ಕ್ರಿಕೆಟ್ಅಮ್ಗೆಲೆ ಅಭರಣ್ ಜಿಪಿಎಲ್ ಉತ್ಸವ್ ಸೀಸನ್–10ರ ಅಂಗವಾಗಿ ಜರ್ಸಿ ಬಿಡುಗಡೆ ಕಾರ್ಯಕ್ರಮ...

ಅಮ್ಗೆಲೆ ಅಭರಣ್ ಜಿಪಿಎಲ್ ಉತ್ಸವ್ ಸೀಸನ್–10ರ ಅಂಗವಾಗಿ ಜರ್ಸಿ ಬಿಡುಗಡೆ ಕಾರ್ಯಕ್ರಮ ಏಪ್ರಿಲ್ 6ರಂದು

-

- Advertisment -spot_img

ಅಮ್ಗೆಲೆ ಅಭರಣ್ ಜಿಪಿಎಲ್ ಉತ್ಸವ್ ಸೀಸನ್–10ರ ಅಂಗವಾಗಿ ಜರ್ಸಿ ಬಿಡುಗಡೆ ಕಾರ್ಯಕ್ರಮ ಏಪ್ರಿಲ್ 6ರಂದು

ಮಂಗಳೂರು, ಏಪ್ರಿಲ್ 5: ಜಿಎಸ್‌ಬಿ ಕ್ರೀಡಾಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಮೂಡಿಸಿರುವ *ಜಿಪಿಎಲ್ ಉತ್ಸವ್ 2026 (Season 10)* ಅಂಗವಾಗಿ ಜರ್ಸಿ ಬಿಡುಗಡೆ ಮತ್ತು ಸ್ವಯಂಸೇವಕರ (Volunteers) ಮೀಟ್ ಕಾರ್ಯಕ್ರಮವನ್ನು ಏಪ್ರಿಲ್ 6ರಂದು ಆಯೋಜಿಸಲಾಗಿದೆ.

ಈ ಕಾರ್ಯಕ್ರಮವು ಸೋಮವಾರ ಸಂಜೆ 6 ಗಂಟೆಯಿಂದ ಮಂಗಳೂರಿನ ಬಜಿಲಕೇರಿ ಪ್ರದೇಶದಲ್ಲಿರುವ ಶ್ರೀಮತಿ ಭಾರತಿ ಭಾಸ್ಕರ್ ಶೆಣೈ ಆಕ್ಟಿವಿಟಿ ಸೆಂಟರ್, ಸೇವಾಂಜಲಿ ಅರೇನಾ ದಲ್ಲಿ ನಡೆಯಲಿದೆ.

ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಷನ್ ಮತ್ತು ಯೂತ್ ಆಫ್ ಜಿಎಸ್ಬಿ ವರ್ಲ್ಡ್‌ವೈಡ್ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. “ಅಭರಣ್ – ದಿ ಒರಿಜಿನಲ್” ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಈ ಉತ್ಸವವು ಕ್ರೀಡೆ, ಸಂಸ್ಕೃತಿ ಮತ್ತು ಸಮಾಜಸೇವೆಯ ಸಮ್ಮಿಳನವಾಗಿದ್ದು, ಕಳೆದ ಹಲವು ವರ್ಷಗಳಿಂದ ಯಶಸ್ವಿಯಾಗಿ ಆಯೋಜನೆಗೊಂಡಿದೆ.

ಈ ಬಾರಿ ಸೀಸನ್–10 ವಿಶೇಷತೆಯೊಂದಿಗೆ ಬರುತ್ತಿದ್ದು, ಜರ್ಸಿ ಬಿಡುಗಡೆ ಕಾರ್ಯಕ್ರಮದ ಮೂಲಕ ಹಾಗೂ ಸ್ವಯಂಸೇವಕರಿಗೆ ಜವಾಬ್ದಾರಿ ಯನ್ನು ಸಲ್ಲಿಸುವುದರ ಜೊತೆಗೆ, ಮುಂದಿನ ಕಾರ್ಯಕ್ರಮಗಳ ಸಿದ್ಧತೆಗೆ ಚಾಲನೆ ನೀಡಲಾಗುತ್ತದೆ.

ಅಭರಣ ಜಿಪಿಎಲ್ ಉತ್ಸವ 2026 (GPL UTSAV 2026) ಆರಂಭದ ಸಂಕೇತವಾಗಿ ಸ್ವಯಂಸೇವಕರ ಸಭೆ ಹಾಗೂ ಜರ್ಸಿ ಅನಾವರಣ ಈ ವಿಶೇಷ ಕಾರ್ಯಕ್ರಮವು ಸಂಜೆ 6 ಗಂಟೆಗೆ ಸ್ವಯಂಸೇವಕರ ಸಭೆ ಆರಂಭವಾಗಲಿದ್ದು, ನಂತರ ಸಂಜೆ 7 ಗಂಟೆಗೆ ಟೂರ್ನಿಯ ಅಧಿಕೃತ ಜರ್ಸಿಯ ಅನಾವರಣ ನಡೆಯಲಿದೆ.

ಟೂರ್ನಿಯ ಯಶಸ್ಸಿಗೆ ಪ್ರಮುಖ ಪಾತ್ರವಹಿಸುವ ಸ್ವಯಂಸೇವಕರು, ತಂಡದ ಮಾಲೀಕರು ಹಾಗೂ ಆಟಗಾರರನ್ನು ಈ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಲಾಗಿದೆ. ಈ ಕೂಟವು ಕೇವಲ ಜರ್ಸಿ ಅನಾವರಣವಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ನಡೆಯಲಿರುವ ಟೂರ್ನಿಯ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡುವ ಮಹತ್ವದ ವೇದಿಕೆಯಾಗಿದೆ.

ಆಯೋಜಕರು ತಿಳಿಸಿರುವಂತೆ, ಈ ಸಂದರ್ಭವು ಎಲ್ಲರಲ್ಲೂ ತಂಡದ ಆತ್ಮೀಯತೆ, ಉತ್ಸಾಹ ಹಾಗೂ ಸ್ಪೂರ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಜಿಪಿಎಲ್ ಉತ್ಸವ 2026ನ್ನು ಯಶಸ್ವಿಯಾಗಿ ನಡೆಸಲು ಅಗತ್ಯವಾದ ಸಿದ್ಧತೆಗಳಿಗೆ ಪ್ರೇರಣೆ ನೀಡಲಿದೆ.

ಆದ್ದರಿಂದ ಎಲ್ಲಾ ಸ್ವಯಂಸೇವಕರು, ತಂಡದ ಮಾಲೀಕರು ಮತ್ತು ಆಟಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಈ ಕ್ರೀಡಾ ಹಬ್ಬವನ್ನು ಭವ್ಯ ಯಶಸ್ಸಿನತ್ತ ಕೊಂಡೊಯ್ಯಲು ಸಹಕರಿಸುವಂತೆ ವಿನಂತಿಸಲಾಗಿದೆ.

ಸಂಸ್ಥೆಯ ಪ್ರತಿನಿಧಿಗಳು ತಿಳಿಸಿರುವಂತೆ, ಈ ಉತ್ಸವವು ಯುವಕರಲ್ಲಿ ಕ್ರೀಡಾಸಕ್ತಿ ಬೆಳೆಸುವುದರ ಜೊತೆಗೆ, ಸಮಾಜದ ಏಕತೆ ಮತ್ತು ಸಹಕಾರ ಮನೋಭಾವವನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.

LEAVE A REPLY

Please enter your comment!
Please enter your name here

four × four =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you