ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಉಚಿತ ಪ್ರವೇಶಾತಿಯೊಂದಿಗೆ ಅಂತರ್ಕಾಲೇಜು ಮಟ್ಟದಲ್ಲಿ ಪಂದ್ಯಾಟ ನಡೆಸಿದ್ದು ಸ್ವಾಗತಾರ್ಹ.
ಒಂದು ತಂಡದ ರೂವಾರಿಯಾಗಿ ಶಿಕ್ಷಣ ಕ್ಷೇತ್ರಕ್ಕೆ ಸಲಹೆಗಾರರಾಗಿ ಇಡೀ ತಂಡವನ್ನು ಗೆಲುವಿನ ಹಾದಿಯಲ್ಲಿ ಸಾಗಿಸುತ್ತ, ಅನೇಕ ಪಂದ್ಯಾವಳಿಗಳಿಗೆ ಪ್ರಾಯೋಜಕರಾಗಿ ಸಲಹುತ್ತಿರುವ ಮಹಾನ್ ಚೇತನ                        ಕೆ.ಎಮ್.ನಾಗರಾಜ್ ರವರು ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದು, ಅಶೋಕ ನಗರ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಬೆಂಗಳೂರು, ಕಮ್ಯುನಿಟಿ ಸೆಂಟರ್ ಸಮೂಹ ಶಿಕ್ಷಣ ಸಂಸ್ಥೆಗಳು, ಜಯನಗರ, ಕಮಲ ನೆಹರು ಮಕ್ಕಳ ಮಂದಿರ ಎಜ್ಯುಕೇಶನಲ್ ಸೊಸೈಟಿ, ಬೆಂಗಳೂರು, ಶ್ರೀ ಪಟಾಲಮ್ಮ ದೇವಸ್ಥಾನ, ಜಯನಗರ ಬೆಂಗಳೂರು,     ಶ್ರೀ ಕೃಷ್ಣ ಹಳ್ಳಿಕರ ಮಹಾ ಸಂಸ್ಥಾನದ ಟ್ರಸ್ಟ್, ದೇವಸ್ಥಾನಗಳ ಅಭಿವೃದ್ಧಿ ಸಂಘ, ಬೆಂಗಳೂರು, ಬೆಂಗಳೂರು ಸಿಟಿ ಶ್ರೀ ಅಯ್ಯಪ್ಪ ಸೇವಾ ಸಮಿತಿ ಬೆಂಗಳೂರು, ಎಚ್. ಬಿ. ಸಮಾಜ, ಬೆಂಗಳೂರು ಈ ಸಂಸ್ಥೆಗಳ ಅಧ್ಯಕ್ಷರಾಗಿ, ಇದರ ಜೊತೆಗೆ ರಾಜ್ಯ ಧಾರ್ಮಿಕ ಪರಿಷತ್ ಕರ್ನಾಟಕ ರಾಜ್ಯ ಸರಕಾರದ ಮಾಜಿ ಸದಸ್ಯರು ಅಲ್ಲದೆ ಹಲವಾರು ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಮಂಡಳಿಯ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿದ ಇವರು ಸ್ವತಃ ಒಬ್ಬ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರು.ಬೆಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಇವರು ರಾಷ್ಟ್ರೀಯ ಸೇವಾ ಯೋಜನೆಯ ಕ್ಯಾಂಪ್ ನಲ್ಲಿ  ವಿದ್ಯಾರ್ಥಿ ಪ್ರತಿನಿಧಿ ಆಗಿ ಭಾಗವಹಿಸಿದ್ದರು.ಅಂತರ್ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯನ್ನು ಸಂಘಟಿಸಿದ್ದ ಕೀರ್ತಿ ನಾಗರಾಜ್ ಅವರದ್ದು.
ಅನೇಕ ಕಲಾಪಗಳನ್ನು ಪ್ರತಿನಿಧಿಸಿದ ಇವರು ಮಾಸ್ಕೋ ದಲ್ಲಿ ನಡೆದ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು Friends of Soviet Union ವತಿಯಿಂದ ಆಯ್ಕೆಗೊಂಡ ಹೆಮ್ಮೆಯ ಕನ್ನಡಿಗ ಎಂಬುವುದು ಹೆಮ್ಮೆಯ ವಿಷಯ.
ಬದುಕಿನಲ್ಲಿ ನಿಶ್ಚಿತ ಗುರಿಯನ್ನು ಇಟ್ಟುಕೊಂಡು ಅನೇಕ ಸಂಸ್ಥೆಗಳಿಗೆ ಮಾದರಿಯಾಗಿ ನಿಂತಿರುವ ಹರೀಶ್ ಎನ್. ಇವರು ಕೆ.ಎಮ್.ನಾಗರಾಜ್ ಅವರ ಹೆಮ್ಮೆಯ ಸುಪುತ್ರ. ತಂದೆಯ ಜೊತೆಗೆ ಅವರ ಕನಸು ನನಸಾಗಿಸುವಲ್ಲಿ ಸದಾ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುತ್ತಿರುವ ಶ್ರಮಜೀವಿ. ತಂದೆಯ ಜೊತೆಗೆ ಶಿಕ್ಷಣ ಸಂಸ್ಥೆಯ ಜವಾಬ್ದಾರಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊರಟಿರುವ ಒಬ್ಬ ಸಾಧಕ.
ಕನಸು ಎಲ್ಲರೂ ಕಾಣುತ್ತಾರೆ. ಆದರೆ ಕಟ್ಟಿದ ಕನಸನ್ನು ನನಸು ಮಾಡುವುದು ಸಾಧಕರು ಮಾತ್ರ, ಎಂಬಂತೆ ಕ್ರಿಕೆಟ್ ತಂಡವನ್ನು ಸಾಧನೆಯ ಹಾದಿಯಲ್ಲಿ ಸಾಗಿಸುತ್ತಾ ಶಿಕ್ಷಣ ಕ್ಷೇತ್ರದಲ್ಲಿಯೂ ಬಹು ಎತ್ತರಕ್ಕೆ ಸಾಗುತ್ತಿರುವ ಇವರ ಕನಸು ನನಸಾಗಲಿ.
ವೈಯಕ್ತಿಕ ಪ್ರಗತಿ ಮತ್ತು ನಾಯಕತ್ವದ ಪ್ರಗತಿಗೆ ಉತ್ತಮವೆಂದು ಪರಿಗಣಿತವಾದ ಎಲ್ಲಾ ಅಂಶಗಳನ್ನು, ಉನ್ನತ ಆದರ್ಶಗಳನ್ನು, ಮೌಲ್ಯಗಳನ್ನು, ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು ಹಲವಾರು ಪ್ರಗತಿಪರ ಕಾರ್ಯಗಳಿಗೆ ಕಾರಣೀಭೂತರಾದ ಇವರಿಗೆ
ದೇವರು ಒಳ್ಳೆಯದು ಮಾಡಲಿ ಇದು ನಮ್ಮೆಲ್ಲರ ಪ್ರಾಂಜಲ ಪ್ರಾರ್ಥನೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

eight − four =